BV Nagarathna: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಶಿಫಾರಸು

Aug 18, 2021

ದೆಹಲಿ: ಸುಪ್ರೀಂ ಕೋರ್ಟ್​​ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ಕರ್ನಾಟಕದ ಮಹಿಳಾ ನ್ಯಾಯಮೂರ್ತಿ ಹೆಸರನ್ನು ಶಿಫಾರಸು ಮಾಡಲಾಗಿದೆ. ಕರ್ನಾಟಕದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ (Justice B.V. Nagarathna) ಅವರ ಹೆಸರನ್ನು (First Woman Chief Justice Of India) ಶಿಫಾರಸು ಮಾಡಲಾಗಿದೆ. ನಾಗರತ್ನ ಅವರು ಕರ್ನಾಟಕ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ. ಸುಪ್ರೀಂ ಕೋರ್ಟ್​​ನ ಹಾಲಿ ಮುಖ್ಯ ನ್ಯಾಯಾಧೀಶರಾದ ಚೀಫ್​ ಜಸ್ಟೀಸ್​ ಎನ್​ ವಿ ರಮಣ (Chief Justice NV Ramana ) ನೇತೃತ್ವದ ಸುಪ್ರೀಂ ಕೋರ್ಟ್​ ಕೊಲಿಜಿಯಂ ಬಿ.ವಿ. ನಾಗರತ್ನ ಅವರ ಹೆಸರನ್ನು ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್​​ನ ಸಮಿತಿಯಿಂದ ಹೆಸರು ಶಿಫಾರಸು

ಬಿ.ವಿ. ನಾಗರತ್ನಅವರು ಸುಪ್ರೀಂ ಕೋರ್ಟ್​​ ಮುಖ್ಯ ನ್ಯಾಯಾಧೀಶೆಯಾಗಿ ನೇಮಕಗೊಂಡರೆ ಭಾರತಕ್ಕೆ ಮಹಿಳಾ ಸುಪ್ರೀಂ ನ್ಯಾಯಾಧೀಶೆ ಬೇಕೆಂಬ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ. ಇನ್ನು, ಕರ್ನಾಟಕ ಹೈಕೋರ್ಟ್ ಹಾಲಿ​ ಸಿಜೆ ಎ.ಎಸ್​. ಒಕಾ ಸುಪ್ರೀಂಕೋರ್ಟ್​ಗೆ ಪದೋನ್ನತಿ ಪಡೆಯಲಿದ್ದು, ಅವರ ಹೆಸರನ್ನು ಸಹ ಶಿಫಾರಸು ಮಾಡಲಾಗಿದೆ. ಸುಪ್ರೀಂ ಕೋರ್ಟ್​ ಕೊಲಿಜಿಯಂನಿಂದ 9 ಹೆಸರುಗಳು ಶಿಫಾರಸುಗೊಂಡಿವೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ವಿವಿಧ ರಾಜ್ಯಗಳ 9 ನ್ಯಾಯಮೂರ್ತಿಗಳ ಹೆಸರುಗಳನ್ನೂ ಶಿಫಾರಸು ಮಾಡಲಾಗಿದೆ.

Source: tv9 Kannada