India vs England: ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್: ಪ್ಲೇಯಿಂಗ್ XI, ಮಳೆ, ಪಿಚ್ ರಿಪೋರ್ಟ್: ಇಲ್ಲಿದೆ ಮಾಹಿತಿ
India vs England Preview: ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ ಮೈದಾನದಲ್ಲಿ ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಪಂದ್ಯಕ್ಕೆ ವರುಣನ ಕಾಟ ಇದೆಯೇ ಎಂಬುದನ್ನ ನೋಡುವುದಾದರೆ…
ಇಂಗ್ಲೆಂಡಿನಲ್ಲಿ ಈ ವರ್ಷ ಹವಾಮಾನ ತುಂಬಾನೆ ಪರಿಣಾಮಕಾರಿಯಾಗಿ ಗೋಚರಿಸಿದೆ. ಮುಂಗಾರು ಜೋರಾಗಿದ್ದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ನಿರಂತರ ಮಳೆ ಅಥವಾ ಮಂದ ಬೆಳಕಿನಿಂದಾಗಿ ಕೆಲವು ಪಂದ್ಯಗಳನ್ನು ರದ್ದುಗೊಳಿಸಿದರೆ ಇನ್ನೂ ಕೆಲವು ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲಾಯಿತು. ಭಾರತ ಹಾಗೂ ಇಂಗ್ಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು ಗೊತ್ತೇಯಿದೆ.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (ICC World Test Championships) ಎರಡನೇ ಆವೃತ್ತಿಯ ಚೊಚ್ಚಲ ಪಂದ್ಯ ಇದಾಗಿದ್ದು, ನ್ಯಾಟಿಂಗ್ಹ್ಯಾಮ್ ಕ್ರೀಡಾಂಗಣ ಸಂಪೂರ್ಣ ಸಜ್ಜಾಗಿ ನಿಂತಿದೆ. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಬಳಿಕ ಗೆಲುವಿನ ಲಯಕ್ಕೆ ಭಾರತ ಮರಳಬೇಕಿದೆ. ಇತ್ತ ಕ್ಯಾಪ್ಟನ್ ವಿರಾಟ್ ಕೊಹ್ಲಿಗೂ (Virat Kohli) ಗೆಲುವು ಅನಿವಾರ್ಯವಾಗಿದೆ. ಹೀಗೆ ಅನೇಕ ಕಾರಣಗಳಿಂದ ಈ ಟೆಸ್ಟ್ ಸರಣಿ ಸಾಕಷ್ಟು ಕುತೂಹಲ ಕೆರಳಿಸಿದೆ.
Source: Tv9 kannada