ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾದಿಂದ ಇದುವರೆಗೂ ಯಾವುದೇ ಕೂಡ ಹೊರಬಿದ್ದಿಲ್ಲ. ಆದರೆ ಇತ್ತೀಚಿಗೆ ಮಂಗಳೂರಿನಲ್ಲಿ ಸಲಾರ್ ಸಿನಿಮಾದ ಚಿತ್ರೀಕರಣ ನಡೆದಿದ್ದು, ರಿಷಬ್ ಶೆಟ್ಟಿ(Rishab Shetty) ಸೆಟ್‌ಗೆ ಭೇಟಿ ನೀಡಿದ್ದಾರೆ. ಪ್ರಶಾಂತ್ ನೀಲ್ (Rishab Shetty) ಜೊತೆಗಿನ ರಿಷಬ್ ಮಾತುಕತೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
‘ಕಾಂತಾರ 2’ (Kantara 2) ಪ್ರೀಪ್ರೋಡಕ್ಷನ್ ಹಂತದ ಕೆಲಸದಲ್ಲಿ ಬ್ಯುಸಿಯಿರುವ ರಿಷಬ್ ಶೆಟ್ಟಿ (Rishab Shetty) ಇತ್ತೀಚಿಗೆ ಸಲಾರ್ ಸಿನಿಮಾದ ಸೆಟ್‌ಗೆ ಹೋಗಿ ಬಂದಿದ್ದಾರೆ. ಕಾಂತಾರ 2 ಸಿನಿಮಾದ ಲೊಕೇಶನ್ ಬಗ್ಗೆ ಮಾತುಕತೆ ನಡೆಸಿ ಬಂದಿದ್ದಾರೆ. ಸಲಾರ್ ಸಿನಿಮಾದ ಮುಖ್ಯ ಸನ್ನಿವೇಶಗಳು ಮತ್ತು ಪ್ರಭಾಸ್ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೋಡಕ್ಷನ್ ಮತ್ತು ಡಬ್ಬಿಂಗ್ ಕೆಲಸಗಳು ಬಾಕಿಯಿದೆ. ಒಂದು ಸ್ಪೆಷಲ್ ಸಾಂಗ್ ಶೂಟ್ ಬಾಕಿಯಿದೆ ಎಂದು ಹೇಳಲಾಗ್ತಿದೆ.
ಸೆಪ್ಟೆಂಬರ್ 28ರಂದು ಸಲಾರ್ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್ ಚಿತ್ರದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ.ಸಲಾರ್ ಸಿನಿಮಾದ ಇಂಗ್ಲೀಷ್ ವರ್ಷನ್ ಕೂಡ ಬರಲಿದೆ