Sudeep: ರಕ್ತದಲ್ಲಿ ಸುದೀಪ್ ಅವರ ಚಿತ್ರ ಬಿಡಿಸಿ ಹುಚ್ಚ ಅಭಿಮಾನಿ ತೋರಿದ ಫ್ಯಾನ್; ಕಿಚ್ಚನ ಪ್ರತಿಕ್ರಿಯೆ ಏನು?
ಸುದೀಪ್ ಅವರನ್ನು ಹಿಂಬಾಲಿಸುವ ಕೋಟ್ಯಂತರ ಮಂದಿ ಇದ್ದಾರೆ. ಅದೇ ರೀತಿ ಅನೇಕರು ಅವರ ಮೇಲೆ ಇರುವ ಅಭಿಮಾನಿವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ.
ತಮ್ಮ ನೆಚ್ಚಿನ ನಟನ ಮೇಲೆ ಅಭಿಮಾನಿಗಳು ಕೆಲವೊಮ್ಮೆ ಹುಚ್ಚು ಪ್ರೀತಿ ತೋರುತ್ತಾರೆ. ಈ ಪ್ರೀತಿ ಕೆಲವೊಮ್ಮೆ ಮಿತಿಮೀರುವುದೂ ಉಂಟು. ಈಗ ಸುದೀಪ್ ಅವರ ಅಭಿಮಾನಿಯೊಬ್ಬರು ಇದೇ ರೀತಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ತಮ್ಮದೇ ರಕ್ತದಲ್ಲಿ ಸುದೀಪ್ (Sudeep) ಅವರ ಚಿತ್ರವನ್ನು ಬಿಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿವೆ. ಕೆಲವರು ಇದನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ರಕ್ತ ಅಮೂಲ್ಯವಾದುದು. ಅದನ್ನು ದಾನ ಮಾಡಿ ಎಂದು ಕೋರಿದ್ದಾರೆ.
ಕಿಚ್ಚ ಸುದೀಪ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಸುದೀಪ್ ಗುರುತಿಸಿಕೊಂಡಿದ್ದಾರೆ. ಅವರನ್ನು ಹಿಂಬಾಲಿಸುವ ಕೋಟ್ಯಂತರ ಮಂದಿ ಇದ್ದಾರೆ. ಅದೇ ರೀತಿ ಅನೇಕರು ಅವರ ಮೇಲೆ ಇರುವ ಅಭಿಮಾನಿವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ.
ಶಿವಮೊಗ್ಗದ ವೈಷ್ಣವಿ ಅವರು ತಮ್ಮದೇ ರಕ್ತದಲ್ಲಿ ಸುದೀಪ್ ಅವರ ಫೋಟೋನ ಬಿಡಿಸಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರು ಕೂಡ ಇದನ್ನು ರೀಟ್ವೀಟ್ ಮಾಡಿಕೊಂಡಿದ್ದು, ಕೈ ಮುಗಿಯುವ ಎಮೋಜಿ ಹಾಕಿದ್ದಾರೆ.
ಈ ರೀತಿ ರಕ್ತದಲ್ಲಿ ಚಿತ್ರ ಬಿಡಿಸಿ ಅಭಿಮಾನ ತೋರುವುದು ಅನೇಕರಿಗೆ ಇಷ್ಟ ಆಗುವುದಿಲ್ಲ. ರಕ್ತ ಅತ್ಯಮೂಲ್ಯವಾದುದ್ದು. ಅದನ್ನು ಈ ರೀತಿ ಅಭಿಮಾನ ತೋರಿಸಲು ಬಳಕೆ ಮಾಡುವುದು ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಈ ರೀತಿ ಅಭಿಮಾನ ತೋರಿದ ಫ್ಯಾನ್ಸ್ಗೆ ಕೆಲ ಸ್ಟಾರ್ಗಳು ತಿಳಿ ಹೇಳಿದ್ದಿದೆ.
<blockquote class=”twitter-tweet”><p lang=”art” dir=”ltr”>🙏🏼🙏🏼🙏🏼🙏🏼🙏🏼🙏🏼 <a href=”https://t.co/3My55J93Kg”>https://t.co/3My55J93Kg</a></p>— Kichcha Sudeepa (@KicchaSudeep) <a href=”https://twitter.com/KicchaSudeep/status/1684631614289256448?ref_src=twsrc%5Etfw”>July 27, 2023</a></blockquote> <script async src=”https://platform.twitter.com/widgets.js” charset=”utf-8″></script>
ಸುದೀಪ್ ಅವರು ಸದ್ಯ ‘ಕೆ46’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಆಗಸ್ಟ್ ತಿಂಗಳಲ್ಲಿ ಆರಂಭ ಆಗಲಿದೆ. ಸತತ 50 ದಿನಕ್ಕೂ ಹೆಚ್ಚು ದಿನಗಳ ಕಾಲ ಈ ಶೂಟ್ ನಡೆಯಲಿದೆ ಎನ್ನಲಾಗಿದೆ. ಇದಲ್ಲದೆ, ಇನ್ನೂ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
(ವಿ.ಸೂ: ಪ್ರೀತಿ, ಅಭಿಮಾನ ಮನದಲ್ಲಿರಲಿ. ಅಭಿಮಾನ ವ್ಯಕ್ತಪಡಿಸಲು ಇನ್ನೂ ಹಲವು ಮಾರ್ಗವಿದೆ. ನಿಮಗೆ ಹಾನಿಮಾಡಿಕೊಂಡು ಅಭಿಮಾನ ಹೊರಹಾಕದಿರಿ ಎಂಬುದು ನಮ್ಮ ಕಳಕಳಿ.)