Budget 2021 | ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ನಿರ್ಮಲಾ ಸೀತಾರಾಮನ್ ಲೆಕ್ಕದ ಮುಖ್ಯ ವಿವರ

Feb 1, 2021

Budget 2021-22: ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.5 ರೂಪಾಯಿ ಏರಿಕೆಯಾಗಿದ್ದು, ಲೀಟರ್ ಡೀಸೆಲ್ ಬೆಲೆ 4 ರೂಪಾಯಿ ಏರಿಕೆ ಆಗಿದೆ.

ದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ ಬಜೆಟ್​ನಲ್ಲಿ ಬೆಲೆ ಇಳಿಕೆಯಾಗಿರುವ ವಸ್ತುಗಳ ಪಟ್ಟಿಗಿಂತ ದುಬಾರಿಯಾಗಿರುವ ವಸ್ತುಗಳ ಪಟ್ಟಿಯೇ ಜಾಸ್ತಿ ಇದೆ.

ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 2.5 ಏರಿಕೆಯಾಗಿದ್ದು, ಲೀಟರ್ ಡೀಸೆಲ್ ಬೆಲೆ ₹ 4 ಏರಿಕೆ ಆಗಿದೆ. ಚಿನ್ನ, ಬೆಳ್ಳಿ, ಚಿನ್ನದ ಗಟ್ಟಿ ಮೇಲೆ ಶೇ 2.5, ಮದ್ಯದ ಮೇಲೆ ಶೇ 100, ಕಚ್ಚಾ ತಾಳೆಎಣ್ಣೆ ಮೇಲೆ ಶೇ 17.5 ಕೃಷಿ ಸೆಸ್ ಮತ್ತು ಸೋಯಾಬೀನ್, ಸೂರ್ಯಕಾಂತಿ ಎಣ್ಣೆ ಸೆಸ್ ಹೇರಿಕೆಯಾಗಿದೆ.

ಸೇಬು ಹಣ್ಣಿನ ಮೇಲೆ ಶೇ 35ರಷ್ಟು ಕೃಷಿ ಸೆಸ್, ಕಲ್ಲಿದ್ದಲು, ಲಿಗ್ನೈಟ್ ಮತ್ತು ಪೀಟ್‌ಗೆ ಮೇಲೆ ಶೇ 1.5ರಷ್ಟು ಸೆಸ್, ಯೂರಿಯಾ ಸೇರಿ ಕೆಲ ರಸಗೊಬ್ಬರಗಳ ಮೇಲೂ ಸೆಸ್ ಹೇರಲಾಗಿದೆ.

ಇನ್ನುಳಿದಂತೆ ಬಟಾಣಿ ಮೇಲೆ ಶೇ 40, ಕಾಬುಲ್ ಕಡಲೆಯ ಮೇಲೆ ಶೇ 40, ಕಡಲೆಬೇಳೆ ಮೇಲೆ ಶೇ 50, ಬೇಳೆಕಾಳುಗಳ ಮೇಲೆ ಶೇ 20ರಷ್ಟು , ಹತ್ತಿಯ ಮೇಲೆ ಶೇ 5ರಷ್ಟು ಕೃಷಿ ಸೆಸ್ ಹೇರಿದ್ದು, ನಾಳೆಯಿಂದಲೇ (ಫೆ.2) ಕೃಷಿ ಮೂಲಸೌಕರ್ಯ ಸೆಸ್ ಜಾರಿಯಾಗಲಿದೆ.

ಯಾವುದು ಅಗ್ಗ?
ಕಬ್ಬಿಣ, ಉಕ್ಕು
ನೈಲಾನ್ ಬಟ್ಟೆ,
ತಾಮ್ರದ ಉತ್ಪನ್ನ
ವಿಮೆ
ವಿದ್ಯುತ್
ಸ್ಟೀಲ್ ಪಾತ್ರೆ
ಡ್ರೈ ಕ್ಲೀನಿಂಗ್
ಕೃಷಿ ಉಪಕರಣ

ಯಾವುದು ದುಬಾರಿ
ಇಲೆಕ್ಟ್ರಾನಿಕ್ ಉಪಕರಣ
ಮೊಬೈಲ್
ಚಾರ್ಜರ್
ಲೆದರ್ ಶೂ
ಕಾಬೂಲಿ ಕಡಲೆ
ಧಾನ್ಯ,
ಯೂರಿಯಾ,
ಆಟೊ ಬಿಡಿಭಾಗ,
ಹರಳುಗಳು

Source: TV9kannada