ಬೆಂಗಳೂರು: ಕಸದಿಂದ ರಸ; ತ್ಯಾಜ್ಯದಿಂದ ವಿದ್ಯುತ್​ ಉತ್ಪಾದನೆ ಸ್ಥಾವರ ಅಕ್ಟೋಬರ್​ಗೆ ಕಾರ್ಯಾರಂಭ

Aug 4, 2023

ಬೆಂಗಳೂರಿನಲ್ಲಿನ ತ್ಯಾಜ್ಯದ ಒಂದು ಭಾಗವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲು ಬಳಕೆ ಮಾಡಲಾಗುತ್ತದೆ. ಇದರಿಂದ ತ್ಯಾಜ್ಯ ನಿರ್ವಹಣಾ ಘಟಕಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಹೌದು ಕಸದಿಂದ ರಸ ಎಂಬ ಮಾತಿನಂತೆ ನಗರದ ತ್ಯಾಜ್ಯದಿಂದ ವಿದ್ಯುತ್​ ಉತ್ಪಾದನೆಯಾಗುತ್ತದೆ.

ಬೆಂಗಳೂರು: ನಗರದಲ್ಲಿನ ತ್ಯಾಜ್ಯದ ಒಂದು ಭಾಗವನ್ನು ವಿದ್ಯುತ್ (Electricity) ಶಕ್ತಿಯನ್ನಾಗಿ ಪರಿವರ್ತಿಸಲು ಬಳಕೆ ಮಾಡಲಾಗುತ್ತಿದೆ. ಇದರಿಂದ ತ್ಯಾಜ್ಯ (Waste) ನಿರ್ವಹಣಾ ಘಟಕಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಹೌದು ಕಸದಿಂದ ರಸ ಎಂಬ ಮಾತಿನಂತೆ ತ್ಯಾಜ್ಯದಿಂದ ವಿದ್ಯುತ್​ ಉತ್ಪಾದನೆಯಾಗುತ್ತಿದೆ. ಹೌದು ಬಿಡದಿಯಲ್ಲಿ ಸ್ಥಾಪನೆಯಾಗುತ್ತಿರುವ ಕರ್ನಾಟಕದ ಮೊದಲ ತ್ಯಾಜ್ಯದಿಂದ ಇಂಧನ (BWTE) ಘಟಕ ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡಲಿ. 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಸ್ಥಾವರವು 11.5 ಮೆಗಾವ್ಯಾಟ್ ವಿದ್ಯುತ್​ ಉತ್ಪಾದನೆ ಮಾಡುತ್ತದೆ. ಇದು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಜಂಟಿ ಯೋಜನೆಯಾಗಿದೆ.

ಈ ಯೋಜನೆ ಯಶಸ್ವಿಯಾಗಲು ನಾವು ನಗರ ನಿಗಮಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕಾಗಿದೆ. ಏಕೆಂದರೆ ಅವುಗಳು ತ್ಯಾಜ್ಯವನ್ನು ಪೂರೈಸುತ್ತವೆ. ಬಿಡದಿಯಲ್ಲಿ ಮೊದಲ ಯೋಜನೆ ಬರುತ್ತಿದ್ದು, ಇನ್ನೆರಡು ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಉತ್ಪಾದನಾ ವೆಚ್ಚವು ಅಧಿಕವಾಗಿದೆ ಮತ್ತು ಆದ್ದರಿಂದ ಅಂತಹ ಹೆಚ್ಚಿನ ಘಟಕಗಳನ್ನು ಸ್ಥಾಪಿಸಲು ಸರ್ಕಾರವು ಸಿದ್ದವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು

ಕೆಪಿಸಿಎಲ್ ಹಿರಿಯ ಅಧಿಕಾರಿಗಳ ಪ್ರಕಾರ, ಸ್ಥಾವರದಲ್ಲಿ ಎಲ್ಲಾ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಈಗ ಅವರು ಉಪಕರಣಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಮೆಕ್ಯಾನಿಕಲ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಮತ್ತು ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುತ್ತವೆ. ಕಾರ್ಯಾಚರಣೆ ಪ್ರಾರಂಭದ ನಂತರ ಸ್ಥಾವರವು 600 ಮೆಟ್ರಿಕ್ ಟನ್ ಒಣ ತ್ಯಾಜ್ಯವನ್ನು ಸಂಸ್ಕರಿಸಿಸುತ್ತದೆ ಎಂದು ಕೆಪಿಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತ್ಯಾಜ್ಯದಿಂದ ವಿದ್ಯುತ್​​ ಉತ್ಪಾದನಾ ವೆಚ್ಚ ಅಧಿಕವಾಗಿದೆ. ನಾವು ಪ್ರತಿ ಯೂನಿಟ್‌ಗೆ ಸುಮಾರು 8 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಕೆಲವು ಕೇಂದ್ರ ಸರ್ಕಾರದ ಸಬ್ಸಿಡಿಗಳಿಗೆ ಅರ್ಜಿ ಸಲ್ಲಿಸುತ್ತೇವೆ. ಮತ್ತು ನಮ್ಮ ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಮಾಹಿತಿ ಪಡೆಯುತ್ತೇವೆ . ಮೊದಲ ಸ್ಥಾವರವು ಕಾರ್ಯಾರಂಭ ಮಾಡಿದ ನಂತರ, ನಾವು ಇದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಚಿಂತಿಸುತ್ತೇವೆ ಎಂದು ಹೇಳಿದರು.

WTE ಸ್ಥಾವರಗಳು ಸಾಮಾನ್ಯವಾಗಿ ಒಣ ತ್ಯಾಜ್ಯವನ್ನು ಬಳಸುತ್ತವೆ. ಒಣ ತ್ಯಾಜ್ಯವನ್ನು ಹೆಚ್ಚಿನ ತಾಪಮಾನದಲ್ಲಿ ಸುಡಲಾಗುತ್ತದೆ ಮತ್ತು ಉತ್ಪತ್ತಿಯಾಗುವ ಶಾಖವನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ.

ಬಿಎಸ್​ ಯಡಿಯೂರಪ್ಪ ಶಂಕುಸ್ಥಾಪನೆ

ಈ ಯೋಜನೆಗೆ 2020ರಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಉತ್ಪಾದಿಸುವ 5,000 ಟನ್ ತ್ಯಾಜ್ಯದಲ್ಲಿ ಸುಮಾರು 800 ಟನ್​​ನಷ್ಟು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಕೆಪಿಸಿಎಲ್) ವಿದ್ಯುತ್ ಪೂರೈಸಲು ಬಳಸಲಾಗುತ್ತದೆ. ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇಷ್ಟು ಪ್ರಮಾಣದ ಕಸ ವಿಲೇವಾರಿ ಮತ್ತು ನಿರ್ವಹಣೆಗೆ ವ್ಯಯಿಸುತ್ತಿರುವ ವಾರ್ಷಿಕ 14 ಕೋಟಿ ರೂ. ಉಳಿತಾಯವಾಗುತ್ತದೆ.

 

Source: TV9 KARNATAKA