Pogaru 1st Day Collection: ಧ್ರುವ ಸರ್ಜಾ ನಟನೆಯ ಪೊಗರು ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
ರಥ ಸಪ್ತಮಿ ಪ್ರಯುಕ್ತ ಪೊಗರು ಚಿತ್ರ ಫೆಬ್ರವರಿ 19ರಂದು ತೆರೆಗೆ ಬಂದಿತ್ತು. ವಿಶೇಷ ಎಂದರೆ ಈ ಸಿನಿಮಾ ಮೊದಲ ದಿನ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಆಗಿ ಓಡಿದೆ.
ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಧ್ರುವ ಸರ್ಜಾ ಫ್ಯಾನ್ಸ್ಗಳನ್ನು ಪೊಗರು ಚಿತ್ರವನ್ನು ಬಾಯ್ತುಂಬ ಹೊಗಳುತ್ತಿದ್ದಾರೆ. ಸಿನಿಮಾದಲ್ಲಿರುವ ಅವರ ಮಾಸ್ ಅವತಾರ ಅನೇಕರಿಗೆ ಇಷ್ಟವಾಗಿದೆ. ಈ ಮಧ್ಯೆ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ರಥ ಸಪ್ತಮಿ ಪ್ರಯುಕ್ತ ಪೊಗರು ಚಿತ್ರ ಫೆಬ್ರವರಿ 19ರಂದು ತೆರೆಗೆ ಬಂದಿತ್ತು. ಚಿತ್ರದಲ್ಲಿರುವ ಮೈನವಿರೇಳಿಸುವ ಫೈಟ್ಗಳು ಹಾಗೂ ಅದ್ಭುತ ಡೈಲಾಗ್ಗಳು ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು. ವಿಶೇಷ ಎಂದರೆ, ಈ ಸಿನಿಮಾ ಮೊದಲ ದಿನ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಆಗಿ ಓಡಿದೆ.
ಈ ಸಿನಿಮಾ ಮೊದಲ ದಿನ ಒಟ್ಟಾರೆ 6 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಅಭಿಮಾನಿಗಳಿಗೋಸ್ಕರ ಮುಂಜಾನೆ 6 ಗಂಟೆಗೇ ಶೋ ಇಡಲಾಗಿತ್ತು. ಅಲ್ಲದೆ, ಯಾವುದೆ ದೊಡ್ಡ ಸಿನಿಮಾ ರಿಲೀಸ್ ಆಗದ ಕಾರಣ ಪೊಗರಿಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದವು. ಇದು ಸಿನಿಮಾದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣ.
ಪೊಗರು ಸಿನಿಮಾ ಮಲ್ಟಿಫ್ಲೆಕ್ಸ್ಗಳಿಗಿಂತ ಬಿ ಹಾಗೂ ಸಿ ಸಾಲಿನ ಚಿತ್ರಮಂದರಿಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಭಿಮಾನಿಗಳು ಮತ್ತೆ ಮತ್ತೆ ಬಂದು ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕೊರೊನಾದಿಂದ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ನಂಬಿಕೆ ಇತ್ತು. ಆದರೆ, ಪೊಗರು ಈ ನಂಬಿಕೆಯನ್ನು ಸುಳ್ಳು ಮಾಡಿದೆ. ಅಷ್ಟೇ ಅಲ್ಲ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಅನೇಕ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡೋಕೆ ಹಿಂಜರಿದಿದ್ದರು. ಈಗ ಪೊಗರು ಸಿನಿಮಾ ಇವರೆಲ್ಲರಿಗೂ ಬಲ ನೀಡಿದೆ.
ಮುಂದಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ದರ್ಶನ್ ನಟನೆಯ ರಾಬರ್ಟ್, ರಿಷಬ್ ಶೆಟ್ಟಿ ಅಭಿನಯದ ಹೀರೋ, ಪುನೀತ್ ಹೀರೋ ಆಗಿ ಕಾಣಿಸಿಕೊಂಡಿರುವ ಯುವರತ್ನ, ಕೋಟಿಗೊಬ್ಬರ 3, ಕೆಜಿಎಫ್ ಚಾಪ್ಟರ್ 2ಗಳು ಬಿಡುಗಡೆ ಆಗುತ್ತಿವೆ.
Source: TV9Kannada