Kamal Haasan: ಕಮಲ್ ಹಾಸನ್, ಚಾರುಹಾಸನ್, ಮಣಿರತ್ನಂ, ಸುಹಾಸಿನಿ ಎಲ್ಲರೂ ಒಂದೇ ಚಿತ್ರದಲ್ಲಿ; ಏನು ವಿಶೇಷ?
ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಚಿರಪರಿಚಿತರಾದ ಸುಹಾಸಿನಿ ತಮ್ಮ ಕುಟುಂಬ ವರ್ಗದವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇಡೀ ಕುಟುಂಬ ಚಿತ್ರರಂಗದಲ್ಲಿ ಸತತವಾಗಿ ತೊಡಗಿಸಿಕೊಂಡಿರುವುದರಿಂದ ಈ ಚಿತ್ರಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಸುಹಾಸಿನಿ, ಅದರಲ್ಲಿ ಕಮಲ್ ಹಾಸನ್ ಅವರೊಂದಿಗೆ ಆಕೆ ಬೆಳೆದ ಅವರ ಕುಟುಂಬದ ಮನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಕುಟುಂಬದ ಚಿತ್ರವನ್ನು ಹಂಚಿಕೊಂಡು ಕುಟುಂಬ ವರ್ಗದ ಪರಿಚಯ ಮಾಡಿಕೊಟ್ಟಿದ್ಧಾರೆ.
ವರದಿಗಳ ಪ್ರಕಾರ, ಕೆಲವು ತಿಂಗಳುಗಳ ನಂತರ ಹಾಸನ್ ಕುಟುಂಬವು ತಮ್ಮ ಕುಟುಂಬದ ಮನೆಗೆ ಭೇಟಿ ನೀಡಿದೆ. ಸುಮಾರು 60 ವರ್ಷಕ್ಕೂ ಹಳೆಯ ಈ ಮನೆಯನ್ನು ಮರು ವಿನ್ಯಾಸಗೊಳಿಸಲಾಗಿದೆ. ಚಿತ್ರವನ್ನು ಹಂಚಿಕೊಂಡಿರುವ ಸುಹಾಸಿನಿ, ‘ಮರಳಿ ಎಲ್ಡಮ್ ರಸ್ತೆಯಲ್ಲಿರುವ ಕುಟುಂಬದ ಮನೆಗೆ.’ ಎಂದು ಬರೆದುಕೊಂಡು ಕುಟುಂಬದವರನ್ನು ಪರಿಚಯಿಸಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಪತ್ನಿಯಾಗಿರುವ ಸುಹಾಸಿನಿ, ಹಾಸನ್ ಕುಟುಂಬದಿಂದ ಬಂದವರು. ಸುಹಾಸಿನಿ ತಂದೆ ಚಾರುಹಾಸನ್ ಕೂಡಾ ಖ್ಯಾತ ನಟರಾಗಿದ್ದು, ಕನ್ನಡದಲ್ಲೂ ಅಭಿನಯಿಸಿದ್ದಾರೆ. ಕಮಲ್ ಹಾಸನ್ ಚಾರುಹಾಸನ್ರ ಸಹೋದರ. ಈಗ ಕಮಲ್ ಹಾಸನ್ರ ಮಕ್ಕಳೂ ಕೂಡಾ ಚಿತ್ರರಂಗದಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ. ಸುಹಾಸಿನಿ ಹಂಚಿಕೊಂಡಿರುವ ಚಿತ್ರಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕೂಡಾ ಈ ಸಂದರ್ಭದಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
Source: tv9 Kannada