ಪ್ರಧಾನಿ ಮೋದಿಯನ್ನು ಸ್ವಾಗತಿಸಲು ತ್ರಿವರ್ಣ ಧ್ವಜದ ರಂಗಿನಲ್ಲಿ ಬೆಳಗಿದ ನ್ಯೂಯಾರ್ಕ್‌ನ ಪ್ರಸಿದ್ಧ ಕಟ್ಟಡಗಳು Posted by admin | Jun 24, 2023 | News | 0 | ಅಮೆರಿಕಕ್ಕೆ ಐತಿಹಾಸಿಕ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ನ್ಯೂಯಾರ್ಕ್‌ನ ಪ್ರಸಿದ್ಧ ಕಟ್ಟಡಗಳು ತ್ರಿವರ್ಣ ಧ್ವಜದ ರಂಗಿನಲ್ಲಿ ಬೆಳಗಿವೆ. ಅಲ್ಲಿನ ಚಿತ್ರಗಳನ್ನು ನೋಡಿ ಕಣ್ತುಂಬಿಕೊಳ್ಳಿ 1 / 9 ನ್ಯೂಯಾರ್ಕ್‌ನಲ್ಲಿರುವ ಎಂಪೈರ್ ಸ್ಟೇಟ್ ಕಟ್ಟಡವು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದು ಹೀಗೆ 2 / 9 ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ನ್ಯೂಯಾರ್ಕ್ ನಗರದ ಲೋವರ್ ಮ್ಯಾನ್‌ಹ್ಯಾಟನ್‌ನಲ್ಲಿರುವ ಒನ್ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡವು ತ್ರಿವರ್ಣ ಧ್ವಜದ ಬಣ್ಣದಲ್ಲಿ ಬೆಳಗಿರುವುದು. 3 / 9 ಒನ್ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡವು ತ್ರಿವರ್ಣ ಧ್ವಜದ ಬಣ್ಣದಲ್ಲಿ ಬೆಳಗಿರುವ ವಿಡಿಯೊ ಟ್ವೀಟ್ ಮಾಡಿದ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ 4 / 9 ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಶುಕ್ರವಾರ ಟ್ವೀಟ್ ಮಾಡಿದ ಒನ್ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡ 5 / 9 ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮತ್ತು ರಫ್ತು ಮಾಡುವ ಅಂತಹ ಎಲ್ಲಾ ಶಕ್ತಿಗಳನ್ನು ನಾವು ಜಯಿಸಬೇಕು ಎಂದು ಅವರು ಗುರುವಾರ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದಾರೆ 6 / 9ಪ್ರಧಾನಿ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಇಂದು ವಿದೇಶಾಂಗ ಇಲಾಖೆಯ ಉಪಾಹಾರ ಕೂಟ ಮತ್ತು ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 7 / 9 ಭಾರತ-ಯುಎಸ್ ಸ್ನೇಹವು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದಾರೆ. 8 / 9 ಶ್ವೇತಭವನದಲ್ಲಿ ನಡೆದ ರಾಜ್ಯ ಔತಣಕೂಟದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ, ಭಾರತೀಯ ಅಮೆರಿಕನ್ನರು ಯುಎಸ್‌ನಲ್ಲಿ ಬಹಳ ದೂರ ಸಾಗಿದ್ದಾರೆ. ಅಮೆರಿಕದಲ್ಲಿ ಅವರು ಯಾವಾಗಲೂ ಗೌರವಾನ್ವಿತ ಸ್ಥಾನವನ್ನು ಕಂಡುಕೊಂಡಿದ್ದಾರೆ. ಭಾರತೀಯ ಅಮೆರಿಕನ್ನರು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ 9 / 9 ಗುರುವಾರ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ಭಯೋತ್ಪಾದನೆಯನ್ನು “ಮಾನವೀಯತೆಯ ಶತ್ರು” ಎಂದು ಹೇಳಿದ್ದಾರೆ. Source: TV9 Kannada ಪ್ರಧಾನಿ ಮೋದಿಯನ್ನು ಸ್ವಾಗತಿಸಲು ತ್ರಿವರ್ಣ ಧ್ವಜದ ರಂಗಿನಲ್ಲಿ ಬೆಳಗಿದ ನ್ಯೂಯಾರ್ಕ್‌ನ ಪ್ರಸಿದ್ಧ ಕಟ್ಟಡಗಳುJun 24, 2023