UPSC Recruitment 2022: ವಿವಿಧ ಇಲಾಖೆಗಳ ಒಟ್ಟು 78 ಹುದ್ದೆಗಳಿಗೆ ಯುಪಿಎಸ್​ಸಿಯಿಂದ ಅರ್ಜಿ ಆಹ್ವಾನ

Jan 13, 2022

ಕೇಂದ್ರ ಲೋಕಾ ಸೇವಾ ಆಯೋಗ (UPSC)ದ ವಿವಿಧ ಇಲಾಖೆಗಳ ಒಟ್ಟು 78 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆನ್​ಲೈನ್​ನಲ್ಲೇ ತುಂಬಹುದಾಗಿದ್ದು ಯುಪಿಎಸ್​ಸಿ ವೆಬ್​ಸೈಟ್​ upsconline.nic.in. ನಲ್ಲಿ ಅರ್ಜಿ ಲಭ್ಯವಿದೆ. ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ವಿಜ್ಞಾನಿಗಳು, ರಸಾಯನಶಾಸ್ತ್ರಜ್ಞರು ಸೇರಿ ಇತರ ಕೆಲವು ಹುದ್ದೆಗಳು ಸೇರಿ ಒಟ್ಟು 78 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು ಕೊನೇ ದಿನ ಜನವರಿ 27 ಎಂದು ಹೇಳಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ, ಸಂಖ್ಯೆಗಳಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನೊಳಗೊಂಡ ಅಧಿಸೂಚನೆಯನ್ನು ಯುಪಿಎಸ್​ಸಿ ತನ್ನ ಅಧಿಕೃತ ವೆಬ್​​ಸೈಟ್​​ನಲ್ಲಿ ಬಿಡುಗಡೆ ಮಾಡಿದೆ. ಯಾವೆಲ್ಲ ಇಲಾಖೆಗಳಲ್ಲಿ ಯಾವ ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಅಭ್ಯರ್ಥಿಯ ವಯಸ್ಸಿನ ಮಿತಿ ಇತ್ಯಾದಿ ಮಾಹಿತಿಯನ್ನು ಈ ಅಧಿಸೂಚನೆ ಒಳಗೊಂಡಿದೆ. ಅಂದಹಾಗೆ ಅರ್ಜಿ ಸಲ್ಲಿಸುವವರು 25 ರೂಪಾಯಿ ಶುಲ್ಕ ತುಂಬಬೇಕಿದೆ. ಹಾಗಿದ್ದಾಗ್ಯೂ ಮೀಸಲು ವರ್ಗದಡಿ ಬರುವವರು, ಮಹಿಳೆಯರು ಮತ್ತು ವಿಕಲಾಂಗರು ಯಾವುದೇ ಶುಲ್ಕ ತುಂಬಬೇಕಿಲ್ಲ.

ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ತುಂಬಿದ ಅರ್ಜಿಯಲ್ಲಿ ನೀಡಿದ ಮಾಹಿತಿಯನ್ನು ಆಧರಿಸಿ ಸಂದರ್ಶನ ಸುತ್ತಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಅಂದಹಾಗೆ ಅಭ್ಯರ್ಥಿಗಳು ಆನ್​ಲೈನ್​ಲ್ಲಿ ಅಪ್ಲಿಕೇಶನ್​ ಭರ್ತಿ ಮಾಡುವ ಜತೆಗೆ, ಆಯೋಗ ಕೇಳಿರುವ ಎಲ್ಲ ರೀತಿಯ ದಾಖಲೆಗಳು, ಸರ್ಟಿಫಿಕೇಟ್​ಗಳನ್ನು ನೀಡಬೇಕು. ಸಹಾಯಕ ಸಂಪಾದಕ, ಸಹಾಯಕ ನಿರ್ದೇಶಕರು, ಆರ್ಥಿಕ ಅಧಿಕಾರಿ, ಆಡಳಿತಾತ್ಮಕ ಅಧಿಕಾರಿ, ಮೆಕ್ಯಾನಿಕಲ್ ಮೆರೈನ್ ಇಂಜಿನಿಯರ್, ಅಧ್ಯಾಪಕ, ವಿಜ್ಞಾನಿಗಳು, ರಸಾಯನಶಾಸ್ತ್ರಜ್ಞರು, ಕಿರಿಯ ಗಣಿಗಾರಿಕೆ ಭೂವಿಜ್ಞಾನಿಗಳು, ಸಂಶೋಧನಾ ಅಧಿಕಾರಿ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಯುಪಿಎಸ್​ಸಿ ನೇಮಕ ಮಾಡಿಕೊಳ್ಳಲಿದ್ದು, ಅರ್ಜಿ ತುಂಬುವ ವಿಧಾನ ಹೀಗಿದೆ..

1. ಮೊದಲು ಯುಪಿಎಸ್​ಸಿಯ ಅಧಿಕೃತ ವೆಬ್​ಸೈಟ್​ upsconline.nic.inಗೆ ಭೇಟಿ ಕೊಡಿ 2. ಆಗ ತೆರೆದುಕೊಳ್ಳುವ ಹೋಂಪೇಜ್​​ನಲ್ಲಿ ‘Online Recruitment Application (ORA) ಎಂಬ ಲಿಂಕ್​ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿ. ನಂತರ Various Recruitment Posts ಮೇಲೆ ಕ್ಲಿಕ್ ಮಾಡಿ. 3. ಖಾಲಿ ಇರುವ ಹುದ್ದೆಗಳ ಹೆಸರುಗಳುಳ್ಳ ಪೇಜ್​ ತೆರೆದುಕೊಳ್ಳುತ್ತದೆ. 4. ಅಲ್ಲಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರೋ, ಆ ಹುದ್ದೆಯ ಹೆಸರು ಆಯ್ಕೆ ಮಾಡಿ, Apply now ಮೇಲೆ ಕ್ಲಿಕ್ ಮಾಡಿ. 5. ಅಲ್ಲಿರುವ ಎಲ್ಲ ರೀತಿಯ ಸೂಚನೆಗಳನ್ನೂ ಓದಿ. ಬಳಿಕ ತೆರೆದುಕೊಳ್ಳುವ ಲಾಗಿನ್ ಪೇಜ್​ನಲ್ಲಿ, ನಿಮ್ಮ ಕ್ರೆಡೆನ್ಷಿಯಲ್​ಗಳನ್ನು ಹಾಕಿ. 6. ಆಗ ಅರ್ಜಿಯ ನಮೂನೆ (ಅಪ್ಲಿಕೇಶನ್​ ಫಾರ್ಮ್​) ತೆರೆದುಕೊಳ್ಳುತ್ತದೆ. 7. ಅದರಲ್ಲಿ ಕೇಳಲಾದ ವಿವರಗಳನ್ನೆಲ್ಲ ತುಂಬಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿ. ನಂತರ ಸಬ್​ಮಿಟ್​ ಮಾಡಿ. ನಿಮಗಾಗಿ ಒಂದು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

Source: tv9kannada