ಏಷ್ಯಾದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾಫಿ ಸಮ್ಮೇಳನ

Aug 1, 2023

ಕಾಫಿ ಬೆಳೆಗಾರರು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶ ಸೃಷ್ಟಿ ಹಾಗೂ ಮಾರಿಕಟ್ಟೆಯ ವಿಸ್ತರಣೆಯ ಉದ್ದೇಶದಿಂದ ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ಅಮನೆ ಮೈದಾನದಲ್ಲಿ ಸೆ.25 ರಿಂದ 28ರವರೆಗೆ 5ನೇ “ವಿಶ್ವ ಕಾಫಿ ಸಮ್ಮೇಳನ” ಆಯೋಜಿಸಲಾಗಿದೆ.

 

ಬೆಂಗಳೂರು: ಕರ್ನಾಟಕ ಭಾರತದ ಕಾಫಿ (Coffee) ರಾಜಧಾನಿಯಾಗಿದೆ. ಹೀಗಾಗಿ ಕಾಫಿ ಬೆಳೆಗಾರರು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶ ಸೃಷ್ಟಿ ಹಾಗೂ ಮಾರಿಕಟ್ಟೆಯ ವಿಸ್ತರಣೆಯ ಉದ್ದೇಶದಿಂದ ಏಷ್ಯಾದಲ್ಲಿ (Asia) ಇದೇ ಮೊದಲ ಬಾರಿಗೆ ಬೆಂಗಳೂರಿನ (Bengaluru) ಅಮನೆ ಮೈದಾನದಲ್ಲಿ ಸೆ.25 ರಿಂದ 28ರವರೆಗೆ 5ನೇ “ವಿಶ್ವ ಕಾಫಿ ಸಮ್ಮೇಳನ ” World Coffee Conference (WCC 2023)” ಆಯೋಜಿಸಲಾಗಿದೆ. ಭಾರತೀಯ ಕಾಫಿ ಮಂಡಳಿ, ಅಂತರಾಷ್ಟ್ರೀಯ ಕಾಫಿ ಸಂಘಟನೆಗಳು (ಐಸಿಒ) ಹಾಗೂ ಕಾಫಿ ಉದ್ಯಮದ ಸಹಯೋಗದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದ ಬ್ರ್ಯಾಂಡ್​ ಅಂಬಾಸಿಡರ್​ ಆಗಿರವ ಟೆನಿಸ್​ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸೃತ ರೋಹನ್​ ಬೋಪಣ್ಣ ಅವರು ಸೋಮವಾರ ಲಾಂಛನ ಅನಾವರಣಗೊಳಿಸಿದರು.

ವಿಶ್ವದಲ್ಲಿ ಭಾರತವು ಕಾಫಿ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದೆ. ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ದೇಶದ ರಪ್ತು ಪ್ರಮಾಣದಲ್ಲಿ ಕರ್ನಾಟಕದ ಕೊಡುಗೆಯು ಶೇ 70ರಷ್ಟಿದೆ. ದೇಶದಲ್ಲಿ ಕರ್ನಾಟಕ ಕಾಫಿ ರಾಜಧಾನಿಯಾಗಿದೆ. ಸಮ್ಮೇಳನದಿಂದ ಕಾಫಿ ಬೆಳೆಗಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ. 100 ಮಿಲಿಯನ್ ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯವನ್ನು ಒದಗಿಸುವ 200 ಶತಕೋಟಿ ಮೌಲ್ಯದ ವಿಶ್ವದ ಅತಿದೊಡ್ಡ ವ್ಯಾಪಾರದ ಸರಕು ಕಾಫಿಯಾಗಿದೆ ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ಪ್ರಚಾರ ಮಾಡುವ ಮೂಲಕ ಈ ಸಮ್ಮೇಳನವು ಕಾಫಿ ಬೆಳೆಗಾರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಹಾಗೇ ಮಾರುಕಟ್ಟೆಗಳನ್ನು ಸೃಷ್ಟಿಸಲಿದೆ. ಕಾಫಿ ತೋಟದಿಂದ ಕೆಫೆಗಳವರೆಗೆ ನಮ್ಮ ಪ್ರತಿಭೆಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ ಎಂದರು.

Source: TV9 KANNADA