WTC Final 2023: ‘ಫೈಟರ್, ಸೂಪರ್ ಸ್ಟಾರ್, ಗಂಡುಗಲಿ’; ಕಿಂಗ್ ಕೊಹ್ಲಿಯ ಗುಣಗಾನ ಮಾಡಿದ ಆಸೀಸ್ ಕ್ರಿಕೆಟಿಗರು..!

Jun 5, 2023

 

ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಮೈದಾನದಲ್ಲಿ ಉಭಯ ತಂಡಗಳ ತಯಾರಿಯೂ ನಡೆಯುತ್ತಿದೆ. ಎರಡೂ ತಂಡಗಳು ಬಿರುಸಿನ ಅಭ್ಯಾಸ ನಡೆಸುತ್ತಿವೆ. ಆದರೆ, ಈ ನಡುವೆ ಆಸೀಸ್ ಕ್ರಿಕೆಟಿಗರು ವಿರಾಟ್ ಕೊಹ್ಲಿ (Virat Kohli) ಗುಣಗಾನ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಕ್ರಿಕೆಟ್​ ಕಿಂಗ್ ಕೊಹ್ಲಿ ಬಗ್ಗೆ ಒಂದೇ ಒಂದು ಪದದಲ್ಲಿ ವಿವರಿಸಿ ಅಂತ ನಿಮ್ಮಲ್ಲೇನಾದ್ರೂ ಹೇಳಿದ್ರೆ, ನೀವೇನ್ ಹೇಳ್ತೀರಿ? ಇದೇ ಪ್ರಶ್ನೆಗೆ ಆಸ್ಟ್ರೇಲಿಯನ್ ಸ್ಟಾರ್ ಕ್ರಿಕೆಟರ್ಸ್, ವಿರಾಟ್ ಬಗ್ಗೆ ಮಾತನಾಡಿದ್ದಾರೆ. WTC ಫೈನಲ್​ ಸಮೀಪದಲ್ಲಿರುವಾಗ್ಲೇ ಆಸೀಸ್ ಪ್ಲೇಯರ್ಸ್ ಕೊಹ್ಲಿ ಬಗ್ಗೆ ಏನೇನ್ ಹೇಳಿದ್ದಾರೆ? ನೋಡೋಣ ಬನ್ನಿ..

ಕೊಹ್ಲಿ ಗಂಡುಗಲಿ ಎಂದ ಗ್ರೀನ್​, ಕವರ್​ ಡ್ರೈವ್ ಮೆಚ್ಚಿದ ವಾರ್ನರ್!

ಐಸಿಸಿ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮುನ್ನ, ಇಂಟರ್ ನ್ಯಾಷನಲ್​ ಕ್ರಿಕೆಟ್ ಕೌನ್ಸಿಲ್, ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಆಸೀಸ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್, ಕೊಹ್ಲಿಯನ್ನು ಭಾರತದ ಗಂಡುಗಲಿ ಅಂತ ಕರೆದಿದ್ದಾರೆ. ಅಷ್ಟೇ ಅಲ್ಲ, ಟೀಂ ಇಂಡಿಯಾವನ್ನು ದಶಕಗಳಿಂದ ಯಶಸ್ವಿಯಾಗಿ ಮುನ್ನಡೆಸಿದ ವ್ಯಕ್ತಿ ಅಂತ ಕೊಹ್ಲಿ ಬಗ್ಗೆ ಹೇಳಿದ್ದಾರೆ. ಇನ್ನು ಅನುಭವಿ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್, ವಿರಾಟ್​ನ ಕವರ್ ಡ್ರೈವ್ ಅದ್ಭುತ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಉಸ್ಮಾನ್​ಗೆ ಕೊಹ್ಲಿ ಸ್ಪರ್ಧಾತ್ಮಕ ವ್ಯಕ್ತಿ, ಮಿಚೆಲ್ ಸ್ಟಾರ್ಕ್​ ಹೇಳಿದ್ದೇನು?

ಐಸಿಸಿಯ ವಿಡಿಯೋದಲ್ಲಿ ಮುಂದೆ, ಅನುಭವಿ ಸ್ಪಿನ್ನರ್ ಉಸ್ಮಾನ್ ಖವಾಜಾ ಮತ್ತು ವೇಗಿ ಮಿಚೆಲ್ ಸ್ಟಾರ್ಕ್​ ಕೊಹ್ಲಿ ಬಗ್ಗೆ ಒಂದೇ ಪದದಲ್ಲಿ ವಿವರಿಸೋ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಖವಾಜಾ, ಕಿಂಗ್​ ಕೊಹ್ಲಿಯನ್ನು ಬಹಳ ಸ್ಪರ್ಧಾತ್ಮಕ ಆಟಗಾರ ಅಂತ ಬಣ್ಣಿಸಿದ್ರೆ, ಘಾತಕ ವೇಗಿ ಸ್ಟಾರ್ಕ್, ವಿರಾಟ್​ನನ್ನು ಸ್ಕಿಲ್​ಫುಲ್​ ಪ್ಲೇಯರ್ ಎಂದಿರೋದಲ್ಲದೆ, ಆತ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಅಂತ ಬಣ್ಣಿಸಿದ್ದಾರೆ.

Source: PUBLICTV Kannada