ಅ.೭ರಿಂದ ಅರಮನೆಯಲ್ಲಿ ಖಾಸಗಿ ದರ್ಬಾರ್ ಪ್ರತಿ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಜಂಬೂಸವಾರಿ ಮುಹೂರ್ತ…

Oct 4, 2021

ಬೆಳಗ್ಗೆ ೮.೧೫ರಿಂದ ೮.೪೫ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಿಎಂ ಎಸ್.ಎಂ.ಕೃಷ್ಣ ಉದ್ಘಾಟಿಸಲಿದ್ದಾರೆ. ಅ.೧೫ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಜರುಗಲಿದ್ದು, ಅಂದು ಸಂಜೆ ೪.೩೬ ರಿಂದ ೪.೪೬ರೊಳಗೆ ಅರಮನೆಯ ಉತ್ತರದ್ವಾರದ ಬಳಿ ಸಿಎಂ ಬಸವರಾಜ ಬೊಮ್ಮಾಯಿ ನಂದಿ ಪೂಜೆ ನೆರವೇರಿಸಲಿದ್ದಾರೆ. ಸಂಜೆ ೫ ರಿಂದ ೫.೩೬ರೊಳಗೆ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ೨೦೨೧ನೇ ಸಾಲಿನ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಮೈಸೂರು, ಅ.೩(ಎಂಟಿವೈ)-ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಅ.೭ ರಿಂದ ೧೪ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಖಾಸಗಿ ದರ್ಬಾರ್ ನಡೆಯಲಿದ್ದು, ಅ.೧೫ರಂದು ಜಂಬೂ ಸವಾರಿ ಮೆರವಣ ಗೆ ಸಂಪ್ರದಾಯ ದಂತೆ ಅರಮನೆಯಲ್ಲಿ ನೆರವೇರಲಿದೆ.
ನವರಾತ್ರಿಯ ವೇಳೆ ಮೈಸೂರು ಅರಮನೆಯಲ್ಲಿ ರಾಜ ವಂಶಸ್ಥರು ವಿವಿಧ ಧಾರ್ಮಿಕ ಕಾರ್ಯ ಮತ್ತು ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ನವರಾತ್ರಿಯ ಮೊದಲ ದಿನವಾದ ಅ.೭ರಂದು ಮುಂಜಾನೆ ೪.೩೦ರಿಂದಲೇ ಅರಮನೆಯ ದೇವರ ಮನೆಯಲ್ಲಿ ಪೂಜಾ ಕೈಂಕರ್ಯ ಜರುಗ ಲಿದೆ. ಅಂದು ಬೆಳಗ್ಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತç ಮಾಡಿಸುವ ಮೂಲಕ ಖಾಸಗಿ ದರ್ಬಾರ್‌ಗೆ ಚಾಲನೆ ನೀಡಲಾಗುವುದು.
ನಂತರ ಬೆಳಗ್ಗೆ ೬ ರಿಂದ ೬.೧೧ರವರೆಗಿನ ಕನ್ಯಾ ಲಗ್ನದಲ್ಲಿ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಜೋಡಿಸಿಡಲಾಗಿರುವ ಸಿಂಹಾ ಸನಕ್ಕೆ ವಜ್ರಖಚಿತ ಸಿಂಹದ ತಲೆ ಜೋಡಣೆ ಮಾಡಲಾಗುತ್ತದೆ. ಬಳಿಕ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಬೆಳಗ್ಗೆ ೭.೪೫ ರಿಂದ ೮.೫೫ರ ತುಲಾ ಲಗ್ನದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ. ವಾಣ ವಿಲಾಸ ದೇವರ ಮನೆಯಲ್ಲಿ ತ್ರಿಶಿಕ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ.
ಬೆಳಗ್ಗೆ ೧೧.೪೫ ರಿಂದ ಮಧ್ಯಾಹ್ನ ೧೨.೧೫ರ ನಡುವೆ ಧನುರ್ ಲಗ್ನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಖಾಸಗಿ ದರ್ಬಾರ್ ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಹೋಗಿ ಬಿಜಯ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮೊದಲ ದಿನದ ಖಾಸಗಿ ದರ್ಬಾರ್ ಸಮಾಪ್ತಿಗೊಳ್ಳಲಿದೆ.

ಅ.೬ ರಿಂದ ೧೪ರವರೆಗೆ ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ಜರುಗಲಿದೆ. ಆಶ್ವಯುಜ ಮಾಸ ಶುಕ್ಲಪಕ್ಷ ಸಪ್ತಮಿ ದಿನವಾದ ಅ.೧೨ರಂದು ಬೆಳಗ್ಗೆ ೧೦.೫೭ ರಿಂದ ೧೧.೦೫ರವರೆಗೆ ಸಲ್ಲುವ ಧನುರ್ ಶುಭ ಲಗ್ನ ದಲ್ಲಿ ಕನ್ನಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಈ ವೇಳೆ ವೀಣೆ, ವಿವಿಧ ಗ್ರಂಥಗಳನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಅದೇ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದ್ದು, ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ನೆರವೇರಲಿದೆ.
ಅ.೧೩ರಂದು ಬುಧವಾರ ದುರ್ಗಾಷ್ಟಮಿ ನೆರವೇರಲಿದೆ. ಅ.೧೪ರಂದು ಬೆಳಗ್ಗೆ ೬ ರಿಂದ ಹೋಮದ ಕೊಠಡಿಯಲ್ಲಿ ಚಂಡೀ ಹೋಮ ಆರಂಭಿಸಲಾಗುತ್ತದೆ. ಅಂದು ಬೆಳಗ್ಗೆ ೭.೪೫ ರಿಂದ ೮ರವರೆಗೆ ತುಲಾ ಲಗ್ನದಲ್ಲಿ ಆಯುಧ ಪೂಜೆ ನೆರವೇರಲಿದ್ದು, ಖಾಸ್ ಆಯುಧಗಳು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಡೆಗೆ ಕರೆದೊಯ್ಯಲಾಗುತ್ತದೆ. ಬೆಳಗ್ಗೆ ೮.೨೫ ರಿಂದ ೮.೪೦ರೊಳಗೆ ಆಯುಧ ಮತ್ತು ಪಟ್ಟದ ಆನೆ ಕಲ್ಯಾಣ ಮಂಟಪದ ಹೆಬ್ಬಾಗಿಲಿಗೆ ಪ್ರವೇಶಿಸುತ್ತವೆ. ೯ ಗಂಟೆಗೆ ಚಂಡೀಹೋಮದ ಪೂರ್ಣಾಹುತಿ ನೆರ ವೇರಲಿದ್ದು, ೧೧.೦೨ರಿಂದ ೧೧.೨೨ರವರೆಗೆ ಧನುರ್ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಲಾಗುತ್ತದೆ.

ಅಂದು ಸಂಜೆ ಖಾಸಗಿ ದರ್ಬಾರ್ ನೆರವೇರಿದ ಬಳಿಕ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನದಿAದ ಸಿಂಹದ ತಲೆಯನ್ನು ವಿಸರ್ಜಿಸಲಾಗುತ್ತದೆ. ಬಳಿಕ ದೇವರ ಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರಿಂದ ಕಂಕಣ ವಿಸರ್ಜಿಸಿದರೆ, ತ್ರಿಶಿಕ ಕುಮಾರಿ ಒಡೆಯರ್ ಅವರ ಕಂಕಣವನ್ನು ವಾಣ ವಿಲಾಸ ದೇವರ ಮನೆಯಲ್ಲಿ ವಿಸರ್ಜಿಸಲಾಗುತ್ತದೆ.
ಅ.೧೫ರಂದು ಬೆಳಗ್ಗೆ ೬.೧೩ ರಿಂದ ೬.೨೨ರ ನಡುವೆ ತುಲಾ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಉತ್ತರ ಪೂಜೆ ನೆರವೇರಿಸಲಾಗುತ್ತದೆ. ೭.೨೦ರಿಂದ ೭.೪೦ರವರೆಗೆ ತುಲಾ ಲಗ್ನದಲ್ಲಿ ಅರಮನೆ ಯಿಂದ ವಿಜಯ ಯಾತ್ರೆ ಹೊರಟು ಭುವನೇಶ್ವರಿ ದೇವಾಲಯದ ಆವರಣದಲ್ಲಿ ಬನ್ನಿ ಮರದ ಪೂಜೆ ನೆರವೇರಿಸಲಾಗುತ್ತದೆ.

Source:mysurumithra