ಮೇ ತಿಂಗಳಲ್ಲಿ ಕೊವಿಡ್ ಗಂಭೀರ ಸ್ಥಿತಿ ತಲುಪಲಿದೆ, ತಿಂಗಳ ಕೊನೆಯಲ್ಲಿ ಕಡಿಮೆಯಾಗಬಹುದು: ಐಐಟಿ ಕಾನ್ಪುರ್ ಪ್ರೊಫೆಸರ್

Apr 20, 2021

Coronavirus Second Wave: ಅಗ್ರವಾಲ್ ಅವರ ಅಧ್ಯಯನದ ಪ್ರಕಾರ ಮಹಾರಾಷ್ಟ್ರದಲ್ಲಿ ಈಗಾಗಲೇ ಸೋಂಕು ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರಿದೆ. ಉತ್ತರ ಪ್ರದೇಶ, ಗುಜರಾತ್,ದೆಹಲಿ,ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿಏಪ್ರಿಲ್ 20-30ರ ನಡುವೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಬಹುದು.

ದೆಹಲಿ: ಕೊರೊನಾವೈರಸ್​ನ ಎರಡನೇ ಅಲೆ ಭಾರತದಲ್ಲಿ ಭಾರೀ ಹಾನಿಯನ್ನುಂಟು ಮಾಡುತ್ತಿದೆ . ಈ ಹಾನಿಯನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಶತಾಗತಾಯ ಪ್ರಯತ್ನ ಮಾಡುತ್ತಿದೆ. ಏತನ್ಮಧ್ಯೆ, ಮೇ ತಿಂಗಳ ಮೊದಲವಾರದಲ್ಲಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು ತಿಂಗಳಾಂತ್ಯದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಾಣಬಹುದು ಎಂದು ಐಐಟಿ ಕಾನ್ಪುರ್ ಪ್ರಾಧ್ಯಾಪಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನಿಂದರ್ ಅಗ್ರವಾಲ್ ಹೇಳಿದ್ದಾರೆ. ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ್ ಜತೆ ಮಾತನಾಡಿದ ಅಗ್ರವಾಲ್, ತಮ್ಮ ತಂಡ ಕಳೆದ ಏಳು ದಿನಗಳಿಂದ ದೇಶದ ವಿವಿಧರಾಜ್ಯಗಳಲ್ಲಿ ವರದಿಯಾಗುತ್ತಿರುವ ಸರಾಸರಿ ಕೊವಿಡ್ ಪ್ರಕರಣಗಳನ್ನು ಅಧ್ಯಯನ ಮಾಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಗಣಿತದ ಮಾದರಿ ‘ಸೂತ್ರ’ವನ್ನು ಅನ್ವಯಿಸಿದಾಗ ಏಪ್ರಿಲ್ 15-20ರ ಅವಧಿಯಲ್ಲಿಸೋಂಕು ಪ್ರಕರಣಗಳು ಉತ್ತುಂಗಕ್ಕೇರಬಹುದು.ಮುಂದಿನ 15-20 ದಿನಗಳಲ್ಲಿ ಇದು ಮತ್ತೆ ದಿಢೀರನೆ ಕುಸಿಯಲಿದೆ ಎಂದು ಹೇಳಿದ್ದಾರೆ .

ಅಗ್ರವಾಲ್ ಅವರ ಅಧ್ಯಯನದ ಪ್ರಕಾರ ಮಹಾರಾಷ್ಟ್ರದಲ್ಲಿ ಈಗಾಗಲೇ ಸೋಂಕು ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರಿದೆ. ಉತ್ತರ ಪ್ರದೇಶ, ಗುಜರಾತ್,ದೆಹಲಿ,ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 20-30ರ ನಡುವೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಬಹುದು.ಉತ್ತರ ಪ್ರದೇಶದಲ್ಲಿ ಪ್ರತಿದಿನ ಸೋಂಕು ಪ್ರಕರಣಗಳ ಸಂಖ್ಯೆ 35,000ಕ್ಕೇರಬಹುದು.ಅದೇ ವೇಳೆ ದೆಹಲಿಯಲ್ಲಿ ಒಂದು ದಿನ 30,000, ಪಶ್ಚಿಮಬಂಗಾಳದಲ್ಲಿ 11,000, ರಾಜಸ್ಥಾನದಲ್ಲಿ 10,000 ಮತ್ತು ಬಿಹಾರದಲ್ಲಿ 9,000 ಗಡಿ ದಾಟುವ ಸಾಧ್ಯತೆ ಇದೆ

ತೀಕ್ಷ್ಣವಾದ ಏರಿಕೆಯಿಂದಾಗಿ ದಿನ ನಿತ್ಯ ಹೊಸ ಸೋಂಕುಗಳ ಗರಿಷ್ಟ ಪ್ರಮಾಣವನ್ನು ಊಹಿಸುವುದರಲ್ಲಿ ಕೆಲವು ಅನಿಶ್ಚಿತತೆ ಇದೆ. ಪ್ರಸ್ತುತ, ಇದು ದಿನಕ್ಕೆ ಒಂದು ಲಕ್ಷ ಸೋಂಕುಗಳು ವರದಿಯಾಗುತ್ತಿವೆ. ಆದರೆ ಇದು ಏರಿಕೆ ಅಥವಾ ಇಳಿಕೆ ಆಗಬಹುದು.ಏಪ್ರಿಲ್ 15-20ರ ನಡುವೆ ಈ ರೀತಿ ಸಂಭವಿಸಲಿದೆ.

ಉತ್ತರಾಖಂಡದಲ್ಲಿ ನಡೆದ ಕುಂಭ ಮೇಳ, ಚುನಾವಣಾ ಪ್ರಚಾರ ಕಾರ್ಯಕ್ರಮಗಳು ದೇಶದಲ್ಲಿ ಕೊರೊನಾವೈರಸ್ ವ್ಯಾಪಕವಾಗಿ ಏರಿಕೆಯಾಗಲು ಕಾರಣ ಎಂದು ಎಡಪಂಥೀಯ ಮಾಧ್ಯಮಗಳು ಮತ್ತು ವಿಪಕ್ಷಗಳು ಆರೋಪಿಸುತ್ತಿವೆ.ಆದರೆ ಈ ವಾದವನ್ನು ತಳ್ಳಿದ ಅಗ್ರವಾಲ್ ಕುಂಭಮೇಳ ಅಥವಾ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಂದಾಗಿ ಸಣ್ಣ ಪ್ರಮಾಣದಲ್ಲಿ ಮಾತ್ರ ಪ್ರಕರಣಗಳು ಹೆಚ್ಚಾಗಬಹುದು ಎಂದಿದ್ದಾರೆ. ಈ ಕಾರ್ಯಕ್ರಮಗಳಿಂದಾಗಿ ಪ್ರತಿದಿನ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಬಹುದು ಆದರೆ ಎರಡನೇ ಅಲೆಗೆ ಇದು ಖಂಡಿತಾ ಕಾರಣವಲ್ಲಎಂದಿದ್ದಾರೆ.

ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಲು ಚುನಾವಣಾ ಪ್ರಚಾರ ಕಾರ್ಯಕ್ರಮ ಮತ್ತುಕುಂಭಮೇಳವೇ ಕಾರಣವಾಗಿದ್ದರೆ ಮಹಾರಾಷ್ಟ್ರ ಮತ್ತುದೆಹಲಿಯಲ್ಲಿಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದೇಕೆ? ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಮತ್ತುಕುಂಭ ಮೇಳ ತೆರೆದ ಸ್ಥಳಗಳಲ್ಲಿ ನಡೆಯುವುದರಿಂದ ವೈರಸ್ ಹರಡುವ ಸಾಧ್ಯತೆ ಕಡಿಮೆ ಎಂದಿದಾದರೆ ಅಗ್ರವಾಲ್.

ಎರಡನೇ ಅಲೆಯ ಸಂಭವನೀಯ ವಿವರಣೆಯ ಬಗ್ಗೆ ಕೇಳಿದಾಗ, ಇದಕ್ಕೆ ಎರಡು ಕಾರಣಗಳಿವೆ ಅಥವಾ ಬಹುಶಃ ಇವೆರಡರ ಸಂಯೋಜನೆ ಇಲ್ಲಿದೆ . ಫೆಬ್ರವರಿಯಲ್ಲಿನ ಬದಲಾವಣೆಗಳು ಸೋಂಕು ಪ್ರಕರಣಗಳ ಏರಿಕೆಗೆ ಕಾರಣವಾಗ ಬಹುದು. ಫೆಬ್ರವರಿಯಲ್ಲಿ ಶಾಲೆ,ಕಾಲೇಜುಗಳನ್ನು ತೆರೆಯಲಾಯಿತು, ಜನರು ಗುಂಪು ಸೇರಿದರು.ಈ ಅಸಡ್ಡೆಯೇ ಎಲ್ಲದಕ್ಕೂಕಾರಣ.ಅದೇ ವೇಳೆ ರೂಪಾಂತರಿ ವೈರಸ್​ಗಳು ಬಹುಬೇಗನೆ ಹರಡುತ್ತಿದ್ದು ಇದು ಕೂಡಾ ರೋಗ ಹರಡಲು ಕಾರಣವಾಗಿದೆ.

ಕಾನ್ಪುರ್ ಐಐಟಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಅಗ್ರವಾಲ್ ಗಣಿತ ವಿಷಯದಲ್ಲಿ ಮೊದಲ ಇನ್ಫೋಸಿಸ್ ಪ್ರಶಸ್ತಿ ಮತ್ತು 2003 ರಲ್ಲಿ ಗಣಿತ ವಿಜ್ಞಾನದಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದವರು. ಇವರು ರಾಷ್ಟ್ರೀಯ ‘ಸೂಪರ್ ಮಾಡೆಲ್’ ಉಪಕ್ರಮದಲ್ಲಿ ಭಾಗಿಯಾಗಿದ್ದರು.

Source:TV9Kannada