ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 1 ಓವರ್ನಲ್ಲಿ ಬರೋಬ್ಬರಿ 31 ರನ್ ನೀಡಿ ದುಬಾರಿಯಾಗಿದ್ದ ಅರ್ಜುನ್ ತೆಂಡೂಲ್ಕರ್ Posted by admin | Apr 26, 2023 | News | 0 | ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 1 ಓವರ್ನಲ್ಲಿ ಬರೋಬ್ಬರಿ 31 ರನ್ ನೀಡಿ ದುಬಾರಿಯಾಗಿದ್ದ ಅರ್ಜುನ್ ತೆಂಡೂಲ್ಕರ್Apr 26, 2023 IPL 2023 Kannada: , ಮುಂಬೈ ಇಂಡಿಯನ್ಸ್ ತಂಡದ ಇತರೆ ಬೌಲರ್ಗಳು ದುಬಾರಿಯಾದ ಕಾರಣ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು. 1 / 7 IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 1 ಓವರ್ನಲ್ಲಿ ಬರೋಬ್ಬರಿ 31 ರನ್ ನೀಡಿ ದುಬಾರಿಯಾಗಿದ್ದ ಅರ್ಜುನ್ ತೆಂಡೂಲ್ಕರ್ ಇದೀಗ ಭರ್ಜರಿ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. 2 / 7 ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ದುಕೊಂಡಿತು. ಅಲ್ಲದೆ ಮೊದಲ ಓವರ್ ಅನ್ನು ಅರ್ಜುನ್ ತೆಂಡೂಲ್ಕರ್ಗೆ ನೀಡಿದರು. 3 / 7 ಮೊದಲ ಓವರ್ನಲ್ಲೇ ಕರಾರುವಾಕ್ ದಾಳಿ ಸಂಘಟಿಸಿದ ಅರ್ಜುನ್ ತೆಂಡೂಲ್ಕರ್ ನೀಡಿರುವುದು ಕೇವಲ 4 ರನ್ ಮಾತ್ರ. ಇದಾದ ಬಳಿಕ ಮೂರನೇ ಓವರ್ನ ಮೊದಲ ಎಸೆತದಲ್ಲೇ ವೃದ್ಧಿಮಾನ್ ಸಾಹ ವಿಕೆಟ್ ಪಡೆದರು. ಅಲ್ಲದೆ ಈ ಓವರ್ನಲ್ಲಿ ಕೇವಲ 5 ರನ್ ಮಾತ್ರ ನೀಡಿದ್ದರು. 4 / 7 ಅಂದರೆ ಪವರ್ಪ್ಲೇನಲ್ಲಿ 2 ಓವರ್ ಬೌಲಿಂಗ್ ಮಾಡಿದ್ದ ಅರ್ಜುನ್ ತೆಂಡೂಲ್ಕರ್ ಕೇವಲ 9 ರನ್ ನೀಡಿ 1 ವಿಕೆಟ್ ಪಡೆದಿದ್ದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ಅತ್ಯಂತ ಕಡಿಮೆ ರನ್ ನೀಡಿದ್ದು ಕೂಡ ಅರ್ಜುನ್ ತೆಂಡೂಲ್ಕರ್. 5 / 7 6 ಬೌಲರ್ಗಳೊಂದಿಗೆ ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ಪರ ಅರ್ಜುನ್ ತೆಂಡೂಲ್ಕರ್ ಅವರನ್ನು ಹೊರತುಪಡಿಸಿದರೆ, ಉಳಿದ ಎಲ್ಲಾ ಬೌಲರ್ಗಳು ದುಬಾರಿಯಾಗಿದ್ದರು. ಜೇಸನ್ ಬೆಹ್ರೆನ್ಡಾರ್ಫ್ 4 ಓವರ್ಗಳಲ್ಲಿ 37 ರನ್ ನೀಡಿದರೆ, ರಿಲೆ ಮೆರಿಡಿತ್ 4 ಓವರ್ಗಳಲ್ಲಿ 49 ರನ್ ಹೊಡೆಸಿಕೊಂಡಿದ್ದರು. 6 / 7 ಇನ್ನು ಕ್ಯಾಮರೋನ್ ಗ್ರೀನ್ 2 ಓವರ್ಗಳಲ್ಲಿ ಬರೋಬ್ಬರಿ 39 ರನ್ ಚಚ್ಚಿಸಿಕೊಂಡಿದ್ದರು. ಹಾಗೆಯೇ ಪಿಯೂಷ್ ಚಾವ್ಲಾ 4 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಕುಮಾರ್ ಕಾರ್ತಿಕೇಯ 4 ಓವರ್ಗಳಲ್ಲಿ 39 ರನ್ ನೀಡಿದ್ದರು. 7 / 7 ಇತ್ತ ಅರ್ಜುನ್ ತೆಂಡೂಲ್ಕರ್ ಪವರ್ಪ್ಲೇನಲ್ಲಿ 2 ಓವರ್ಗಳಲ್ಲಿ 9 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದರೂ, ಮುಂಬೈ ಇಂಡಿಯನ್ಸ್ ತಂಡದ ಇತರೆ ಬೌಲರ್ಗಳು ದುಬಾರಿಯಾದ ಕಾರಣ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು. Source: TV9KANNADA