DC vs RCB: ಊಹಿಸಲಾಗದ ದೆಹಲಿ ಪಿಚ್​ನಲ್ಲಿ ಆರ್​ಸಿಬಿಗೆ ಅಗ್ನಿಪರೀಕ್ಷೆ: ಫಾಫ್ ಮಾಡಿರುವ ಮಾಸ್ಟರ್ ಪ್ಲಾನ್ ಏನು?

May 6, 2023

1 / 7 ಫಾಪ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಪಿಚ್ ಹೇಗಿರುತ್ತೆ ಎಂದು ಹೇಳಲಾಗದ ಕ್ರೀಡಾಂಗಣದಲ್ಲಿ ಆರ್​ಸಿಬಿ ಇಂದು ಅಗ್ನಿಪರೀಕ್ಷೆಗೆ ಇಳಿಯುತ್ತಿದೆ. ಮೈನಸ್ ರನ್​ರೇಟ್​ನೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಐದನೇ ಸ್ಥಾನದಲ್ಲಿರುವ ಬೆಂಗಳೂರಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಗೆಲ್ಲ ಬೇಕಾದ ಒತ್ತಡದಲ್ಲಿದೆ.
 
2 / 7

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಒಟ್ಟು 81 ಐಪಿಎಲ್ ಪಂದ್ಯಗಳು ನಡೆದಿದೆ. ಈ ಬಾರಿ 4 ಪಂದ್ಯಗಳು ಜರುಗಿದ್ದು ಇದರಲ್ಲಿ ಟಾರ್ಗೆಟ್ ಬೆನ್ನಟ್ಟಿದ ತಂಡ ಮೂರು ಮತ್ತು ಮೊದಲ ಬ್ಯಾಟ್ ಮಾಡಿದ ತಂಡ ಒಂದು ಪಂದ್ಯವನ್ನು ಗೆದ್ದಿದೆ. 120 ರಿಂದ 190 ರನ್ ವರೆಗೆ ಇಲ್ಲಿ ಕಲೆಹಾಕಬಹುದು.

3 / 7

ಇದು ನಿಧಾನಗತಿಯ ಪಿಚ್ ಆಗಿದ್ದು ತುಂಬಾ ಹತ್ತರಿದಲ್ಲಿ ಬೌಂಡರಿ ಗೆರೆ ಇದೆ. ಹೀಗಾಗಿ ಫೋರ್-ಸಿಕ್ಸರ್​ಗಳ ಮಳೆ ಸುರಿಯುವುದು ಖಚಿತ. ಮೊದಲು ಬ್ಯಾಟ್ ಮಾಡಿದ ತಂಡ 180 ರನ್ ಕಲೆಹಾಕಿದರೆ ಎದುರಾಳಿಗೆ ದೊಡ್ಡ ಟಾರ್ಗೆಟ್ ಎನ್ನಬಹುದು. ಯಾಕೆಂದರೆ ಪಂದ್ಯ ಸಾಗುತ್ತ ಪಿಚ್ ನಿಧಾನವಾಗಲಿದೆ. ಸ್ಪಿನ್ನರ್​ಗಳು ಹೆಚ್ಚು ಪರಿಣಾಮಕಾರಿ ಆಗಿ ಗೋಚರಿಸಲಿದ್ದಾರೆ.

4 / 7

ಈ ಮೈದಾನದಲ್ಲಿ ಸರಸಾರಿ ಮೊತ್ತ 164 ಆಗಿದೆ. ಗರಿಷ್ಠ ಸ್ಕೋರ್ 231 ರನ್ ಕಲೆಹಾಕಿದ್ದರೆ 66 ರನ್ ಕನಿಷ್ಠ ಆಗಿದೆ. ಇನ್ನು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

5 / 7

ಈ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ನೆರವು ನೀಡುವ ಕಾರಣ ಆರ್​ಸಿಬಿ ವನಿಂದು ಹಸರಂಗ ಹಾಗೂ ಕರ್ಣ್ ಶರ್ಮಾ ಇಬ್ಬರು ಸ್ಪಿನ್ನರ್​ಗಳನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಹಾಕುವ ಪ್ಲಾನ್ ಮಾಡಿಕೊಳ್ಳಬಹುದು.

6 / 7

ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ಕೇದರ್ ಜಾಧವ್, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

7 / 7 ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ಕೇದರ್ ಜಾಧವ್, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
 
 Source: TV9KANNADA