ನಟ ಯಶ್ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಿಸುವ ವಿಚಾರ, ಗ್ರಾಮಸ್ಥರು ಹೇಳೋದೇನು? ಅಸಲಿ ಸತ್ಯ ಇಲ್ಲಿದೆ
Yash: ಗ್ರಾಮದ ರೈತರಾದ ರಮೇಶ್, ಕಾಂತರಾಜ್ ದೂರು ಹಿನ್ನೆಲೆಯಲ್ಲಿ ಇಂದು ಕೂಡ ಯಶ್ ಕುಟುಂಬ ಪೊಲೀಸ್ ಠಾಣೆಗೆ ಆಗಮಿಸಲಿದೆ. ಹಾಗೂ ಪೊಲೀಸರು ಯಶ್ ಪೋಷಕರ ಹೇಳಿಕೆ ದಾಖಲಿಸಲಿದ್ದಾರೆ.
ಹಾಸನ: ನಟ ಯಶ್ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಿಸುವ ವಿಚಾರವಾಗಿ, ಹಾಸನ ತಾಲೂಕಿನ ದುದ್ದ ಹೋಬಳಿಯ ತಿಮ್ಮಾಪುರ ಗ್ರಾಮದ ಬಳಿ ಯಶ್ ತಂದೆ-ತಾಯಿ ಹಾಗೂ ಗ್ರಾಮಸ್ಥರ ನಡುವೆ ಮಂಗಳವಾರ ಗಲಾಟೆ ನಡೆದಿತ್ತು. ಈ ಸಂಬಂಧ ಬಹುತೇಕ ಬೆಳವಣಿಗೆಗಳು ನಡೆದಿವೆ. ಇಂದೂ ಸಹ ದುಡ್ಡ ಪೊಲೀಸ್ ಠಾಣೆಗೆ ಯಶ್ ಮತ್ತು ಪೋಷಕರು ಭೇಟಿ ನೀಡಲಿದ್ದು ಇಂದೂ ಸಹ ಬೆಳವಣೆಗೆಗಳಾಗುವ ಸಾಧ್ಯತೆ ಇದೆ. ಆದ್ರೆ ರಾಕಿಂಗ್ ಸ್ಟಾರ್’ ಕುಟುಂಬದ ವಿರುದ್ಧ ಯಾಕಿಂಥಾ ಆರೋಪ? ‘ಮಾಸ್ಟರ್ಪೀಸ್’ ಜಮೀನಿನ ಬಳಿ ನಿಜಕ್ಕೂ ಆಗಿದ್ದು ಏನು? ಜಮೀನಿಗಾಗಿ ಯಾಱರ ನಡುವೆ ಜಂಗೀಕುಸ್ತಿ ನಡೆಯುತ್ತಿದೆ? ಪ್ರಕರಣ ಅಸಲಿ ಸತ್ಯ ಏನು? ಈ ಬಗ್ಗೆ ಗ್ರಾಮಸ್ಥರು ಹೇಳೋದೇನು? ಎಂಬ ಮಾಹಿತಿ ಇಲ್ಲಿದೆ ಓದಿ.
ಜಮೀನಿನ ಬಳಿ ನಡೆದಿದ್ದೇನು?
ಯಶ್ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ನಟ ಯಶ್ ತಂದೆ-ತಾಯಿ ಮತ್ತು ಗ್ರಾಮಸ್ಥರ ನಡುವೆ ಮಂಗಳವಾರ ಗಲಾಟೆ ನಡೆದಿತ್ತು. ಯಶ್ ತಂದೆ ಅರುಣ್ ಕುಮಾರ್, ತಾಯಿ ಪುಷ್ಪ ಜಮೀನಿನ ಬಳಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಕೆಲಸ ಮಾಡಿಸದಂತೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ. ಬಳಿಕ ಯಶ್ ಅಭಿಮಾನಿಗಳು ಮತ್ತು ಗ್ರಾಮಸ್ಥರ ನಡುವೆ ಗಲಾಟೆ ಶುರುವಾಗಿ ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ದುದ್ದ ಪೊಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿತ್ತು.
ಇನ್ನು ಘಟನೆ ಸಂಬಂಧ ಮಾಹಿತಿ ಪಡೆಯಲು ಪೊಲೀಸ್ ಠಾಣೆಗೆ ನಟ ಯಶ್ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಅವರು ‘ರಸ್ತೆ ವಿವಾದ ಒಂದೂವರೆ ವರ್ಷದ ಹಿಂದೆಯೇ ಮುಗಿದಿದೆ. ಹೀಗೆಲ್ಲ ಬಣ್ಣ ಕಟ್ಟುತ್ತಾರೆ, ನೀವು ನಂಬುವುದಕ್ಕೆ ಹೋಗಬೇಡಿ. ತಂದೆ, ತಾಯಿಗೆ ಮಾತಾಡಿದ್ರೆ ಇಮೇಜ್ ಎಂದು ಕೂರಲಾಗಲ್ಲ. ಬಡವರಿಗೆ ಸ್ಕೂಲ್ ನಿರ್ಮಿಸ್ತಾರಾ.. ಬೇಕಿದ್ದರೆ ಕೇಳಲಿ ಕೊಡ್ತೇವೆ. ನಾವೇ ಹತ್ತು ಎಕರೆ ಜಮೀನು ಕೊಡುತ್ತೇವೆ’ ಎಂದು ದುದ್ದ ಪೊಲೀಸ್ ಠಾಣೆ ಬಳಿ ನಟ ಯಶ್ ಘಟನೆ ಸಂಬಂಧ ಬೇಸರ ವ್ಯಕ್ತಪಡಿಸಿದ್ದರು. ಈ ವೇಳೆ ನಟ ಯಶ್ ಕಾರು ತಡೆದು ಗ್ರಾಮಸ್ಥರು 420 ಯಶ್ ಎಂದು ಕೂಗಿ ಆಕ್ರೋಶ ಹೊರ ಹಾಕಿದ್ರು. ನಂತರ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಇನ್ನು ಈ ಸಂಬಂಧ ಗ್ರಾಮದ ರೈತರಾದ ರಮೇಶ್, ಕಾಂತರಾಜ್ ದೂರು ಹಿನ್ನೆಲೆಯಲ್ಲಿ ಇಂದು ಕೂಡ ಯಶ್ ಕುಟುಂಬ ಪೊಲೀಸ್ ಠಾಣೆಗೆ ಆಗಮಿಸಲಿದೆ. ಹಾಗೂ ಪೊಲೀಸರು ಯಶ್ ಪೋಷಕರ ಹೇಳಿಕೆ ದಾಖಲಿಸಲಿದ್ದಾರೆ.
ಪ್ರಕರಣ ಸಂಬಂಧ ಗ್ರಾಮಸ್ಥರು ಹೇಳೋದೇನು?
ನಟ ಯಶ್ ಬಗ್ಗೆ ನಮಗೆ ಅಭಿಮಾನ ,ಗೌರವ ಇದೆ. ಅವರು ಈಗ ಯಾಕೆ ಈತರ ಮಾಡುತ್ತಿದ್ದಾರೆ ಗೋತ್ತಿಲ್ಲ. ಯಶ್‌ಗೆ ಗೌರವ ಕೊಟ್ಟು ರಸ್ತೆಗಾಗಿ ಜಾಗ ಕೊಟ್ಟಿದ್ದೆವು. ಒಂದೂವರೆ ವರ್ಷದ ಹಿಂದೆಯೇ ಜಾಗವನ್ನು ನೀಡಿದ್ದೆವು. ಈಗ ಮತ್ತೆ ರೈತರ ಜಮೀನಿನಲ್ಲಿ ರಸ್ತೆ ಬೇಕೆನ್ನುತ್ತಿದ್ದಾರೆ. ನಟ ಯಶ್‌ಗೆ ಈ ವಿಷಯ ಗೊತ್ತೋ ಇಲ್ವೋ ಗೊತ್ತಿಲ್ಲ. ಈಗ ಪೊಲೀಸ್ ಠಾಣೆಗೆ ಹೋಗುವ ಬದಲು . ನಮ್ಮ ಬಳಿ ಬಂದು ಮಾತಾಡಿದ್ರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಟಿವಿ9ಗೆ ಹಾಸನ ತಾಲೂಕಿನ ತಿಮ್ಲಾಪುರ ನಿವಾಸಿ ಹೇಳಿದ್ದಾರೆ.
ಜಮೀನು ಮಾಲೀಕರು ಹೇಳೋದೇನು?
ರಸ್ತೆ ನಿರ್ಮಾಣ ಮಾಡುವುದಕ್ಕೆ ಜಮೀನು ಕೊಡುವುದಿಲ್ಲ ಎಂದು ಜಮೀನು ಮಾಲೀಕರಾದ ಕೃಷ್ಣೇಗೌಡ, ಸಿದ್ದರಾಮು ಹೇಳಿದ್ದಾರೆ. ನಮ್ಮನ್ನು ಕೇಳದೆ ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಿಸ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲವೆಂದು ಅವರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಜಮೀನಿನಲ್ಲಿ ಅವರು ರಸ್ತೆ ನಿರ್ಮಿಸುವುದಾದರೆ ಅವರ ಜಮೀನಿನಲ್ಲಿ ನಮಗೆ ಭೂಮಿಯನ್ನು ನೀಡಲಿ. ಅವರು ರಸ್ತೆಗೆ ಬಳಸಿಕೊಂಡಷ್ಟು ಜಮೀನು ನೀಡಲಿ. ನಮಗೆ ಇರುವುದೇ ಎರಡು ಎಕರೆ ಜಮೀನು ಮಾತ್ರ. ಅದನ್ನೂ ರಸ್ತೆಗೆ ಎಂದು ಇವರು ಬಳಸಿಕೊಂಡ್ರೆ ಹೇಗೆ? ನಾವು ಹೇಗೆ ಜೀವನ ಮಾಡುವುದು ಎಂದು ಜಮೀನು ಮಾಲೀಕ ಕೃಷ್ಣೇಗೌಡ ಪ್ರಶ್ನಿಸಿದ್ದಾರೆ.
Source: TV9Kannada