ಆಸೀಸ್ ವಿರುದ್ಧ ವಿಶ್ವ ದಾಖಲೆ ಬರೆಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ..!

Feb 9, 2023

ನಾಗ್ಪುರದಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್ ನಂತರ 25,000 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

1)ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹತ್ವದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ನಾಗ್ಪುರದಲ್ಲಿ ಆರಂಭವಾಗಿದೆ. ಇಂದಿನ ಪಂದ್ಯ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿಗೆ ಬಹಳ ವಿಶೇಷವಾಗಿದ್ದು, ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮಹತ್ವದ ದಾಖಲೆಯೊಂದನ್ನು ಬರೆಯಲಿದ್ದಾರೆ.

2)ವಿರಾಟ್ ಕೊಹ್ಲಿ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದು, ಈ ಪಂದ್ಯದಲ್ಲಿ ವಿರಾಟ್ ಕೇವಲ 64 ರನ್ ಗಳಿಸಿದರೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 25 ಸಾವಿರ ರನ್ ಪೂರೈಸಲಿದ್ದಾರೆ.

3)ವಿರಾಟ್ ಕೊಹ್ಲಿ ಪ್ರಸ್ತುತ 24936 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ 490 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 74 ಶತಕ ಮತ್ತು 129 ಅರ್ಧ ಶತಕಗಳ ಸಹಾಯದಿಂದ ಈ ರನ್ ಗಳಿಸಿದ್ದಾರೆ.

4)ನಾಗ್ಪುರದಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್ ನಂತರ 25,000 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

5)ಸದ್ಯ ಸಕ್ರಿಯ ಆಟಗಾರರಲ್ಲಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ಕೊಹ್ಲಿ ನಂತರ ಇಂಗ್ಲೆಂಡ್‌ನ ಜೋ ರೂಟ್ ಇದ್ದು, ರೂಟ್ 317 ಪಂದ್ಯಗಳಲ್ಲಿ 17,729 ರನ್ ಗಳಿಸಿದ್ದಾರೆ.

6)ವಿಶ್ವದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ 34357 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಹೆಸರಿದೆ. ಇವರ ನಂತರ ಕುಮಾರ ಸಂಗಕ್ಕಾರ (28016), ರಿಕಿ ಪಾಂಟಿಂಗ್ (27483), ಮಹೇಲಾ ಜಯವರ್ಧನೆ (25957), ಜಾಕ್ವೆಸ್ ಕಾಲಿಸ್ (25534), ನಂತರ ವಿರಾಟ್ ಕೊಹ್ಲಿ ಹೆಸರು ಇದೆ.

Source: TV9 Kannada