Corona 3rd Wave: ಬೆಂಗಳೂರಿನಲ್ಲಿ ಕೊರೊನಾ 3ನೇ ಅಲೆ ಶುರು, 10 ದಿನಗಳಲ್ಲಿ 505 ಮಕ್ಕಳಲ್ಲಿ ಸೋಂಕು ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಸೋಂಕು ಪತ್ತೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಹೆಚ್ಚಾಗಿ ಮಕ್ಕಳಲ್ಲಿಯೇ ಹೆಚ್ಚು ಸೋಂಕು ಪತ್ತೆಯಾಗಿದೆ. ಕೊರೊನಾ ಮೂರನೇ ಅಲೆ ಭೀತಿ ನಡುವೆ ಈ ರೀತಿ ನಗರದ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದ್ದ ಮೂರನೇ ಅಲೆ ಈಗಾಗಲೇ ರಾಜ್ಯಕ್ಕೆ ಕಾಲಿಟ್ಟಿದೆ ಎಂಬ ಆತಂಕ ಹೆಚ್ಚಿದೆ.
ಆಗಸ್ಟ್ 1 ರಿಂದ 10ರ ತನಕ ಹತ್ತು ದಿನಗಳ ಅವಧಿಯಲ್ಲಿ 246 ಹೆಣ್ಣು ಮಕ್ಕಳು, 259 ಗಂಡು ಮಕ್ಕಳಲ್ಲಿ ಸೋಂಕು ಧೃಡಪಟ್ಟಿದೆ. ಒಟ್ಟಾರೆ 505 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.
ದಿನವಾರು ಮಕ್ಕಳಲ್ಲಿ ಸೋಂಕು ಪತ್ತೆ ವಿವರ
ದಿನಾಂಕ : ಹೆಣ್ಣುಮಕ್ಕಳು : ಗಂಡುಮಕ್ಕಳು: ಒಟ್ಟು ಸೋಂಕು
ಆಗಸ್ಟ್ 01 – 22+ 35 = 57
ಆಗಸ್ಟ್ 02 – 13 + 17 = 30
ಆಗಸ್ಟ್ 03 – 26+ 30 = 56
ಆಗಸ್ಟ್ 04 – 37+ 24 = 61
ಆಗಸ್ಟ್ 05 – 25+ 34 = 59
ಆಗಸ್ಟ್ 06 – 34 + 33 = 67
ಆಗಸ್ಟ್ 07 – 30 + 20 = 50
ಆಗಸ್ಟ್ 08 – 20 + 18 = 38
ಆಗಸ್ಟ್ 09 – 19 + 23 = 42
ಆಗಸ್ಟ್ 10 – 20 + 25 = 45
3ನೇ ಅಲೆ ಆತಂಕದ ಮಧ್ಯೆ ಮಕ್ಕಳಿಗೆ ಸೋಂಕು ಪತ್ತೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಕಾಲೇಜು ವಿದ್ಯಾರ್ಥಿಗಳಲ್ಲೂ ಕೊರೊನಾ ಲಕ್ಷಣಗಳು ಪತ್ತೆಯಾಗಿವೆ. ಇಂಥ ಸಮಯದಲ್ಲಿ ಶಾಲೆ ಆರಂಭ ಬೇಡವೆಂದು ತಜ್ಞರು ಸಲಹೆ ನೀಡಿದ್ದಾರೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
Source: tv9 kannada