ತಾಂತ್ರಿಕ ದೋಷದಿಂದ ಇಒಎಸ್-3 ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲ!

Aug 12, 2021

ದೆಹಲಿ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ (ISRO) ಭೂಮಿಯ ಅವಲೋಕನ ಉಪಗ್ರಹ ಇಒಎಸ್​-3 (EOS-3) ಇಂದು (ಆಗಸ್ಟ್ 12) ಬೆಳಿಗ್ಗೆ 5.45ಕ್ಕೆ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು. ಆದರೆ ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ. ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ವಿಫಲವಾಗಿದೆ ಎಂದು ತಿಳಿದುಬಂದಿದೆ. ಉಪಗ್ರಹ 2020ರ ಮಾರ್ಚ್​​ನಲ್ಲಿ ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ದೋಷ ಹಿನ್ನೆಲೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.

ಬೆಳಿಗ್ಗೆ 5.45ಕ್ಕೆ ಇಒಎಸ್-3 ಉಪಗ್ರಹ ಉಡಾವಣೆಯಾಗಿತ್ತು. ಆದರೆ ಕಕ್ಷೆಗೆ ತಲುಪುವಲ್ಲಿ ಇಒಎಸ್-3 ವಿಫಲವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್​ಎಲ್​ವಿ- ಎಫ್ 10 (GSLV-F10) ಮೂಲಕ ಉಪಗ್ರಹ ಉಡಾವಣೆಯಾಗಿತ್ತು.

ಇಒಎಸ್‌-3 ಉಪಗ್ರಹವು ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂದಾಗಿ ಗ್ರಹಿಸಲಿತ್ತು. ಇದನ್ನು ಜಿಯೋಸಿಂಕ್ರೋನಸ್‌ ಸೆಟಲೈಟ್‌ ಲಾಂಚ್‌ ವೆಹಿಕಲ್‌-ಎಫ್‌10 ಮೂಲಕ ಎಸ್‌ಡಿಎಸ್‌ಸಿಯ 2ನೇ ಲಾಂಚ್‌ಪ್ಯಾಡ್‌ನಿಂದ ಹೊತ್ತೊಯ್ದಿತ್ತು. ಆದರೆ ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷದ ಹಿನ್ನೆಲೆ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ.

Source: tv9 kannada