ವಿರುಷ್ಕಾ ದಂಪತಿ ಮಗಳ ಹೆಸರು ‘ವಮಿಕಾ’.. ಏನಿದರ ಅರ್ಥ?
ಮಗಳಿಗೆ ಇಟ್ಟಿರುವ ‘ವಮಿಕಾ’ ಎಂಬ ಹೆಸರು ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ವಮಿಕಾ ಅರ್ಥವೇನು? ಎಂದು ಹಲವರು ಹುಡುಕಾಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ದಂಪತಿ ತಮ್ಮ ಪುಟ್ಟ ಮಗಳ ಜೊತೆಗಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿರುಷ್ಕಾ ಕುಟುಂಬದ ಫೋಟೊ ಈಗ ಅಭಿಮಾನಗಳ ಗಮನ ಸೆಳೆದಿದೆ. ಮತ್ತೂ ವಿಶೇಷ ಎಂದರೆ, ಅನುಷ್ಕಾ ಶರ್ಮಾ ತಾವು ಬರೆದುಕೊಂಡಿರುವ ಕ್ಯಾಪ್ಶನ್ನಲ್ಲಿ ಮಗಳ ಹೆಸರನ್ನೂ ಹೇಳಿಕೊಂಡಿದ್ದಾರೆ. ಮಗಳಿಗೆ ‘ವಮಿಕಾ’ ಎಂದು ಹೆಸರಿಟ್ಟಿದ್ದಾರೆ! Vamika -Virushka couple Daughter
ನಾವು ನಮ್ಮ ಬದುಕನ್ನು ಪ್ರೀತಿ, ಕೃತಜ್ಞತೆಯಿಂದ ಜೀವಿಸಿದ್ದೇವೆ. ನಮ್ಮ ಮಗಳು ವಮಿಕಾ ಬದುಕನ್ನು ಮತ್ತೊಂದು ಮಟ್ಟಕ್ಕೆ ಏರಿಸಿದ್ದಾಳೆ ಎಂದು ಅನುಷ್ಕಾ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಶುಭ ಹಾರೈಕೆಯಿಂದ ನಮ್ಮ ಹೃದಯ ತುಂಬಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ನೂತನ ತಂದೆ-ತಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.
Source: TV9kannada