ಸೇವೆ ಸ್ಥಗಿತ : ಗೂಗಲ್‌ ಎಚ್ಚರಿಕೆ

Jan 23, 2021

ವೆಲ್ಲಿಂಗ್ಟನ್‌ (ನ್ಯೂಜಿಲೆಂಡ್‌) : ಸುದ್ದಿ ಮಾಧ್ಯಮಗಳಿಂದ ಎರವಲು ಪಡೆದು ಗೂಗಲ್‌ನಲ್ಲಿ ಪೋಸ್ಟ್‌ ಮಾಡಲಾಗುವ ಸುದ್ದಿಗಳಿಗೆ ಹಣ ಪಾವತಿ ಮಾಡಬೇಕೆಂಬ ಆಸ್ಪ್ರೇಲಿಯಾ ಸರ್ಕಾರದ ನಿಲುವಿಗೆ ಸ್ವತಃ ಗೂಗಲ್‌ ತೀವ್ರ ಕಿಡಿಕಾರಿದೆ.

ತಾನು ಹಂಚಿಕೊಳ್ಳುವ ಸುದ್ದಿಗಳಿಗೆ ಹಣ ಪಾವತಿಸಬೇಕೆಂಬ ಅಂಶವನ್ನೊಳಗೊಂಡ ಮಸೂದೆ ಜಾರಿಗೆ ಸರ್ಕಾರ ಮುಂದಾದರೆ, ಆಸ್ಪ್ರೇಲಿಯಾದಲ್ಲಿ ಗೂಗಲ್‌ ಸಚ್‌ರ್‍ ಸೇವೆಯೇ ಸ್ಥಗಿತವಾಗಲಿದೆ ಎಂದು ಬೆದರಿಕೆ ಹಾಕಿದೆ.

‘ಆದರೆ ಇಂಥ ಬೆದರಿಕೆಗಳಿಗೆ ನಾವು ಪ್ರತಿಕ್ರಿಯಿಸಿಲ್ಲ. ನಮ್ಮ ದೇಶದಲ್ಲಿ ನಿಮ್ಮ ಸೇವೆ ಮುಂದುವರಿಯಬೇಕಾದರೆ ಸರ್ಕಾರದ ಕಾನೂನುಗಳನ್ನು ಒಪ್ಪಲೇಬೇಕು. ಈ ಕಾನೂನುಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಆಸ್ಪ್ರೇಲಿಯಾದಲ್ಲಿ ಕಾನೂನುಗಳು ಹೀಗೇ ಇರಲಿವೆ’ ಎಂದು ಆಸ್ಪ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಗುಡುಗಿನ ತಿರುಗೇಟು ನೀಡಿದ್ದಾರೆ.

‘ಸುದ್ದಿಸಂಸ್ಥೆಗಳಿಂದ ಪಡೆಯಲಾಗುವ ಸುದ್ದಿಗಳಿಗೆ ಹಣ ಪಾವತಿಸಲು ಗೂಗಲ್‌ ಸಿದ್ಧವಿದೆ. ಆದರೆ ಸರ್ಕಾರ ರೂಪಿಸಲು ಮುಂದಾಗಿರುವ ಕಾನೂನಿನಡಿ ಇದು ಸಾಧ್ಯವಿಲ್ಲ’ ಎಂದು ಗೂಗಲ್‌ ಹೇಳಿದೆ.

Source: Suvarna News