Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್​ ರೆಡಿ: ಇಂದು ಸಂಜೆ 04:05 ಕ್ಕೆ ರಿಲೀಸ್

Feb 2, 2021

Roberrt Telugu Teaser: ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗ ತೆಲುಗಿನಲ್ಲೂ ರಾಬರ್ಟ್​ ರಿಲೀಸ್​ಗೆ ರೆಡಿ ಇದ್ದು ಇಂದು ಸಂಜೆ ನಾಲ್ಕು ಗಂಟೆಗೆ ಟೀಸರ್​ ರಿಲೀಸ್​ ಆಗಲಿದೆ.

ಕನ್ನಡದ ಜತೆಜತೆಗೆ ತೆಲುಗಿನಲ್ಲೂ ರಾಬರ್ಟ್​ ಬಿಡುಡೆ​ಗೆ ಸಿದ್ಧವಾಗಿತ್ತು. ಆದರೆ, ಟಾಲಿವುಡ್​ನಲ್ಲಿ ಸಿನಿಮಾ ರಿಲೀಸ್​ ಮಾಡೋಕೆ ಕೆಲವರು ಅಡ್ಡಿ ಮಾಡಿದ್ದರು. ಈ ವಿಚಾರವಾಗಿ ದಾಸ ದರ್ಶನ್​ ಸಿಟ್ಟಾಗಿದ್ದರು ಕೂಡ. ನಂತರ ಈ ಸಮಸ್ಯೆ ಬಗೆ ಹರಿದಿತ್ತು. ಈ ಹಿನ್ನೆಲೆಯಲ್ಲಿ, ಮಾರ್ಚ್​ 11ರಂದೇ ತೆಲುಗಿನಲ್ಲೂ ರಾಬರ್ಟ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇದಕ್ಕೂ ಮೊದಲು ಟಾಲಿವುಡ್​ ಮಂದಿಗೆ ರಾಬರ್ಟ್​ ಸಿನಿಮಾದ ಟೀಸರ್​ ದರ್ಶನ ಮಾಡಿಸುತ್ತಿದೆ ಚಿತ್ರತಂಡ.

ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿನಿಮಾ ನಿರ್ದೇಶಕ ತರುಣ್​ ಸುಧೀರ್​, ರಾಬರ್ಟ್​ ತೆಲುಗು ಸಿನಿಮಾ ಟೀಸರ್​ ಫೆಬ್ರವರಿ 3ರಂದು 04:05 ರಿಲೀಸ್ ಆಗುತ್ತಿದೆ. ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.

 

Soue: TV9kannada