ಈ ಸಲವಾದರೂ ಕಪ್​ ನಮ್ದೇ? ಹೀಗಿದೆ ನೋಡಿ ಆರ್​​​ಸಿಬಿ ಹೊಸ ತಂಡ..

Feb 22, 2021

IPL RCB Full Squad 2021: 2020ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಕೊನೆಯಲ್ಲಿ ಎಡವಿತ್ತು. ಹೀಗಾಗಿ, ಈ ಬಾರಿ ಗೆಲ್ಲಲು ಯಾವೆಲ್ಲ ತಂತ್ರಗಳು ಬೇಕೋ ಅದಕ್ಕೆ ಪೂರಕವಾಗಿ ಎಲ್ಲವನ್ನೂ ಆರ್​ಸಿಬಿ ಮಾಡುತ್ತಿದೆ.

ಐಪಿಎಲ್​ ಹರಾಜಿನಲ್ಲಿ​ ಚಾಲೆಂಜರ್ಸ್​ ಬೆಂಗಳೂರು ತಂಡ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಮೂರು ಆಟಗಾರರು ಅನುಭವಿಗಳಾದರೆ, ಮತ್ತೆ ಐದು ಆಟಗಾರರು ಹೊಸಬರು. ಹಾಗಾದರೆ, ಆರ್​ಸಿಬಿ ಬಳಿ ಈಗ ಯಾರೆಲ್ಲ ಆಟಗಾರರು ಇದ್ದಾರೆ? ಯಾರನ್ನೆಲ್ಲ ಆರ್​ಸಿಬಿ ಖರೀದಿಸಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 2020ರ ಐಪಿಎಲ್​ ನಂತರ ಆರ್​ಸಿಬಿ ಕ್ರಿಸ್ ಮೊರಿಸ್, ಶಿವಂ ದುಬೆ, ಆರನ್ ಫಿಂಚ್, ಉಮೇಶ್ ಯಾದವ್, ಡೇಲ್ ಸ್ಟೇನ್, ಮೊಯೀನ್ ಅಲಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಇಸುರು ಉಡಾನಾ, ಗುರ್ಕೀರತ್ ಮನ್​ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಹೀಗಾಗಿ ಆರ್​ಸಿಬಿ ಬಳಿ ಆಟಗಾರರನ್ನು ಖರೀದಿಸಲು ಒಟ್ಟು 35.9 ಕೋಟಿ ಇತ್ತು.

ಆರ್​ಸಿಬಿ ಕಳೆದ 13 ಸೀಸನ್​ಗಳಿಂದ ಕಪ್​ ಎತ್ತಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಆದರೆ, ಈ ವರೆಗೆ ಅದು ಸಾಧ್ಯವಾಗಿಲ್ಲ. 2020ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಕೊನೆಯಲ್ಲಿ ಎಡವಿತ್ತು. ಹೀಗಾಗಿ, ಈ ಬಾರಿ ಗೆಲ್ಲಲು ಯಾವೆಲ್ಲ ತಂತ್ರಗಳು ಬೇಕೋ ಅದಕ್ಕೆ ಪೂರಕವಾಗಿ ಎಲ್ಲವನ್ನೂ ಆರ್​ಸಿಬಿ ಮಾಡುತ್ತಿದೆ.

ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಕೈಲ್‌ ಜೇಮಿಸ್ಸನ್ ಅವರನ್ನು 15 ಕೋಟಿ ರೂಪಾಯಿಗೆ ಆರ್​ಸಿಬಿ ಖರೀದಿಸಿದೆ. ನಿನ್ನೆ ನಡೆದ ಹರಾಜಿನಲ್ಲಿ ಆರ್​​ಸಿಬಿ ಖರೀದಿಸಿದ ದೊಡ್ಡ ಮೊತ್ತದ ಆಟಗಾರ ಇವರಾಗಿದ್ದಾರೆ. ಇನ್ನು ಗ್ಲೆನ್​ ಮ್ಯಾಕ್ಸ್​ವೆಲ್ 14.25 ಕೋಟಿ ರೂಪಾಯಿ ಹಾಗೂ ಡ್ಯಾನಿಯಲ್​ ಕ್ರಿಶ್ಚಿಯನ್​ಗೆ 4.80 ಕೋಟಿ ರೂಪಾಯಿ ನೀಡಿ ಖರೀದಿಸಿದೆ.

ಯುವ ಆಟಗಾರರಾರದ ಮೊಹಮ್ಮದ್​ ಅಜರುದ್ದೀನ್​, ಸುಯಶ್​ ಪ್ರಭುದೇಸಾಯಿ, ಕೆ.ಎಸ್.​ಭರತ್​, ಸಚಿನ್​ ಬೇಬಿ, ರಜತ್​ ಪಾಟೀದಾರ್ ಅವರನ್ನು ಬೇಸ್​ ಪ್ರೈಸ್​ 20 ಲಕ್ಷ ರೂಪಾಯಿ ನೀಡಿ ಖರೀದಿಸಿದೆ.

ಆರ್​ಸಿಬಿ ಹೊಸ ಪಟ್ಟಿಯಲ್ಲಿ ಇರುವವರ ಹೆಸರು..

ಎ.ಬಿ. ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಜೋಶ್​ ಫಿಲಿಪೆ, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್, ಗ್ಲೆನ್​ ಮ್ಯಾಕ್ಸ್​ವೆಲ್, ಕೈಲ್‌ ಜೇಮಿಸ್ಸನ್, ಡ್ಯಾನಿಯಲ್​ ಕ್ರಿಶ್ಚಿಯನ್, ಮೊಹಮ್ಮದ್​ ಅಜರುದ್ದೀನ್, ಸುಯಶ್​ ಪ್ರಭುದೇಸಾಯಿ, ಕೆ.ಎಸ್.​ಭರತ್​, ಸಚಿನ್​ ಬೇಬಿ,ರಜತ್​ ಪಾಟೀದಾರ್.

Source: TV9Kannada