IPL 2023 Points Table: ಆರೆಂಜ್, ಪರ್ಪಲ್ ಕ್ಯಾಪ್ ಆರ್ಸಿಬಿ ಪ್ಲೇಯರ್ಸ್ ಬಳಿ ಭದ್ರ
Orange-Purple Cap IPL 2023: ಡೆಲ್ಲಿ-ಎಸ್ಆರ್ಹೆಚ್ ಪಂದ್ಯಗ ಬಳಿಕ ಪಾಯಿಂಟ್ ಟೇಬಲ್ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.
![IPL 2023 Points Table: ಆರೆಂಜ್, ಪರ್ಪಲ್ ಕ್ಯಾಪ್ ಆರ್ಸಿಬಿ ಪ್ಲೇಯರ್ಸ್ ಬಳಿ ಭದ್ರ: ಪಾಯಿಂಟ್ ಟೇಬಲ್ ಹೇಗಿದೆ?](https://images.tv9kannada.com/wp-content/uploads/2023/04/IPL-2023-8.jpg?w=360)
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯಲ್ಲಿ 34 ಪಂದ್ಯಗಳು ಮುಕ್ತಾಯಗೊಂಡಿದೆ. ಕೆಲ ತಂಡಗಳಿಂದ ಊಹಿಸಲಾಗದ ಪ್ರದರ್ಶನ ಬರುತ್ತಿದೆ. ಎದುರಾಳಿಗೆ 200+ ಟಾರ್ಗೆಟ್ ನೀಡಿದರೂ ಚೇಸ್ ಮಾಡಿ ಗೆಲುವು ಸಾಧಿಸುವುದು ಈ ಬಾರಿಯ ಟೂರ್ನಿಯಲ್ಲಿ ಸಾಮಾನ್ಯವಾಗುತ್ತಿದೆ. ಇಂದು ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ (GT vs MI) ಮುಖಾಮುಖಿ ಆಗಲಿದೆ. ಸೋಮವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ರನ್ಗಳ ರೋಚಕ ಗೆಲುವು ಸಾಧಿಸಿತು. ಹಾಗಾದರೆ, ಡೆಲ್ಲಿ-ಎಸ್ಆರ್ಹೆಚ್ ಪಂದ್ಯಗ ಬಳಿಕ ಪಾಯಿಂಟ್ ಟೇಬಲ್ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.
- ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಎರಡರಲ್ಲಿ ಸೋಲು ಕಂಡು ಒಟ್ಟು 10 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲಿದೆ. +0.662 ರನ್ರೇಟ್ ಹೊಂದಿದೆ.
- ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಭರ್ಜರಿ ಆಟ ಪ್ರದರ್ಶಿಸುತ್ತಿದ್ದು ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು, ಮೂರರಲ್ಲಿ ಸೋಲುಂಡು +0.844 ರನ್ರೇಟ್ನೊಂದಿಗೆ 8 ಅಂಕ ಸಂಪಾದಿಸಿದೆ.
- ಲಖನೌ ಸೂಪರ್ ಜೇಂಟ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು, ಮೂರು ಸೋಲು ಕಂಡು 8 ಅಂಕ ಸಂಪಾದಿಸಿ +0.547 ರನ್ರೇಟ್ ಹೊಂದಿದೆ.
- ಗುಜರಾತ್ ಟೈಟಾನ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದ್ದು ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು, ಎರಡು ಸೋಲುಂಡು +0.212 ರನ್ರೇಟ್ನೊಂದಿಗೆ 8 ಅಂಕ ಸಂಪಾದಿಸಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಮೂರರಲ್ಲಿ ಸೋಲು ಕಂಡು 8 ಅಂಕ ಸಂಪಾದಿಸಿ -0.008 ರನ್ರೇಟ್ ಹೊಂದಿದೆ.
- ಪಂಜಾಬ್ ಕಿಂಗ್ಸ್ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕು ಸೋಲು-ಮೂರು ಜಯ ಕಂಡು 8 ಅಂಕ ಹೊಂದಿ -0.162ರನ್ರೇಟ್ನೊಂದಿಗೆ ಆರನೇ ಸ್ಥಾನದಲ್ಲಿದೆ.
- ಮುಂಬೈ ಇಂಡಿಯನ್ಸ್ ಏಳನೇ ಸ್ಥಾನದಲ್ಲಿದೆ. ಆಡಿದ ಆರು ಪಂದ್ಯದಲ್ಲಿ ತಲಾ ಮೂರು ಸೋಲು, ಮೂರು ಗೆಲುವು ಕಂಡು 6 ಅಂಕ ಸಂಪಾದಿಸಿ -0.254 ರನ್ರೇಟ್ ಹೊಂದಿದೆ.
- ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಪ್ಲೇಸ್ನಲ್ಲಿದೆ. ಆಡಿದ ಏಳು ಪಂದ್ಯಗಳಲ್ಲಿ ಎರಡು ಗೆಲುವು, ಐದರಲ್ಲಿ ಸೋಲುಂಡು -0.186 ರನ್ರೇಟ್ನೊಂದಿಗೆ 4 ಅಂಕ ಸಂಪಾದಿಸಿದೆ.
- ಸನ್ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯದಲ್ಲಿ ಐದರಲ್ಲಿ ಸೋಲು ಎರಡರಲ್ಲಿ ಜಯ ಕಂಡು 4 ಅಂಕ ಸಂಪಾದಿಸಿ -0.725 ರನ್ರೇಟ್ ಹೊಂದಿದೆ.
- ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳ ಪೈಕಿ ಕೇವಲ ಎರಡರಲ್ಲಷ್ಟೆ ಜಯ ಸಾಧಿಸಿ 4 ಅಂಕ ಸಂಪಾದಿಸಿ -0.961 ರನ್ರೇಟ್ ಹೊಂದಿದೆ.