ರಾಜಕೀಯ ನಿವೃತ್ತಿ ಬಗ್ಗೆ ಗೊಂದಲಮಯ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್!

Mar 1, 2023

 

ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ ಅಂತ ಸೇಟ್ ಹೇಳುತ್ತಾರೆ. ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವಂತೆ ವರಿಷ್ಠರು ಸೂಚಿಸಿದ್ದಾರೆ ಅಂತಲೂ ಹೇಳುತ್ತಾರೆ.

ಮೈಸೂರು: ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಈ ಭಾಗದ ಪ್ರಭಾವಿ ಮುಸ್ಲಿಂ ನಾಯಕರಾಗಿರುವ ತನ್ವೀರ್ ಸೇಟ್ (Tanveer Sait) ನಿಸ್ಸಂದೇಹವಾಗಿ ಗೊಂದಲದಲ್ಲಿದ್ದಾರೆ. ತನ್ನ ಹಲ್ಲೆ ನಡೆದ ನಂತರ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಹೇಳುವ ಅವರು ರಾಜಕೀಯದಿಂದ ನಿವೃತ್ತನಾಗಬಯಸಿದ್ದು, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala), ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯನವರಿಗೆ ವಿಷಯ ತಿಳಿಸಿರುವುದಾಗಿ ಒಮ್ಮೆ ಹೇಳುತ್ತಾರೆ. ಮತ್ತೊಮ್ಮೆ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ ಅಂತ ಹೇಳುತ್ತಾರೆ. ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವಂತೆ ವರಿಷ್ಠರು ಸೂಚಿಸಿದ್ದಾರೆ ಅಂತಲೂ ಹೇಳುತ್ತಾರೆ.

 
Source: TV9KANNADA