ರಾಜಧಾನಿಯಲ್ಲಿ ಸದ್ದಿಲ್ಲದೇ ಎಂಟ್ರಿ ಕೊಡ್ತಿದೆ ಡೆಡ್ಲಿ ವೈರಸ್; ಈ ವಾರ್ಡ್ಗಳ ಕಡೆ ಹೋಗುವ ಮುನ್ನ ಇರಲಿ ಎಚ್ಚರ
ಬೆಂಗಳೂರು: ರಾಜಧಾನಿಯಲ್ಲಿ ಡೆಡ್ಲಿ ವೈರಸ್ ಕೊರೊನಾ ಸದ್ದಿಲ್ಲದೇ ಎಂಟ್ರಿ ಕೊಡ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯಗಳು ಏರುತ್ತಿವೆ. ಈ ಮಧ್ಯೆ, ನಿನ್ನೆಯಿಂದಲೇ ಜಾರಿಗೆಗೊಳಿಸಿ ಆಗಸ್ಟ್ 16ರವರೆಗೂ ಹೊಸ ಮಾರ್ಗಸೂಚಿ ಅನ್ವಯ (Corona Guidelines) ರಾತ್ರಿ 9 ಗಂಟೆಯಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ. ಬೆಂಗಳೂರಿನಲ್ಲಿ ಮೂವರಿಗೆ ಡೆಲ್ಟಾ ಪ್ಲಸ್ ಕೊರೊನಾ ದೃಢಪಟ್ಟಿದೆ. ಬೊಮ್ಮನಹಳ್ಳಿಯ 29 ವರ್ಷದ ವ್ಯಕ್ತಿಗೆ ಡೆಲ್ಟಾ ಪ್ಲಸ್ ದೃಢ ಪಟ್ಟಿದೆ. ಆದರೆ ಆತ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಜುಲೈ 14ರಂದು ಆ ವ್ಯಕ್ತಿಗೆ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿತ್ತು. ಮತ್ತಿಬ್ಬರು ಸೋಂಕಿತರು ನಂದಿನಿ ಲೇಔಟ್‌ನಲ್ಲಿದ್ದಾರೆ.
ರಾಜಧಾನಿಯಲ್ಲಿ ಬಿಬಿಎಂಪಿ ವಲಯದಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 162 ಕ್ಕೆ ಏರಿಕೆಯಾಗಿದೆ. ಮಹದೇವಪುರ, ಬೆಂಗಳೂರು ಪೂರ್ವ, ಬೊಮ್ಮನಹಳ್ಳಿಯಲ್ಲಿ ಹೆಚ್ಚು ಸೋಂಕು ಕಾಡುತ್ತಿದೆ. ಕಳೆದ ವಾರ ಎಂಟು ವಲಯದಲ್ಲಿ 100 ಕ್ಕೂ ಕಮ್ಮಿ ಮೈಕ್ರೋ ಕಂಟೈನ್ಮೆಂಟ್ ಇತ್ತು
ಈಗ ಕಂಟೈನ್ಮೆಂಟ್ ಝೋನ್ಗಳು ಏಕಾಏಕಿ ಏರಿಕೆಯಾಗಿವೆ. ವಲಯವಾರು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೀಗಿದೆ:
ಏಕಾಏಕಿ ಏರಿಕೆಯಾಗಿರುವ ಕಂಟೈನ್ಮೆಂಟ್ ಝೋನ್ಗಳು:
1. ಮಹದೇವಪುರ -42 ಪ್ರಕರಣ
2. ಪೂರ್ವ -38 ಪ್ರಕರಣ
3. ಬೊಮ್ಮನಹಳ್ಳಿ -28 ಪ್ರಕರಣ
4. ದಕ್ಷಿಣ -19 ಪ್ರಕರಣ
5. ಯಲಹಂಕ -17 ಪ್ರಕರಣ
6. ಆರ್. ಆರ್ ನಗರ -10 ಪ್ರಕರಣ
7. ಪಶ್ಚಿಮ -5 ಪ್ರಕರಣ
8. ದಾಸರಹಳ್ಳಿ -3 ಪ್ರಕರಣ
ಇನ್ನು, ಬೆಂಗಳೂರಿನಲ್ಲಿ ಮೂರನೇ ಅಲೆಯ ಭೀತಿ ಹೆಚ್ಚಿಸುತ್ತಿರುವ ಹತ್ತು ವಾರ್ಡ್ ಗಳು ಹೀಗಿವೆ. ಈ ವಾರ್ಡ್ ಗಳೇ ಸದ್ಯಕ್ಕೆ ಬೆಂಗಳೂರಿನ ಡೇಂಜರ್ ಸ್ಪಾಟ್ ಗಳಾಗಿವೆ. ಈ ವಾರ್ಡ್ ಗಳ ಕಡೆ ಹೋಗೋದಕ್ಕೂ ಮುನ್ನ ಎಚ್ಚರ ಇರಲಿ ಎಂಬಂತಾಗಿದೆ. ಈ ಹತ್ತು ವಾರ್ಡ್ ಗಳಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಕೇಸ್ ಗಳು ಹೆಚ್ಚುತ್ತಿವೆ. ಈ ಎಲ್ಲ ವಾರ್ಡ್ ಗಳಲ್ಲಿಯೂ ಕಳೆದ 20 ದಿನಗಳಲ್ಲಿ ಅತ್ಯಧಿಕ ಕೇಸ್ ದಾಖಲಾಗಿದೆ. ದಿನಂಪ್ರತಿ 8 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.
ಸಿಲಿಕಾನ್ ಸಿಟಿಯ ಈ 10 ವಾರ್ಡ್ ಗಳಲ್ಲಿ ಹೆಚ್ಚಾಗಿದೆ ಕರೊನಾ ಆರ್ಭಟ:
1. ಹೊರಮಾವು – 6 ಪ್ರಕರಣ
2. ಕಾಡುಗೋಡಿ – 6
3. ಹಗದೂರು – 8
4. ಬೆಳ್ಳಂದೂರು -7
5. ಸಿಂಗಸಂಧ್ರ – 5
6. ಬೇಗೂರು – 8
7. ರಾಜರಾಜೇಶ್ವರಿ ನಗರ – 7
8. ವರ್ತೂರು – 5
9. ಬಸವಪುರ – 6
10. ಕೆ.ಆರ್. ಪುರ – 6 ಪ್ರಕರಣ
Source: Tv9 kannada