ಫೆಬ್ರವರಿ 6ರಂದು 3 ಗಂಟೆ ಕಾಲ ದೇಶಾದ್ಯಂತ ರಸ್ತೆ ತಡೆಗೆ ಕರೆ ಕೊಟ್ಟ ಯೋಗೇಂದ್ರ ಯಾದವ್
ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಗಲಭೆಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ನಡೆಸಲಿದೆ.
ದೆಹಲಿ: ಫೆಬ್ರವರಿ 6ರಂದು ದೇಶಾದ್ಯಂತ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ತಡೆ ನಡೆಸುವಂತೆ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ಕರೆ ಕೊಟ್ಟಿದ್ದಾರೆ.
ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಗಲಭೆಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ನಡೆಸಲಿದೆ. ಜತೆಗೆ, ದೆಹಲಿ ಚಲೋ ಪ್ರತಿಭಟನೆಯ ಇತ್ತೀಚಿನ ಬೆಳವಣಿಗೆಗಳ ಕುರಿತು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಇದು ದೆಹಲಿ ಚಲೋ ಬಗ್ಗೆ ಕರೆದಿರುವ ಎರಡನೇ ಸರ್ವಪಕ್ಷ ಸಭೆ ಆಗಿದೆ.
ಗಡಿಗಳಲ್ಲಿ ಸರ್ಪಗಾವಲು
ರೈತರ ಪ್ರತಿಭಟನೆಯ ಕಾವು ಇನ್ನೂ ಆರದಿರುವ ಕಾರಣ ದೆಹಲಿಯ ಗಡಿಗಳಲ್ಲಿ ಪೊಲೀಸ್ ಸರ್ಪಗಾವಲು ಮುಂದುವರೆದಿದೆ. ನಿನ್ನೆ ಮಂಡನೆಯಾದ ಬಜೆಟ್ ಹಿನ್ನೆಲೆಯಲ್ಲೂ ಸಂಸತ್ ಭವನ, ಗಡಿಗಳು ಮತ್ತು ದೆಹಲಿ ಪ್ರಮುಖ ಸ್ಥಳಗಳಲ್ಲಿ ಬಿಗಿ ಗಸ್ತು ಕೈಗೊಳ್ಳಲಾಗಿತ್ತು. ಗಾಜಿಪುರ ಗಡಿಯಲ್ಲಿ ಡ್ರೋಣ್ ಕಣ್ಗಾವಲನ್ನು ಸಹ ವಹಿಸಲಾಗಿದೆ.
Soure: TV9kannada