Viral: ಒಂದೇ ಆಟೋ ಒಬ್ಬನೇ ಡ್ರೈವರ್​ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?

Aug 9, 2023

Auto Ride: ಬೆಂಗಳೂರಿನಲ್ಲಿ ಆಟೋ ​ ಬುಕ್ ಮಾಡಿದ ಪ್ರಯಾಣಿಕರೊಬ್ಬರ ಅನುಭವವಿದು. ಯಾಕೆ ಹೀಗಾಗಿದೆ, ನಿಮಗೇನಾದರೂ ಗೊತ್ತೆ? ದಶರಥನಿಗೆ ಬೇಗ ಶ್ರೀಮಂತನಾಗಬೇಕೆನ್ನಿಸಿದೆ ಎಂದು ನೆಟ್ಟಿಗರೇನೋ ತಮಾಷೆ ಮಾಡುತ್ತಿದ್ದಾರೆ…
 
Bengaluru : ಆಟೋ, ಕ್ಯಾಬ್​ ಪ್ರಯಾಣಕ್ಕೆ ಸಂಬಂಧಿಸಿದ ಅನೇಕ ರೀತಿಯ ಘಟನೆಗಳನ್ನು ಓದುತ್ತಿರುತ್ತೀರಿ. ಕೆಲವೊಮ್ಮೆ ನಿಮ್ಮ ಹೃದಯ ಮಿಡಿಯುತ್ತದೆ. ಕೆಲವೊಮ್ಮೆ ಕೋಪ ಬರುತ್ತದೆ. ಇನ್ನೂ ಕೆಲವೊಮ್ಮೆ ಅಚ್ಚರಿಯೂ ಆಗುತ್ತದೆ. ಇದೀಗ ಹೇಳಹೊರಟಿರುವ ಈ ಘಟನೆಗೆ ನೀವು ಹೇಗೆ ಸ್ಪಂದಿಸುತ್ತೀರಿ ಎಂಬ ಕುತೂಹಲ ನಮ್ಮದು. Harsh.fig ಎಂಬ X (Twitter) ಖಾತೆದಾರರು, ಆಟೋ ಚಾಲಕರೊಬ್ಬರು ಒಂದೇ ಸಮಯಕ್ಕೆ ಎರಡು ವಿಭಿನ್ನ ಆ್ಯಪ್​​ಗಳಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಮತ್ತು ಎರಡು ಪ್ರತ್ಯೇಕ ಮೊಬೈಲ್​​ಗಳಲ್ಲಿ ಆಟೋರೈಡ್​ ಸ್ವೀಕರಿಸಿರುವ ಸ್ಕ್ರೀನ್ ಶಾಟ್​ ಹಂಚಿಕೊಂಡಿದ್ದಾರೆ. ನೆಟ್ಟಿಗರಿಗಿದು ಉಚಿತ ಮನರಂಜನೆಯ ಸರಕಾಗಬಹುದೇನೋ.

ಎರಡು ವಿಭಿನ್ನ ಸ್ಥಳಗಳಲ್ಲಿ, ಎರಡು ವಿಭಿನ್ನ ಅಪ್ಲಿಕೇಶನ್‌ಗಳಲ್ಲಿ, ಎರಡು ವಿಭಿನ್ನ ಫೋನ್‌ಗಳಲ್ಲಿ ಒಬ್ಬನೇ ಆಟೋ ಚಾಲಕ ಈ ರೈಡ್​ ಅನ್ನು ಸ್ವೀಕರಿಸಿದ್ದು ಹೇಗೆ? ಎನ್ನುವ ಅಚ್ಚರಿಯಲ್ಲಿ ನೆಟ್ಟಿಗರು ಬಿದ್ದಿದ್ದಾರೆ. ದಶರಥ ಎಂದು ರೈಡರ್​​ನ ಹೆಸರನ್ನು ಮತ್ತು ಒಂದೇ ಆಟೋ ನಂಬರ್​ ಅನ್ನು ಈ ಆ್ಯಪ್​ಗಳು ತೋರಿಸಿವೆ.

ದಶರಥನ ಈ ಪ್ರಕರಣದ ಬಗ್ಗೆ ನಿಮಗೇನು ಅನ್ನಿಸುತ್ತದೆ? ಹೇಗೆ ಎರಡು ವಿಭಿನ್ನ ಆ್ಯಪ್​ಗಳಲ್ಲಿ ಏಕಕಾಲಕ್ಕೆ ಬೇರೆ ಬೇರೆ ಸ್ಥಳದಲ್ಲಿ ರೈಡ್ ಸ್ವೀಕರಿಸಲು ಸಾಧ್ಯ? ಯೋಚಿಸಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Source: TV9 KARNATAKA