ಜೆಫ್ ಬೆಜೋಸ್, ಎಲಾನ್ ಮಸ್ಕ್​ರಿಂದ ಭಾರತದಲ್ಲಿ ಸ್ಯಾಟ್ ಲೈಟ್ ಇಂಟರ್ನೆಟ್ ಸಂಪರ್ಕ

Oct 1, 2021

ಭಾರತದ ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಾದ ಸುನಿಲ್ ಮಿಥಲ್ ಅವರ ಏರ್ಟೆಲ್ (Airtel) ಹಾಗೂ ಮುಖೇಶ್ ಅಂಬಾನಿ ಅವರ ಜಿಯೋಗೆ (Jio) ನಡುಕ ಶುರುವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಜೆಫ್ ಬೆಜೋಸ್ (Jeff Bezos) ಹಾಗೂ ಎಲಾನ್ ಮಸ್ಕ್ ಸ್ಯಾಟ್ (Elon Musk) ಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕವನ್ನು ಭಾರತದಲ್ಲಿ ನೀಡಲು ಮುಂದಾಗಿದೆ. ಈ ಬಗ್ಗೆ ಭಾರತದ ಸರ್ಕಾರಕ್ಕೆ ಪ್ರಸ್ತಾಪ‌ ಸಲ್ಲಿಸಿದ್ದಾರೆ. ತಂತ್ರಜ್ಞಾನ ಉದ್ಯಮಿ, ಟೆಸ್ಲಾ (Tesla) ಮತ್ತು ಸ್ಪೇಸ್‌ ಎಕ್ಸ್ ಕಂಪೆನಿಗಳ ಮಾಲಿಕ ಎಲಾನ್ ಮಸ್ಕ್ ಒಡೆತನನದ, ಉಪಗ್ರಹಗಳ ಗುಚ್ಚದ ಮೂಲಕ ಕುಗ್ರಾಮ ಅಥವಾ ಕಾಡಿನಂತಹ ಪ್ರದೇಶದಲ್ಲೂ ಅತಿವೇಗದ ಇಂಟರ್ನೆಟ್‌ ಸೇವೆ ನೀಡುವ ಸ್ಟಾರ್‌ಲಿಂಕ್‌ (Starlink) ಕಂಪನಿ ಶೀಘ್ರದಲ್ಲೇ ಭಾರತದಲ್ಲೂ ತನ್ನ ಸೇವೆ ಆರಂಭಿಸಲಿದೆ. ಜೊತೆಗೆ ಅಮೆಜಾನ್ ಕೂಡ ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ನೀಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಆಸ್ಟ್ರೇಲಿಯಾ, ಕೆನಡಾ, ಚಿಲಿ, ಇಂಗ್ಲೆಂಡ್ ಮತ್ತು ಅಮೆರಿಕ ಸಹಿತ 14 ವಿವಿಧ ರಾಷ್ಟ್ರಗಳಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆ ಒದಗಿಸುತ್ತಿದೆ. ಮಿನಿ ಉಪಗ್ರಹ ಬಳಸಿಕೊಂಡು, ಅದರ ಮೂಲಕ ಹೆಚ್ಚಿನ ವ್ಯಾಪ್ತಿಯನ್ನು ತಲುಪುವ ಯೋಜನೆಯನ್ನು ಸ್ಪೇಸ್‌ಎಕ್ಸ್ ಸಮೂಹದ ಸ್ಟಾರ್‌ಲಿಂಕ್ ಹೊಂದಿದೆ. ಸದ್ಯ ಸ್ಟಾರ್‌ಲಿಂಕ್‌ ಕಂಪನಿಯು ಭಾರತದಲ್ಲಿ ಇಂಟರ್ನೆಟ್ ಸೇವೆ ನೀಡಲು ಅಗತ್ಯವಿರುವ ಸರ್ಕಾರಿ ಅನುಮತಿಗಳ ಕುರಿತು ಮಾಹಿತಿ ಪಡೆಯುತ್ತಿದೆ.

ಈಗಾಗಲೇ ಭಾರತದಲ್ಲಿ, ಅದರಲ್ಲೂ ನಮ್ಮ ಬೆಂಗಳುರಿನಲ್ಲಿ ಟೆಸ್ಲಾ ಕಾರುಗಳ ಮಾರಾಟಕ್ಕೆ ಯೋಜನೆ ಹಾಕಿಕೊಂಡಿರುವ ಎಲಾನ್ ಮಸ್ಕ್ ಇದೀಗ ಭಾರತದಲ್ಲಿ ಅತಿವೇಗದ ಇಂಟರ್ನೆಟ್ ಸೇವೆ ನೀಡುವ ಸ್ಟಾರ್‌ಲಿಂಕ್‌ ಕಂಪನಿ ಆರಂಭಕ್ಕೆ ತಯಾರಿ ನಡೆಸಿದ್ದಾರೆ. ಸಾಮಾನ್ಯ ಇಂಟರ್ನೆಟ್ ಸೇವೆ ನೀಡುವ ಟೆಲಿಕಾಂ ಕಂಪನಿಗಳು ತಲುಪದ ಕುಗ್ರಾಮ, ಕಾಡು ಅಥವಾ ಇನ್ನಿತರ ದುರ್ಗಮ ಪ್ರದೇಶಗಳಲ್ಲಿ ಉಪಗ್ರಹಗಳ ಗುಚ್ಚದ ಮೂಲಕ ಅಂತರಿಕ್ಷದಿಂದ ಅತಿವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಮೆರಿಕ ಮುಂತಾದೆಡೆ ಸ್ಟಾರ್‌ಲಿಂಕ್‌ ಕಂಪನಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಈ ಸೇವೆಯನ್ನು ಜಗತ್ತಿನಾದ್ಯಂತ ವಿಸ್ತರಿಸಲು ಕಂಪೆನಿ ಉತ್ಸುಕವಾಗಿದೆ.

ಸ್ಟಾರ್ ಲಿಂಕ್ ಈಗಾಗಲೇ ವಿಶ್ವದಾದಂತ್ಯ ಸುಮಾರು ಲಕ್ಷ ಗ್ರಾಹಕರನ್ನ ಹೊಂದಿದೆ. ಆದರೆ ಸದ್ಯದ ಮಟ್ಟಿಗೆ ಇದು ವಿಧಿಸುತ್ತಿರುವ ಶುಲ್ಕ ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಜನರಿಗೆ ಎಟುಕುವ ಸ್ಥಿತಿಯಲಿಲ್ಲ . ಇದರ ಸೇವೆ ಪಡೆಯಲು ಮೊದಲಿಗೆ 500 ಡಾಲರ್ ನೀಡಬೇಕಾಗುತ್ತದೆ. ಮತ್ತು ಮಾಸಿಕ 99 ಡಾಲರ್ ಹಣವನ್ನ ನೀಡಬೇಕಾಗುತ್ತದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಪ್ರಥಮವಾಗಿ 36ಸಾವಿರ ನಂತರ ಮಾಸಿಕ 7,400 ರೂಪಾಯಿ ನೀಡಬೇಕಾಗುತ್ತದೆ.

ಏನಿದು ಸ್ಟಾರ್‌ಲಿಂಕ್‌ ಇಂಟರ್ನೆಟ್‌: ಸಾಮಾನ್ಯ ಇಂಟರ್ನೆಟ್‌ ಸೇವೆ ನೀಡುವ ಕಂಪನಿಗಳು ತಲುಪದ ಕುಗ್ರಾಮ, ಕಾಡು ಅಥವಾ ಇನ್ನಿತರ ದುರ್ಗಮ ಪ್ರದೇಶಗಳಲ್ಲಿ ಉಪಗ್ರಹಗಳ ಗುಚ್ಚದ ಮೂಲಕ ಅಂತರಿಕ್ಷದಿಂದ ಅತಿವೇಗದ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಮೆರಿಕ ಮುಂತಾದೆಡೆ ಸ್ಟಾರ್‌ಲಿಂಕ್‌ ಕಂಪನಿ ಪ್ರಾಯೋಗಿಕವಾಗಿ ಆರಂಭಿಸಿದೆ. ಈಗಾಗಲೇ ಗ್ರಾಹಕರಿಗೆ ಇಂತಹ ಒಂದು ಲಕ್ಷ ಸಂಪರ್ಕಗಳನ್ನೂ ನೀಡಿದೆ. ಇದಕ್ಕಾಗಿ 2019ರಿಂದ ಆರಂಭಿಸಿ ಕಂಪನಿಯು ಈವರೆಗೆ 1700ಕ್ಕೂ ಹೆಚ್ಚು ಉಪಗ್ರಹಗಳನ್ನು ಹಾರಿಬಿಟ್ಟಿದೆ. ಒಟ್ಟು 30,000 ಉಪಗ್ರಹಗಳನ್ನು ಉಡಾವಣೆ ಮಾಡಿ, ಅಂತರಿಕ್ಷದಲ್ಲಿ ಅಲ್ಲಲ್ಲಿ ಉಪಗ್ರಹಗಳ ಗುಚ್ಚಗಳನ್ನು ನಿರ್ಮಿಸಿ, ಅವುಗಳಿಂದ ಇಡೀ ಜಗತ್ತಿಗೆ ಇಂಟರ್ನೆಟ್‌ ಸೇವೆ ನೀಡುವ ಉದ್ದೇಶವನ್ನು ಸ್ಟಾರ್‌ಲಿಂಕ್‌ ಹೊಂದಿದೆ.

Source:tv9kannada