Abdul Samad: ನೋ ಬಾಲ್ ಡ್ರಾಮ: ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದ ವಿಡಿಯೋ ನೋಡಿ

May 8, 2023

RR vs SRH Last Over, IPL 2023: ಕೊನೆಯ ಎಸೆದ ವರೆಗೂ ನಡೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಹೆಚ್​​ ಮೇಲುಗೈ ಸಾಧಿಸಿತು. ಹೀರೋ ಆಗಿದ್ದ ಸಂದೀಶ್ ಶರ್ಮಾ ಒಂದು ನಿಮಿಷದ ಒಳಗೆ ಜೀರೋ ಆದರೆ, ಅಬ್ದುಲ್ ಸಮದ್ ಸ್ಫೋಟಕ ಸಿಕ್ಸ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

Abdul Samad: ನೋ ಬಾಲ್ ಡ್ರಾಮ: ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದ ವಿಡಿಯೋ ನೋಡಿ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನೇಕ ರೋಚಕ ಕಾದಾಟಕ್ಕೆ ಸಾಕ್ಷಿಯಾಗಿದೆ. ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ ಪಂದ್ಯಗಳು ಈ ಬಾರಿ ಹೆಚ್ಚಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (RR vs SRH) ನಡುವಣ ಪಂದ್ಯ. ಭಾನುವಾರ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಹೈದರಾಬಾದ್ 4 ವಿಕೆಟ್​ಗಳ ಗೆಲುವು ಸಾಧಿಸಿತು. ಕೊನೆಯ ಎಸೆದ ವರೆಗೂ ನಡೆದ ಕಾದಾಟದಲ್ಲಿ ಎಸ್​ಆರ್​ಹೆಚ್ ಮೇಲುಗೈ ಸಾಧಿಸಿತು. ಹೀರೋ ಆಗಿದ್ದ ಸಂದೀಶ್ ಶರ್ಮಾ (Sundeep Sharma) ಒಂದು ನಿಮಿಷದ ಒಳಗೆ ಜೀರೋ ಆದರೆ, ಅಬ್ದುಲ್ ಸಮದ್ (Abdul Samad) ಸ್ಫೋಟಕ ಸಿಕ್ಸ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್​ಗೆ ಅನ್ಮೋಲ್​ಪ್ರೀತ್ ಸಿಂಗ್ (33) ಮತ್ತು ಅಭಿಷೇಕ್ ಶರ್ಮಾ (55) ಸ್ಫೋಟಕ ಆರಂಭ ಒದಗಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ ಕೂಡ ಕೇವಲ 29 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 47 ರನ್ ಸಿಡಿಸಿದರು. ಹೆನ್ರಿಚ್ ಕ್ಲಾಸೆನ್ 12 ಎಸೆತಗಳಲ್ಲಿ 26 ರನ್ ಗಳಿಸಿದರೆ ನಾಯಕ ಆ್ಯಡಂ ಮಾರ್ಕ್ರಮ್ (6) ವೈಫಲ್ಯ ಅನುಭವಿಸಿದರು. ಈ ಸಂದರ್ಭ ತಂಡ ಸೋಲಿನ ಸುಳಿಗೆ ಸಿಲುಕಿತ್ತು.