Coronavirus cases in India: ಭಾರತದಲ್ಲಿ 27,254 ಹೊಸ ಕೊವಿಡ್ ಪ್ರಕರಣಗಳು ಪತ್ತೆ, 219 ಮಂದಿ ಸಾವು

Sep 13, 2021

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 27,254 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿದ್ದು ದೇಶದ ಒಟ್ಟು ಪ್ರಕರಣ 3.32 ಕೋಟಿಗೆ ತಲುಪಿದೆ. ಇವುಗಳಲ್ಲಿ ಸಕ್ರಿಯ ಪ್ರಕರಣಗಳು 3.74 ಲಕ್ಷಕ್ಕಿಂತ ಜಾಸ್ತಿ ಇದೆ. 3.24 ಕೋಟಿ ಜನರು ಧನಾತ್ಮಕ ಪರೀಕ್ಷೆ ನಂತರ ಚೇತರಿಸಿಕೊಂಡಿದ್ದಾರೆ. 219 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 4.42 ಲಕ್ಷಕ್ಕಿಂತ ಹೆಚ್ಚಾಗಿದೆ. ಕೇರಳದಲ್ಲಿ ಭಾನುವಾರ 20,240 ಹೊಸ ಕೊರೊನಾವೈರಸ್ ಪ್ರಕರಣಗಳು ಮತ್ತು 67 ಸಾವುಗಳನ್ನು ದಾಖಲಿಸಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 43,75,431 ಕ್ಕೆ ಏರಿಕೆ. ಟೆಸ್ಟ್ ಪಾಸಿಟಿವಿಟಿ ದರ (ಟಿಪಿಆರ್) ಶೇ 17.51 ರಷ್ಟು ದಾಖಲಾಗಿದೆ. ಏತನ್ಮಧ್ಯೆ, ಮಹಾರಾಷ್ಟ್ರದಲ್ಲಿ ಭಾನುವಾರ 3,623 ಹೊಸ ಕೊವಿಡ್ -19 ಧನಾತ್ಮಕ ಪ್ರಕರಣಗಳು ಮತ್ತು 46 ಸಾವುಗಳು ದಾಖಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 50,400 ಸಕ್ರಿಯ ಪ್ರಕರಣಗಳಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜಂಟಿಯಾಗಿ ಕೊವಿಡ್ ಸಂಬಂಧಿತ ಸಾವುಗಳ ಸಂದರ್ಭದಲ್ಲಿ “ಅಧಿಕೃತ ದಾಖಲೆ” ನೀಡುವ ಮಾರ್ಗಸೂಚಿಗಳನ್ನು ಹೊರತಂದಿವೆ. ಈ ಮಾರ್ಗಸೂಚಿಗಳ ಪ್ರಕಾರ, ಕೊವಿಡ್ ಸಾವುಗಳಿಗೆ ಪರಿಹಾರ ಕೋರುವ ಪ್ರಕರಣದಲ್ಲಿ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಕರಣಗಳು, ಆರ್‌ಟಿ-ಪಿಸಿಆರ್/ ಆಂಟಿಜೆನ್ ಪರೀಕ್ಷೆ ಅಥವಾ ಆಸ್ಪತ್ರೆಯಲ್ಲಿ ವೈದ್ಯಕೀಯವಾಗಿ ನಿರ್ಧರಿಸಲಾದ ಪ್ರಕರಣಗಳು ವೈದ್ಯರಿಂದ ಒಳರೋಗಿ ಸೌಲಭ್ಯವಿದ್ದು, ಅಲ್ಲಿ ಒಬ್ಬರನ್ನು ದಾಖಲಿಸಿದರೆ ಕೊವಿಡ್ ಪ್ರಕರಣಗಳು ಎಂದು ಗುರುತಿಸಲಾಗುತ್ತದೆ.

ಛತ್ತೀಸ್‌ಗಡದಲ್ಲಿ 20 ಹೊಸ ಕೊವಿಡ್ ಪ್ರಕರಣ ದಾಖಲು, ಯಾವುದೇ ಸಾವು ಸಂಭವಿಸಿಲ್ಲ
ಛತ್ತೀಸ್‌ಗಡದಲ್ಲಿ 20 ಹೊಸ ಕೋವಿಡ್ -19 ಪ್ರಕರಣಗಳನ್ನು ಸೇರಿಸಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10,04,864 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹೊಸ ಪ್ರಕರಣಗಳನ್ನು ಭಾನುವಾರ ದಾಖಲಿಸಲಾಗಿದೆ, ಆದರೆ ಯಾವುದೇ ಹೊಸ ಸಾವು ವರದಿಯಾಗಿಲ್ಲ, ಸಾವಿನ ಸಂಖ್ಯೆ 13,558 ಎಂದು ಅವರು ಹೇಳಿದರು. ಮಾಹಿತಿಯ ಪ್ರಕಾರ ಭಾನುವಾರ ಒಟ್ಟು 28 ಜಿಲ್ಲೆಗಳಲ್ಲಿ 17 ರಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಆರು ಕೊವಿಡ್ -19 ರೋಗಿಗಳನ್ನು ಭಾನುವಾರ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಮತ್ತು 17 ಇತರರು ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ, ಇದು ಒಟ್ಟು ಚೇತರಿಕೆಯ ಸಂಖ್ಯೆಯನ್ನು 9,90,930 ಕ್ಕೆ ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ 28.36 ಲಕ್ಷ ಜನರಿಗೆ ಲಸಿಕೆ
ತಮಿಳುನಾಡಿನಲ್ಲಿ ಮೆಗಾ ವ್ಯಾಕ್ಸಿನೇಷನ್ ಅಭಿಯಾನದ ಭಾಗವಾಗಿ ಇಂದು ಒಟ್ಟು 28.36 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ.

ಆಂಧ್ರ ಪ್ರದೇಶದಲ್ಲಿ 1,190 ಹೊಸ ಕೊವಿಡ್ ಪ್ರಕರಣ
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 11 ಸಾವುಗಳು ದಾಖಲಾಗಿವೆ. ಇದು ಪ್ರಸ್ತುತ 15,110 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.

ಕರ್ನಾಟಕದಲ್ಲಿ ಭಾನುವಾರ 803 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 17 ಸಾವುಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 16,656 ಆಗಿದೆ. ಅದೇ ವೇಳೆ ಮಹಾರಾಷ್ಟ್ರದಲ್ಲಿ ಭಾನುವಾರ 3,623 ಹೊಸ ಕೊವಿಡ್ -19 ಧನಾತ್ಮಕ ಪ್ರಕರಣಗಳು ಮತ್ತು 46 ಸಾವುಗಳನ್ನು ದಾಖಲಿಸಿದೆ. ಪ್ರಸ್ತುತ ರಾಜ್ಯದಲ್ಲಿ 50,400 ಸಕ್ರಿಯ ಪ್ರಕರಣಗಳಿವೆ. ಮುಂಬೈಯಲ್ಲಿ 357 ಹೊಸ ಪ್ರಕರಣಗಳು ಮತ್ತು ಏಳು ಸಾವುಗಳನ್ನು ವರದಿ ಆಗಿದೆ.

ದೆಹಲಿಯಲ್ಲಿ 22 ಹೊಸ ಪ್ರಕರಣಗಳು, ಸಾವು ಪ್ರಕರಣ ಇಲ್ಲ
ದೆಹಲಿಯಲ್ಲಿ ಭಾನುವಾರ 22 ಹೊಸ ಕೊವಿಡ್ -19 ಪ್ರಕರಣಗಳು ಮತ್ತು ಶೂನ್ಯ ಸಾವುಗಳು ವರದಿಯಾಗಿವೆ. ರಾಷ್ಟ್ರೀಯ ರಾಜಧಾನಿಯಲ್ಲಿ ಧನಾತ್ಮಕ ದರವು ಶೇಕಡಾ 0.04 ರಷ್ಟಿದೆ. ಸಕ್ರಿಯ ಪ್ರಕರಣಗಳು 390 ಕ್ಕೆ ಇಳಿದಿವೆ. ಇಲ್ಲಿಯವರೆಗೆ, ಸೆಪ್ಟೆಂಬರ್‌ನಲ್ಲಿ ದೆಹಲಿ ಕೊವಿಡ್ -19 ನಿಂದ ಕೇವಲ ಒಂದು ಸಾವನ್ನು ವರದಿ ಮಾಡಿದೆ.

ಆಂಧ್ರ ಪ್ರದೇಶದಲ್ಲಿ 20 ಲಕ್ಷ ಗಡಿದಾಟಿದ ಕೊವಿಡ್ -19 ಚೇತರಿಕೆ ಸಂಖ್ಯೆ
ಆಂಧ್ರಪ್ರದೇಶದಲ್ಲಿ ಒಟ್ಟು ಕೊವಿಡ್ -19 ಚೇತರಿಕೆ ಪ್ರಕರಣಗಳ ಸಂಖ್ಯೆ 20 ಲಕ್ಷದ ಗಡಿ ದಾಟಿದೆ ಮತ್ತು 20,00,877 ಮಂದಿ ಚೇತರಿಸಿಕೊಂಡಿದ್ದಾರೆ. ಏಕೆಂದರೆ ಭಾನುವಾರ ಬೆಳಿಗ್ಗೆ 9 ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ 1,226 ಸೋಂಕಿತರು ಗುಣಮುಖರಾದರು. 24 ಗಂಟೆಗಳಲ್ಲಿ 1,190 ಸೇರ್ಪಡೆಯೊಂದಿಗೆ ಒಟ್ಟು ಕೊರೊನಾವೈರಸ್ ಪ್ರಕರಣಗಳು 20,29,985 ಕ್ಕೆ ಹೆಚ್ಚಾಗಿದೆ ಎಂದು ಇತ್ತೀಚಿನ ಬುಲೆಟಿನ್ ತಿಳಿಸಿದೆ.

Source:tv9kannada