ICC ODI Rankings: ಸರ್ವಶ್ರೇಷ್ಠ ಸಾಧನೆ: ಮೊಹಮ್ಮದ್ ಸಿರಾಜ್ ಈಗ ನಂಬರ್ 1 ಬೌಲರ್
Mohammed Siraj: ಮೊಹಮ್ಮದ್ ಸಿರಾಜ್ ಅವರ ಸರ್ವಶ್ರೇಷ್ಠ ಸಾಧನೆ. ಅದರಲ್ಲೂ ಜಸ್ಪ್ರೀತ್ ಬುಮ್ರಾ ಬಳಿಕ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಎನಿಸಿಕೊಂಡ ಟೀಮ್ ಇಂಡಿಯಾ ವೇಗಿ ಎಂಬ ಹೆಗ್ಗಳಿಕೆಗೂ ಸಿರಾಜ್ ಪಾತ್ರರಾಗಿದ್ದಾರೆ.
ಐಸಿಸಿ ನೂತನ ಏಕದಿನ ಬೌಲರ್ಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಸರ್ವಶ್ರೇಷ್ಠ ಸಾಧನೆಯೊಂದಿಗೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯಾದ್ಭುತ ಪ್ರದರ್ಶನ ನೀಡಿರುವ ಸಿರಾಜ್ 5 ಪಂದ್ಯಗಳಿಂದ ಒಟ್ಟು 14 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ರನ್ನು ಹಿಂದಿಕ್ಕಿ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ವಿಶೇಷ ಎಂದರೆ ಇದು ಮೊಹಮ್ಮದ್ ಸಿರಾಜ್ ಅವರ ಸರ್ವಶ್ರೇಷ್ಠ ಸಾಧನೆ. ಅದರಲ್ಲೂ ಜಸ್ಪ್ರೀತ್ ಬುಮ್ರಾ ಬಳಿಕ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಎನಿಸಿಕೊಂಡ ಟೀಮ್ ಇಂಡಿಯಾ ವೇಗಿ ಎಂಬ ಹೆಗ್ಗಳಿಕೆಗೂ ಸಿರಾಜ್ ಪಾತ್ರರಾಗಿದ್ದಾರೆ. ಹಾಗಿದ್ರೆ ನೂತನ ಐಸಿಸಿ ಏಕದಿನ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೌಲರ್ಗಳು ಯಾರೆಲ್ಲಾ ಎಂದು ನೋಡೋಣ…
1- ಮೊಹಮ್ಮದ್ ಸಿರಾಜ್ (ಭಾರತ)- 729 ಅಂಕಗಳು
2- ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 727 ಅಂಕಗಳು
3- ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)- 708 ಅಂಕಗಳು
4- ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)- 665 ಅಂಕಗಳು
5- ರಶೀದ್ ಖಾನ್ (ಅಫ್ಘಾನಿಸ್ತಾನ್)- 659 ಅಂಕಗಳು
6- ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 665 ಅಂಕಗಳು
Source: TV9Kannada