THANK YOU INDIA ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ವಿಶ್ವ ಆರೋಗ್ಯ ಸಂಸ್ಥೆ
ಕೊರೊನಾ ವಿರುದ್ಧ ಹೋರಾಟದಲ್ಲಿ ಸ್ಪಂದನೆಗೆ ಧನ್ಯವಾದ ಕೋರಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ WHO ನಿರ್ದೇಶಕ ಟೆಡ್ರೋಸ್ ಅದನೋಮ್ ಗೆಬ್ರಿಯಾಸಿಸ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕೊರೊನಾ ವಿರುದ್ಧ ಹೋರಾಟದಲ್ಲಿ ಸೂಕ್ತವಾಗಿ ಸ್ಪಂದಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿ, WHO ನಿರ್ದೇಶಕ ಟೆಡ್ರೋಸ್ ಅದನೋಮ್ ಗೆಬ್ರಿಯಾಸಿಸ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದ ಸ್ಪಂದನೆಗೆ ಧನ್ಯವಾದಗಳು. ನಾವು ಒಗ್ಗೂಡಿ ಹೋರಾಡಿದರೆ ಮಾತ್ರ ವೈರಸ್ ತಡೆಯಲು ಸಾಧ್ಯ. ಜನರ ಜೀವ, ಜೀವನೋಪಾಯ ಉಳಿಸಲು ಸಾಧ್ಯ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
Source: TV9 Kannada