‘ಕ್ಲೈಮ್ಯಾಕ್ಸ್, ಬಿಜಿಎಂ ಇಡೀ ಚಿತ್ರದ ದಿಕ್ಕನ್ನೇ ಬದಲಿಸಿದೆ’; ‘ಜೈಲರ್’ ನೋಡಿದ ಅಭಿಮಾನಿಗಳು ಫಿದಾ
ರಜನಿಕಾಂತ್ ವಯಸ್ಸು ಈಗ 72 ವರ್ಷ ದಾಟಿದೆ. ಆದರೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಾಸ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ಈಗ ಅವರ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಕೂಡ ನಟಿಸಿದ್ದಾರೆ. ಈ ಚಿತ್ರದ ವಿಮರ್ಶೆ ಇಲ್ಲಿದೆ.
ಸಿನಿಮಾ: ಜೈಲರ್
ಪಾತ್ರವರ್ಗ: ರಜನಿಕಾಂತ್, ಶಿವರಾಜ್ಕುಮಾರ್, ಮೋಹನ್ಲಾಲ್, ರಮ್ಯಾ ಕೃಷ್ಣ, ವಿನಾಯಕನ್ ಟಿ.ಕೆ. ಮೊದಲಾದವರು
ನಿರ್ದೇಶನ: ನೆಲ್ಸನ್ ದಿಲೀಪ್ ಕುಮಾರ್
ನಿರ್ಮಾಣ: ಸನ್ ಪಿಕ್ಚರ್ಸ್
ಸಂಗೀತ ಸಂಯೋಜನೆ: ಅನಿರುದ್ಧ್ ರವಿಚಂದರ್
ರೇಟಿಂಗ್: 3/5
Jailer Movie Twitter Review: ರಜನಿಕಾಂತ್ ಕಂಬ್ಯಾಕ್ ಫ್ಯಾನ್ಸ್ಗೆ ಇಷ್ಟವಾಗಿದೆ. ಅವರು ಮಾಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 70ರ ವಯಸ್ಸಲ್ಲೂ ಅವರು ಈ ರೀತಿ ನಟನೆ ಮಾಡಿದ್ದನ್ನೂ ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ.
‘ಜೈಲರ್’ ಸಿನಿಮಾ (Jailer Movie) ಬಗ್ಗೆ ಸೃಷ್ಟಿ ಆಗಿದ್ದ ಕ್ರೇಜ್ ಅಷ್ಟಿಷ್ಟಲ್ಲ. ರಜನಿಕಾಂತ್, ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ತಮನ್ನಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಟ್ರೇಲರ್ ಮೂಲಕ ಗಮನ ಸೆಳೆದಿತ್ತು. ಇಂದು (ಆಗಸ್ಟ್ 10) ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ರಜನಿಕಾಂತ್ (Rajanikanth) ಅಭಿಮಾನಿಗಳು ಚಿತ್ರವನ್ನು ನೋಡಿ ಸಖತ್ ಖುಷಿಪಟ್ಟಿದ್ದಾರೆ. ಎರಡು ಶೇಡ್ಗಳ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ನೋಡಿದ ಟ್ವಿಟರ್ ಮಂದಿ ಏನು ಹೇಳಿದ್ರು ಅನ್ನೋದಕ್ಕೆ ಇಲ್ಲಿದೆ ಉತ್ತರ.
ರಜನಿಕಾಂತ್ ಅವರ ನಟನೆಯ ‘ಅಣ್ಣಾಥೆ’ ಸಿನಿಮಾ 2021ರಲ್ಲಿ ರಿಲೀಸ್ ಆಯಿತು. ಎರಡು ವರ್ಷಗಳ ಬಳಿಕ ರಜನಿಕಾಂತ್ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿಕಾಂತ್ ಕಾಂಬೋ ವರ್ಕ್ ಆಗಿದೆ. ರಜನಿಕಾಂತ್, ಶಿವಣ್ಣ ನಟನೆ ಇಷ್ಟವಾಗಿದೆ.
ರಜನಿಕಾಂತ್ ಕಂಬ್ಯಾಕ್ ಫ್ಯಾನ್ಸ್ಗೆ ಇಷ್ಟವಾಗಿದೆ. ಅವರು ಮಾಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 70ರ ವಯಸ್ಸಲ್ಲೂ ಅವರು ಈ ರೀತಿ ನಟನೆ ಮಾಡಿದ್ದನ್ನೂ ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಪ್ಪ-ಮಗನ ಸೆಂಟಿಮೆಂಟ್ ಕೂಡ ಗಮನ ಸೆಳೆದಿದೆ.
ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಮಾಸ್ ಚಿತ್ರಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ‘ವಿಕ್ರಮ್’ ಚಿತ್ರದಲ್ಲಿ ಇದು ಸಾಬೀತಾಗಿತ್ತು. ಈಗ ಅವರು ತಮ್ಮನ್ನು ತಾವು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದ್ದಾರೆ. ಅವರ ಹಿನ್ನೆಲೆ ಸಂಗೀತಕ್ಕೆ ಟ್ವಿಟರ್ನಲ್ಲಿ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.
‘ಇದೊಂದು ಪಕ್ಕಾ ರಜನಿ ಸಿನಿಮಾ. ಥಿಯೇಟರ್ನಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣಿಯೋದು ಪಕ್ಕಾ’ ಎಂದು ಕೆಲವರು ಹೇಳಿದ್ದಾರೆ. ‘ಶಿವರಾಜ್ಕುಮಾರ್ ಅವರು ಇದ್ದಷ್ಟು ಹೊತ್ತು ಎಲ್ಲರನ್ನೂ ಖುಷಿಪಡಿಸುತ್ತಾರೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ‘ಬ್ಲಾಕ್ಬಸ್ಟರ್’ ಎಂದು ಘೋಷಿಸಿದ್ದಾರೆ.