ಈ ಬಾರಿ ಚುನಾವಣೆಯಲ್ಲಾದ ಮತದಾನದ ಪ್ರಮಾಣವೆಷ್ಟು? ಕಳೆದ 5 ಚುನಾವಣೆಯಲ್ಲಾದ ಪ್ರಮಾಣವೆಷ್ಟು? ಇಲ್ಲಿದೆ ಅಂಕಿ-ಅಂಶ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ, 58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಈ ಬಾರಿ ಎಷ್ಟು ಪ್ರಮಾಣ ಮತದಾನವಾಗಿದೆ? ಕಳೆದ 5 ಚುನಾವಣೆಯಲ್ಲಿ ಎಷ್ಟು ಮತದಾನವಾಗಿದೆ? ಇಲ್ಲಿದೆ ಮಾಹಿತಿ.
ಬೆಂಗಳೂರು: ನಿನ್ನೆ (ಮೇ.10) ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ (Karnataka Assembly Election 2023), 58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ (Voting) ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. 224 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರ ಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಜಿಲ್ಲಾವಾರು ಗರಿಷ್ಠ ಮತದಾನ ಕಂಡ ಜಿಲ್ಲೆ: ಚಿಕ್ಕಬಳ್ಳಾಪುರ -ಶೇ.85.83
ಜಿಲ್ಲಾವಾರು ಕನಿಷ್ಠ ಮತದಾನ ಕಂಡ ಜಿಲ್ಲೆ: ಬೆಂಗಳೂರು ನಗರ-ಶೇ.59.98
ಇನ್ನು ಕ್ಷೇತ್ರವಾರು ಗರಿಷ್ಠ ಮತದಾನ ಕಂಡ ವಿಧಾಮಸಭಾ ಕ್ಷೇತ್ರ: ಮೇಲುಕೋಟೆ – ಶೇ. 90.93 ಕನಿಷ್ಠ ಮತದಾನ ವಿಧಾನಸಭಾ ಕ್ಷೇತ್ರ: ಸಿವಿರಾಮನ್ ನಗರ (ಬೆಂಗಳೂರು) – 47.43%
ಈ ಬಾರಿ ಮತದಾನ ಕಳೆದ ಬಾರಿಗಿಂತ 0.73 ಪ್ರತಿಶತದಷ್ಟು ಕಡಿಮೆಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ 73.04ರಷ್ಟು ಮತದಾನವಾಗಿತ್ತು.
ಕಳೆದ 5 ವರ್ಷದಲ್ಲಿ ರಾಜ್ಯದಲ್ಲಾದ ಮತದಾನ ಪ್ರಮಾಣ
ಈ ಬಾರಿಯ ಅಂಕಿ-ಅಂಶಗಳನ್ನು ನೋಡಿದರೇ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಮತದಾರರು ಇನ್ನಷ್ಟು ಜಾಗೃತಿಯಾಗಬೇಕಿದೆ.