ಮೈಸೂರು ರಿಂಗ್ ರಸ್ತೆ ಅಪಘಾತ ಪ್ರಕರಣ: ಕಾರ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಆಯುಕ್ತರಿಂದ ಪ್ರಶಂಸನಾ ಪತ್ರ

Mar 24, 2021

ರಿಂಗ್ ರಸ್ತೆಯಲ್ಲಿ ನಡೆದ ಅಪಘಾತದ ವೇಳೆ ಕಾರ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಮೈಸೂರು: ಜಿಲ್ಲೆಯ ರಿಂಗ್​ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣ ನಡೆದಾಗ ಸ್ಥಳೀಯರು ರೊಚ್ಚಿಗೆದ್ದು ದಾಂಧಲೆ ನಡೆಸಿದ್ದರು. ಅದಾದಮೇಲೆ ಖುದ್ದು ಬೈಕ್​ ಮೇಲೆ ಸಂಚರಿಸುತ್ತಿದ್ದ ವ್ಯಕ್ತಿ ಪೊಲೀಸರ ಸಮ್ಮುಖದಲ್ಲಿ ನೀಡಿದ ಹೇಳಿಕೆಯೇ ಬೇರೊಂದು.. ಅದಾದ ಮೇಲೆ ಪೊಲೀಸರು ದಾಂಧಲೆ ನಡೆಸಿದವರ ಪೈಕಿ 13 ಮಂದಿಯನ್ನು ಒಳಗೆ ಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೆ, ಖುದ್ದು ಮೈಸೂರು ನಗರ ಪೊಲೀಸ್​ ಆಯುಕ್ತ ಡಾ. ಚಂದ್ರಗುಪ್ತ ಅವರು ಅಂದು ಸ್ಥಳದಲ್ಲಿದ್ದ ಅಷ್ಟೂ ಮಂದಿ ಪೊಲೀಸರನ್ನು ಪ್ರಶಂಸಿಸಿ, ಗೌರವಿಸುತ್ತಿರುವ ಸುದ್ದಿಯೂ ಕೇಳಿಬಂದಿದೆ. ಒಟ್ಟಿನಲ್ಲಿ ಪ್ರಕರಣವನ್ನು ಎಳೆ ಎಳೆಯಾಗಿ ಬಿಡಿಸಿ ನೋಡಿದಾಗ ಅಸಹಜ ಘಟನಾವಳಿಗಳು ನಡೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ರಿಂಗ್ ರಸ್ತೆಯಲ್ಲಿ ನಡೆದ ಅಪಘಾತದ ವೇಳೆ ಕಾರ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಅಪಘಾತ ಸಮಯದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ ಸಂಚಾರ ಪೊಲೀಸರು, 112 ತುರ್ತು ಸ್ಪಂದನ ವಾಹನದ ಕರ್ತವ್ಯದ ಪೊಲೀಸರು ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಮೃತನ ದೇಹವನ್ನು ಶವಾಗಾರಕ್ಕೆ ತಲುಪಿಸಿ ಅಪಘಾತಗೊಂಡಿದ್ದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಇದನ್ನು ಗಮನಿಸಿ ಆಯುಕ್ತ ಡಾ.ಚಂದ್ರಗುಪ್ತ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಕಾರ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸನಾ ಪತ್ರ
-ಸ್ವಾಮಿನಾಯಕ, ಎ.ಎಸ್.ಐ, ವಿ.ವಿ.ಪುರಂ ಸಂಚಾರ ಠಾಣೆ
-ಮಾದೇಗೌಡ, ಎ.ಎಸ್.ಐ. ವಿ.ವಿ.ಪುರಂ ಸಂಚಾರ ಠಾಣೆ
-ಲೋಕೇಶ್. ಎ.ಎಂ. ಸಿ.ಹೆಚ್.ಸಿ. ವಿ.ವಿ.ಪುರಂ ಸಂಚಾರ ಠಾಣೆ
-ಶಿವನಾಗ, ಸಿ.ಪಿ.ಸಿ. ವಿ.ವಿ.ಪುರಂ ಸಂಚಾರ ಠಾಣೆ
-ರಮೇಶ್, ಸಿ.ಪಿ.ಸಿ. ವಿ.ವಿ.ಪುರಂ ಸಂಚಾರ ಠಾಣೆ
-ಗಣೇಶ್, ಹೆಚ್.ಆರ್, ಸಿ.ಹೆಚ್.ಸಿ. ವಿಜಯನಗರ ಠಾಣೆ
-ಭಾಸ್ಕರ್, ಎ.ಪಿ.ಸಿ ಸಂಜೀವಿನಿ ತುರ್ತು ಚಿಕಿತ್ಸಾ ವಾಹನ ಚಾಲಕ
-ಪಿ.ಮಂಜು, ಎ.ಪಿ.ಸಿ. 112 ವಾಹನ ಚಾಲಕನಿಗೆ ಪ್ರಶಂಸನಾ ಪತ್ರ ನೀಡಿ ಗೌರವ ಸಮರ್ಪಿಸಿದ್ದಾರೆ.

Source:TV9Kannada