‘ಕ್ಲೈಮ್ಯಾಕ್ಸ್, ಬಿಜಿಎಂ ಇಡೀ ಚಿತ್ರದ ದಿಕ್ಕನ್ನೇ ಬದಲಿಸಿದೆ’; ‘ಜೈಲರ್’ ನೋಡಿದ ಅಭಿಮಾನಿಗಳು ಫಿದಾ

Aug 10, 2023

 
 

ರಜನಿಕಾಂತ್ ವಯಸ್ಸು ಈಗ 72 ವರ್ಷ ದಾಟಿದೆ. ಆದರೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಾಸ್​ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ಈಗ ಅವರ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಕೂಡ ನಟಿಸಿದ್ದಾರೆ. ಈ ಚಿತ್ರದ ವಿಮರ್ಶೆ ಇಲ್ಲಿದೆ.

ಸಿನಿಮಾ: ಜೈಲರ್

ಪಾತ್ರವರ್ಗ: ರಜನಿಕಾಂತ್, ಶಿವರಾಜ್​ಕುಮಾರ್, ಮೋಹನ್​ಲಾಲ್, ರಮ್ಯಾ ಕೃಷ್ಣ, ವಿನಾಯಕನ್ ಟಿ.ಕೆ. ಮೊದಲಾದವರು

ನಿರ್ದೇಶನ: ನೆಲ್ಸನ್ ದಿಲೀಪ್​ ಕುಮಾರ್

ನಿರ್ಮಾಣ: ಸನ್ ಪಿಕ್ಚರ್ಸ್​

ಸಂಗೀತ ಸಂಯೋಜನೆ: ಅನಿರುದ್ಧ್ ರವಿಚಂದರ್

ರೇಟಿಂಗ್: 3/5

 

Jailer Movie Twitter Review: ರಜನಿಕಾಂತ್ ಕಂಬ್ಯಾಕ್ ಫ್ಯಾನ್ಸ್​ಗೆ ಇಷ್ಟವಾಗಿದೆ. ಅವರು ಮಾಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 70ರ ವಯಸ್ಸಲ್ಲೂ ಅವರು ಈ ರೀತಿ ನಟನೆ ಮಾಡಿದ್ದನ್ನೂ ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ.

‘ಜೈಲರ್’ ಸಿನಿಮಾ (Jailer Movie) ಬಗ್ಗೆ ಸೃಷ್ಟಿ ಆಗಿದ್ದ ಕ್ರೇಜ್ ಅಷ್ಟಿಷ್ಟಲ್ಲ. ರಜನಿಕಾಂತ್, ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್​, ತಮನ್ನಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಟ್ರೇಲರ್ ಮೂಲಕ ಗಮನ ಸೆಳೆದಿತ್ತು. ಇಂದು (ಆಗಸ್ಟ್ 10) ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ರಜನಿಕಾಂತ್ (Rajanikanth) ಅಭಿಮಾನಿಗಳು ಚಿತ್ರವನ್ನು ನೋಡಿ ಸಖತ್ ಖುಷಿಪಟ್ಟಿದ್ದಾರೆ. ಎರಡು ಶೇಡ್​ಗಳ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ನೋಡಿದ ಟ್ವಿಟರ್ ಮಂದಿ ಏನು ಹೇಳಿದ್ರು ಅನ್ನೋದಕ್ಕೆ ಇಲ್ಲಿದೆ ಉತ್ತರ.

ರಜನಿಕಾಂತ್ ಅವರ ನಟನೆಯ ‘ಅಣ್ಣಾಥೆ’ ಸಿನಿಮಾ 2021ರಲ್ಲಿ ರಿಲೀಸ್ ಆಯಿತು. ಎರಡು ವರ್ಷಗಳ ಬಳಿಕ ರಜನಿಕಾಂತ್ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿಕಾಂತ್ ಕಾಂಬೋ ವರ್ಕ್​ ಆಗಿದೆ. ರಜನಿಕಾಂತ್, ಶಿವಣ್ಣ ನಟನೆ ಇಷ್ಟವಾಗಿದೆ.

ರಜನಿಕಾಂತ್ ಕಂಬ್ಯಾಕ್ ಫ್ಯಾನ್ಸ್​ಗೆ ಇಷ್ಟವಾಗಿದೆ. ಅವರು ಮಾಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 70ರ ವಯಸ್ಸಲ್ಲೂ ಅವರು ಈ ರೀತಿ ನಟನೆ ಮಾಡಿದ್ದನ್ನೂ ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಪ್ಪ-ಮಗನ ಸೆಂಟಿಮೆಂಟ್ ಕೂಡ ಗಮನ ಸೆಳೆದಿದೆ.

 

ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಮಾಸ್ ಚಿತ್ರಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ‘ವಿಕ್ರಮ್’ ಚಿತ್ರದಲ್ಲಿ ಇದು ಸಾಬೀತಾಗಿತ್ತು. ಈಗ ಅವರು ತಮ್ಮನ್ನು ತಾವು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದ್ದಾರೆ. ಅವರ ಹಿನ್ನೆಲೆ ಸಂಗೀತಕ್ಕೆ ಟ್ವಿಟರ್​ನಲ್ಲಿ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.

‘ಇದೊಂದು ಪಕ್ಕಾ ರಜನಿ ಸಿನಿಮಾ. ಥಿಯೇಟರ್​ನಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣಿಯೋದು ಪಕ್ಕಾ’ ಎಂದು ಕೆಲವರು ಹೇಳಿದ್ದಾರೆ. ‘ಶಿವರಾಜ್​ಕುಮಾರ್ ಅವರು ಇದ್ದಷ್ಟು ಹೊತ್ತು ಎಲ್ಲರನ್ನೂ ಖುಷಿಪಡಿಸುತ್ತಾರೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ‘ಬ್ಲಾಕ್​ಬಸ್ಟರ್’ ಎಂದು ಘೋಷಿಸಿದ್ದಾರೆ.

Source: TV9 KARNATAKA