Coronavirus cases in India ದೇಶದಲ್ಲಿ 2.47 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 380 ಮಂದಿ ಸಾವು
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,47,417 ಹೊಸ ಕೊವಿಡ್ -19 (Covid-19) ಪ್ರಕರಣಗಳು ವರದಿಯಾಗಿದ್ದು ಇದು ನಿನ್ನೆಗಿಂತ ಶೇ 27 ಹೆಚ್ಚಾಗಿದೆ. 84,825 ಚೇತರಿಕೆ ಮತ್ತು 380 ಸಾವುಗಳೊಂದಿಗೆ, ಸಕ್ರಿಯ ಪ್ರಕರಣಗಳು ಪ್ರಸ್ತುತ 11,17,531 ರಷ್ಟಿದೆ. ದೈನಂದಿನ ಸಕಾರಾತ್ಮಕತೆಯ ದರವು ಶೇ 13.11 ಕ್ಕೆ ಏರಿದೆ. ದೇಶದ ಒಮಿಕ್ರಾನ್ (Omicron) ಪ್ರಕರಣಗಳ ಸಂಖ್ಯೆ 5,488 ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ 1,367 ಪ್ರಕರಣಗಳು ಮತ್ತು ರಾಜಸ್ಥಾನದಲ್ಲಿ 792 ಪ್ರಕರಣಗಳು ದಾಖಲಾಗಿವೆ. ಏತನ್ಮಧ್ಯೆ, ದೆಹಲಿಯಲ್ಲಿ 549, ಕೇರಳದಲ್ಲಿ 486, ಕರ್ನಾಟಕದಲ್ಲಿ 479, ಪಶ್ಚಿಮ ಬಂಗಾಳ 294 ಮತ್ತು ಉತ್ತರ ಪ್ರದೇಶದಲ್ಲಿ 275 ಪ್ರಕರಣಗಳಿವೆ. ಕೊವಿಡ್ -19 ಪ್ರಕರಣಗಳಲ್ಲಿ ಇತ್ತೀಚಿನ ಒಮಿಕ್ರಾನ್ ಪ್ರಕರಣಗಳ ಉಲ್ಬಣದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಧ್ಯಾಹ್ನ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೇಶಾದ್ಯಂತ ಕೊರೊನಾವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಲು ವರ್ಚುವಲ್ ಸಭೆ ನಡೆಸಲಿದ್ದಾರೆ. ಆರೋಗ್ಯ ಸಚಿವಾಲಯವು ದೇಶದ ಕೇಸ್ ಪಾಸಿಟಿವಿಟಿ ದರದಲ್ಲಿ ತೀವ್ರ ಏರಿಕೆಯನ್ನು ಸೂಚಿಸಿದ ಒಂದು ದಿನದ ನಂತರ ಈ ನಿರ್ಧಾರ ಬಂದಿದೆ.
Source: tv9kannada