Vinay Kumar Retirement: ಎಲ್ಲಾ ವಿಧದ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ದಾವಣಗೆರೆ ಎಕ್ಸ್​​ಪ್ರೆಸ್​ ವಿನಯ್​ ಕುಮಾರ್

Feb 26, 2021

ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಂ.ಎಸ್​. ಧೋನಿ ಹಾಗೂ ವಿರಾಟ್​ ಕೊಹ್ಲಿ ಜತೆ ಆಟವಾಡಿದ್ದಕ್ಕೆ ಖುಷಿ ಇದೆ ಎಂದು ವಿನಯ್​ ಕುಮಾರ್​ ಹೇಳಿದ್ದಾರೆ.

ದಾವಣಗೆರೆ ಎಕ್ಸ್​​ಪ್ರೆಸ್​ ಎಂದೇ ಖ್ಯಾತಿ ಪಡೆದಿದ್ದ ಕನ್ನಡಿಗ ಹಾಗೂ ಟೀಂ ಇಂಡಿಯಾದ ವೇಗದ ಬೌಲರ್​ ವಿನಯ್​ ಕುಮಾರ್​ ಇಂದು ಎಲ್ಲಾ ವಿಧದ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ತಮ್ಮ ನಿವೃತ್ತಿ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಂ.ಎಸ್​. ಧೋನಿ ಹಾಗೂ ವಿರಾಟ್​ ಕೊಹ್ಲಿ ಜತೆ ಆಟವಾಡಿದ್ದಕ್ಕೆ ಖುಷಿ ಇದೆ ಎಂದಿದ್ದಾರೆ.

Source: TV9Kannada