Shiva Rajkumar: ಚಿತ್ರರಂಗದಲ್ಲಿ 35ವರ್ಷ ಪೂರೈಸಿದ ಶಿವರಾಜ್ಕುಮಾರ್ಗೆ ಪ್ರೀತಿಯಿಂದ ಶುಭ ಹಾರೈಸಿದ ಕಿಚ್ಚ ಸುದೀಪ್
Kichcha Sudeep ನಟಸಾರ್ವಭೌಮ ರಾಜಕುಮಾರ್ ಕುಟುಂಬದೊಟ್ಟಿಗೆ ಮೊದಲಿನಿಂದಲೂ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಸುದೀಪ್ ಹಾಗೂ ಶಿವರಾಜ್ಕುಮಾರ್ ಅಭಿನಯದ ದಿ ವಿಲನ್ ಸಿನಿಮಾ 2018ರಲ್ಲಿ ತೆರೆಕಂಡಿತ್ತು.
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಿನಿರಂಗಕ್ಕೆ ಕಾಲಿಟ್ಟು 35ವರ್ಷ ಕಳೆಯಿತು. ಈ ಸಂಭ್ರಮವನ್ನು ನಿನ್ನೆ ಅವರ ಅಭಿಮಾನಿಗಳು ಅದ್ದೂರಿಯಾಗಿ, 35 ಕೆ.ಜಿ ತೂಕದ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ. ತಮ್ಮ ನೆಚ್ಚಿನ ಶಿವಣ್ಣನಿಗೆ ಸನ್ಮಾನವನ್ನೂ ಮಾಡಿದ್ದಾರೆ. 1974ರಲ್ಲಿ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಾಲಕಲಾವದರಾಗಿದ್ದ ಶಿವರಾಜ್ ಕುಮಾರ್ ಅವರು, ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಆನಂದ್. 1986ರಲ್ಲಿ ತೆರೆಕಂಡ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಹಾಗೇ, ಮೊದಲ ಸಿನಿಮಾದಲ್ಲೇ ಶಿವರಾಜ್ ಕುಮಾರ್ ಅವರಿಗೆ ಉತ್ತಮ ನಟ ಎಂದು ಸಿನಿ ಎಕ್ಸ್ಪ್ರೆಸ್ ಪ್ರಶಸ್ತಿ ಕೂಡ ಬಂತು. ಅಂದಿನಿಂದ ಇಂದಿನವರೆಗೂ ಸ್ಯಾಂಡಲ್ವುಡ್ನ ಮೋಸ್ಟ್ ಎನರ್ಜಿಟಿಕ್ ನಟ ಎಂದೇ ಎನ್ನಿಸಿಕೊಂಡಿರುವ ಶಿವಣ್ಣಂಗೆ ಈಗ 58ನೇ ವರ್ಷ. ಒಂದೆರಡು ಬಾರಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರೂ ಸಿನಿಮಾ ಶೂಟಿಂಗ್ನಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ವಿಚಾರದಲ್ಲೆಂದೂ ಅಭಿಮಾನಿಗಳನ್ನು ನಿರಾಸೆ ಗೊಳಿಸಿಲ್ಲ.
ಸುದೀಪ್ ವಿಶ್
ಸುಮಾರು 117 ಸಿನಿಮಾಗಳಲ್ಲಿ ನಟಿಸಿರುವ ಶಿವರಾಜ್ಕುಮಾರ್ಗೆ ಅವರ ಸಿನಿರಂಗದ ಪ್ರಯಾಣಕ್ಕೆ 35ವರ್ಷ ಕಳೆದಿದ್ದು, ನಟ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ. ಟ್ವೀಟ್ ಮಾಡಿದ ಅಭಿನಯ ಚಕ್ರವರ್ತಿ, ಚಿತ್ರರಂಗದಲ್ಲಿ 30ವರ್ಷ ಪೂರೈಸಿದ ಅಸಾಧಾರಣ, ಬಹುಮುಖ ಪ್ರತಿಭೆಯ ನಟ ಶಿವಣ್ಣನವರಿಗೆ ನನ್ನ ಶುಭಹಾರೈಕೆಗಳು. ಇದು ಮಹತ್ತರವಾದ ಸಾಧನೆ. ಚಿತ್ರರಂಗದಲ್ಲಿ ನೀವು ನಿರ್ಮಿಸಿದ ಮೈಲಿಗಲ್ಲು, ದಾಖಲೆಗಳೇ ನಿಮ್ಮ ಬಗ್ಗೆ ಮಾತನಾಡುತ್ತವೆ. ನಿಮಗೆ ನನ್ನ ಪ್ರೀತಿಯ ಅಪ್ಪುಗೆ ಎಂದು ಹೇಳಿದ್ದಾರೆ.
My bst wshs to a fabuluous versatile actor @NimmaShivanna anna for completing 35 yrs of entertainment,,,a greatttt achievement. U have set bench marks n the records you hv set speak for you in volumes. Wshn you to find more happiness in the films you do. Mch luv and hugs.
🤗🥂— Kichcha Sudeepa (@KicchaSudeep) February 19, 2021
ಕಿಚ್ಚ ಸುದೀಪ್, ನಟಸಾರ್ವಭೌಮ ರಾಜಕುಮಾರ್ ಕುಟುಂಬದೊಟ್ಟಿಗೆ ಮೊದಲಿನಿಂದಲೂ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಸುದೀಪ್ ಹಾಗೂ ಶಿವರಾಜ್ಕುಮಾರ್ ಅಭಿನಯದ ದಿ ವಿಲನ್ ಸಿನಿಮಾ 2018ರಲ್ಲಿ ತೆರೆಕಂಡಿತ್ತು. ಈ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಿದ್ದರು. ಇನ್ನು ಸಿನಿಮಾ ಪ್ರಮೋಶನ್ಗಾಗಿ ಹಲವು ರಿಯಾಲಿಟಿ ಶೋಗಳಲ್ಲಿ ಸುದೀಪ್ ಮತ್ತು ಶಿವರಾಜ್ಕುಮಾರ್ ಭಾಗವಹಿಸಿದ್ದರು. ಇವರಿಬ್ಬರ ಮಧ್ಯೆ ಇರುವ ಬಾಂಧವ್ಯ ಆ ರಿಯಾಲಿಟಿ ಶೋಗಳಲ್ಲೂ ಕಾಣಿಸಿತ್ತು. ಹಾಗೇ, ಸುದೀಪ್ ಅವರ ಪೈಲ್ವಾನ್ ಸಿನಿಮಾ ಧ್ವನಿಸುರುಳಿಯನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು.
ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಸತತ ಮೂರು ಸಿನಿಮಾಗಳಲ್ಲಿ ಅದ್ಭುತ ಯಶಸ್ಸು ಕಂಡವರು ಶಿವರಾಜ್ ಕುಮಾರ್. ಇನ್ನು ಅವರ ನೃತ್ಯದ ಶೈಲಿಗಂತೂ ತುಂಬ ಜನ ಅಭಿಮಾನಿಗಳಿದ್ದಾರೆ. ಶಿವರಾಜ್ಕುಮಾರ್ಗೆ 2014ರಲ್ಲಿ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ತಮ್ಮ ಎಲ್ಲ ಯಶಸ್ಸಿಗೂ ಅಭಿಮಾನಿಗಳೇ ಕಾರಣ ಎನ್ನುವ ಶಿವಣ್ಣ, ಸದ್ಯ ಭಜರಂಗಿ-2 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
Source: TV9Kannada