ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಸ್ಥಗಿತ, ಬಿಜೆಪಿ ಆರೋಪಗಳಿಗೆ ಕೆಎಂಎಫ್ ಅಧ್ಯಕ್ಷ ತಿರುಗೇಟು
ತಿರುಪತಿ ಲಡ್ಡು ಅಂದ್ರೆ ವರ್ಲ್ಡ್ ವೈಡ್ ಫೇಮಸ್. ಇದೇ ತಿರುಪತಿ ಲಡ್ಡುವಿನ ರುಚಿಗೆ ಕರ್ನಾಟಕದ ನಂದಿನಿ ತುಪ್ಪದ ಘಮಲು ಕೂಡ ಕಾರಣವಾಗಿತ್ತು.. ಆದ್ರೆ, ಕರ್ನಾಟಕದ ಕೆಎಂಎಫ್ ತಿರುಪತಿಗೆ ಸರಬರಾಜು ಮಾಡುತ್ತಿದ್ದ ನಂದಿನಿ ತುಪ್ಪವನ್ನ ಸ್ಥಗಿತಗೊಳಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಲಡ್ಡು ಲಡಾಯಿಗೆ ಕಾರಣವಾಗಿದೆ.
ನಮ್ಮ ತುಪ್ಪಕ್ಕೆ ಸೂಕ್ತ ಮೌಲ್ಯ ಕೊಡುವುದಾದರೆ ಖಂಡಿತಾ ಸಪ್ಲೈ ಮಾಡುತ್ತೇವೆ. ನಂದಿನಿ ತುಪ್ಪಕ್ಕೆ ಬಹಳಷ್ಟು ಬೇಡಿಕೆ ಇದೆ. ಕೆಲಸವಿಲ್ಲದೇ ರಾಜಕೀಯ ಮಾಡಲು ಅನವಶ್ಯಕವಾಗಿ ವಿವಾದವನ್ನು ಬಿಜೆಪಿ ನಾಯಕರು ಸೃಷ್ಟಿಸುತ್ತಿದ್ದಾರೆ. ರೈತ ಸಂಕಷ್ಟದಲ್ಲಿ ಇದ್ದಾನೆ, ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ನಮ್ಮ ಸರ್ಕಾರ ರೈತರನ್ನ ಸಬಲರನ್ನಾಗಿಸಲು 3 ರೂ. ಹಾಲಿನ ದರ ಏರಿಸಿ ನೇರವಾಗಿ ರೈತರಿಗೆ ತಲುಪುವಂತೆ ಮಾಡಿದೆ ಎಂದು ಹೇಳಿದರು.
ಇನ್ನು ಸಿಟಿ ರವಿ ಹೇಳಿಕೆಯಂತೆ ಕೇರಳದಲ್ಲಿ ನಂದಿನಿ ಮಾರುಕಟ್ಟೆ ಕಳೆದುಕೊಂಡಿಲ್ಲ. ನಾಳೆಯೂ ಕೂಡ ನಮ್ಮ ನಂದಿನಿ ಹಾಲಿಗೆ ಬೇಡಿಕೆ ಇಟ್ಟಿದ್ದಾರೆ, ಅದರ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು.