Yuvarathnaa Collections: ಸಾಲುಸಾಲು ತೊಂದರೆ ಎದುರಿಸಿದರೂ ಯುವರತ್ನಗೆ ಒಳ್ಳೆಯ ಕಲೆಕ್ಷನ್; ಸಿನಿಮಾದ ಒಟ್ಟು ಗಳಿಕೆ ಎಷ್ಟು?

Apr 14, 2021

ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಪುನೀತ್​ ನಟನೆಯ ‘ಯುವರತ್ನ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್​ ಆಫೀಸ್​ನಲ್ಲಿ ಯುವರತ್ನ ಮೊದಲ ದಿನ 7-10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು ಎನ್ನಲಾಗಿದೆ.

ರಾಜ್​ಕುಮಾರ್​ ನಟನೆಯ ಯುವರತ್ನ ಸಿನಿಮಾ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಕೆ ಮಾಡಿಕೊಂಡಿತ್ತು. ಆದರೆ, ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಆಸನ ಮಿತಿ ಹೇರಿದ್ದರಿಂದ ಸಿನಿಮಾ ರಿಲೀಸ್​ ಆದ ಒಂದೇ ವಾರಕ್ಕೆ ಚಿತ್ರ ಒಟಿಟಿ ಹಾದಿ ಹಿಡಿದಿತ್ತು. ಹಾಗಾದರೆ, ಈ ಸಿನಿಮಾ ಒಂದು ವಾರದಲ್ಲಿ ಒಟ್ಟು ಗಳಿಕೆ ಮಾಡಿದ್ದೆಷ್ಟು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಪುನೀತ್​ ನಟನೆಯ ‘ಯುವರತ್ನ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನ ಮುಂಜಾನೆ 6 ಗಂಟೆಯಿಂದಲೇ ಯುವರತ್ನ ಪ್ರದರ್ಶನ ಕಂಡಿತ್ತು. ಪರಿಣಾಮ ಬಾಕ್ಸ್​ ಆಫೀಸ್​ನಲ್ಲಿ ಯುವರತ್ನ ಮೊದಲ ದಿನ 7-10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು ಎನ್ನಲಾಗಿದೆ.

ನಂತರ ಒಂದು ವಾರಗಳ ಕಾಲ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಕೊರೊನಾ ಎರಡನೆ ಅಲೆ, ಆಸನ ಮಿತಿ ಚಾಲೆಂಜ್​ಗಳನ್ನು ಎದುರಿಸಿ ಯುವತ್ನ ಸಿನಿಮಾ 30 ಕೋಟಿ ಕಲೆಕ್ಷನ್​ ಮಾಡಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ರಿಲೀಸ್​ ಆದ ಪ್ರಮುಖ ಮೂರನೇ ಚಿತ್ರ ಇದಾಗಿದೆ. ಧ್ರುವ ಸರ್ಜಾ ನಟನೆಯ ಪೊಗರು ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 45 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇನ್ನು, ಭಾರೀ ಜನಮನ್ನಣೆ ಪಡೆದಿದ್ದ ರಾಬರ್ಟ್​ ಸಿನಿಮಾ 105 ಕೋಟಿ ರೂಪಾಯಿ ಬಾಚಿಕೊಂಡಿದೆ.

ಅಮೆಜಾನ್​ ಪ್ರೈಮ್​ಗೆ ಒಳ್ಳೆಯ ಬೆಲೆಗೆ ಯುವರತ್ನ ಸೇಲ್​ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಮೊದಲು ಕೆಜಿಎಫ್​ ಚಾಪ್ಟರ್​ 1 ಸಿನಿಮಾ 18 ಕೋಟಿಗೆ ಮಾರಾಟವಾಗಿತ್ತು. ಈ ದಾಖಲೆಯನ್ನು ಯುವರತ್ನ ಮುರಿದು ಹಾಕಿದೆ. ಬರೋಬ್ಬರಿ 20 ಕೋಟಿಗೆ ಯುವರತ್ನ ಸಿನಿಮಾ ಹಕ್ಕನ್ನು ಪ್ರೈಮ್​ ಪಡೆದುಕೊಂಡಿದೆ ಎನ್ನಲಾಗಿದೆ.

ಪುನೀತ್​ ಹಾಗೂ ನಿರ್ದೇಶಕ ಸಂತೋಷ್​​​ ಆನಂದ್​​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ಚಿತ್ರ ಯುವರತ್ನ. ಧನಂಜಯ್​, ಪ್ರಕಾಶ್​ ರಾಜ್ ಮೊದಲಾದವರು​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Source: TV9Kannada