UPSC Recruitment 2021: 5 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ಲೋಕ ಸೇವಾ ಆಯೋಗ; ನೀವೂ ಅರ್ಹರಾಗಿದ್ದರೆ ತಡ ಮಾಡಬೇಡಿ..
ಕೇಂದ್ರ ಲೋಕ ಸೇವಾ ಆಯೋಗ (UPSC) ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮಹಿಳಾ ವೈದ್ಯಕೀಯ ಅಧಿಕಾರಿ, ಪ್ರಧಾನ ವಿನ್ಯಾಸಾಧಿಕಾರಿ (Principal Design Officer), ಮತ್ತು ಉಳಿದ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಯುಪಿಎಸ್ಸಿ ತನ್ನ ವೆಬ್ಸೈಟ್ನಲ್ಲಿ ಹೇಳಿಕೊಂಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಏಪ್ರಿಲ್ 1ರ ಮಧ್ಯಾಹ್ನ 12ಗಂಟೆಯೊಳಗೆ upsc.gov.inನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೇ, ಆನ್ಲೈನ್ ಮೂಲಕ ತುಂಬಿದ ಅರ್ಜಿಗಳನ್ನು ಮುದ್ರಣ ತೆಗೆದು ಅದನ್ನು ಕಳಿಸಲು ಕೊನೇ ದಿನ ಏಪ್ರಿಲ್ 2ಎಂದು ಯುಪಿಎಸ್ಸಿ ತಿಳಿಸಿದೆ.
UPSCಯ ಮಹಿಳಾ ವೈದ್ಯಾಧಿಕಾರಿ (ಕುಟುಂಬ ಕಲ್ಯಾಣ)ಹುದ್ದೆಯಲ್ಲಿ 2, ಪ್ರಧಾನ ವಿನ್ಯಾಸ ಅಧಿಕಾರಿ(ಎಲೆಕ್ಟ್ರಿಯಲ್) ಪೋಸ್ಟ್ನಲ್ಲಿ ಒಂದು, ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ (ಟೆಕ್ನಿಕಲ್)ಹುದ್ದೆಯಲ್ಲಿ ಒಂದು ಹಾಗೂ ಅಸಿಸ್ಟೆಂಟ್ ಆರ್ಕಿಟೆಕ್ಟ್ ಮತ್ತು ಮುಖ್ಯ ಆರ್ಕಿಟೆಕ್ಟ್ ಕಚೇರಿಯಲ್ಲಿ ತಲಾ ಒಂದು ವೆಕೆನ್ಸಿಗಳು ಇವೆ.
ಶೈಕ್ಷಣಿಕ ಅರ್ಹತೆ
ಅಸಿಸ್ಟೆಂಟ್ ಆರ್ಕಿಟೆಕ್ಟ್ ಮತ್ತು ಮುಖ್ಯ ಆರ್ಕಿಟೆಕ್ಟ್ ಹುದ್ದೆ: ಈ ಪೋಸ್ಟ್ಗೆ ಅರ್ಜಿ ಸಲ್ಲಿಸುವವರು ಆರ್ಕಿಟೆಕ್ಟ್ನಲ್ಲಿ ಪದವಿ ಪಡೆದಿರಬೇಕು ಅಥವಾ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಯಿಂದ ಆರ್ಕಿಟೆಕ್ಟ್ ಪದವಿಗೆ ಸಮಾನವಾದ ಡಿಪ್ಲೊಮಾ ಮಾಡಿರಬೇಕು. ಎರಡು ವರ್ಷಗಳ ಅನುಭವ ಕಡ್ಡಾಯ.
ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ (ಟೆಕ್ನಿಕಲ್): ನೌಕಾ ವಿನ್ಯಾಸದಲ್ಲಿ ಪದವಿ ಪಡೆದು, ಹಡಗು ವಿನ್ಯಾಸ, ಸಂವಹನ, ಸರ್ವೇ ಮತ್ತು ಹಡಗು ರಿಪೇರಿಯಲ್ಲಿ 8ವರ್ಷಗಳ ಅನುಭವ ಉಳ್ಳವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಪ್ರಧಾನ ವಿನ್ಯಾಸ ಅಧಿಕಾರಿ(ಎಲೆಕ್ಟ್ರಿಯಲ್): ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಅಥವಾ ಟೆಲಿಕಮ್ಯೂನಿಕೇಶನ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, ಹಗಡುಗಳ ವಿನ್ಯಾಸ, ಅಳವಡಿಕೆ, ನಿರ್ಮಾಣದಲ್ಲಿ 10ವರ್ಷ ಪ್ರಾಯೋಗಿಕ ಅನುಭವ ಇದ್ದವರು ಅರ್ಜಿ ಸಲ್ಲಿಸಬಹುದಾಗಿದೆ.
ಮಹಿಳಾ ವೈದ್ಯಾಧಿಕಾರಿ (ಕುಟುಂಬ ಕಲ್ಯಾಣ)ಹುದ್ದೆ: ಮಾನ್ಯತೆ ಪಡೆದ ವೈದ್ಯಕೀಯ ಅರ್ಹತೆ ಇರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು UPSC ವೆಬ್ಸೈಟ್ upsc.gov.in ನಲ್ಲಿ ಪಡೆಯಬಹುದು.
Source:TV9Kannada