ಜೀವಶಾಸ್ತ್ರಜ್ಞ ರುಡಾಲ್ಫ್ ವೀಗಲ್​ಗೆ ಗೂಗಲ್ ಡೂಡಲ್ ವಿಶೇಷ ಗೌರವ

Sep 2, 2021

ಇಂದು ಗೂಗಲ್ ತನ್ನ ಡೂಡಲ್​ನಲ್ಲಿ ಪೋಲಿಷ್ ಜೀವಾಸ್ತ್ರಜ್ಞ ರುಡಾಲ್ಫ್ ವೀಗಲ್ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಸಾಂಕ್ರಾಮಿಕ ಟೈಫಸ್ ವಿರುದ್ಧ ಲಸಿಕೆಯನ್ನು ಕಂಡು ಹಿಡಿದ ಹಾಗೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಲವಾರು ಯಹೂದಿಗಳ ಜೀವ ಉಳಿಸಿದ ರುಡಾಲ್ಫ್ ವೀಗಲ್ ಅವರಿಗೆ ಗೂಗಲ್ ಗೌರವ ಸಲ್ಲಿಸಿದೆ. 138ನೇ ವರ್ಷದ ಜನ್ಮದಿನದ ಪ್ರಯುಕ್ತ ಗೂಗಲ್ ಈ ದಿನವನ್ನು ಆಚರಿಸುತ್ತಿದೆ. ಜೀವರಕ್ಷಕ ಔಷಧಿಗಳನ್ನು ಸೃಷ್ಟಿಸುತ್ತ, ಜೀವಶಾಸ್ತ್ರಜ್ಞ ಪ್ರಯೋಗಾಲಯದಲ್ಲಿ ಔಷಧಿಗಳನ್ನು ಕಂಡು ಹಿಡಿಯುತ್ತರುವ ವಿನ್ಯಾಸದೊಂದಿಗೆ ಡೂಡಲ್ ರಚಿಸಲಾಗಿದೆ.

ರುಡಾಲ್ಫ್ ಸ್ಟೀಫನ್ ವೀಗಲ್ 1883ರಲ್ಲಿ ಜನಸಿದರು. 1907ರಲ್ಲಿ ಪೋಲಂಡ್​ನ ಲೌ ವಿಶ್ವವಿದ್ಯಾಲಯದಲ್ಲಿ ಜೈವಿಕ ವಿಜ್ಞಾನದಲ್ಲಿ ಪದವಿಯನ್ನು ಪಡೆದರು. ಮಾತ್ರವಲ್ಲದೇ ಪ್ರಾಣಿ ಶಾಸ್ತ್ರ ಮತ್ತು ಅಂಗರಚನಾ ಶಾಸ್ತ್ರದಲ್ಲಿ ಪದವಿ ಪಡೆದರು.

ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಟೈಫಸ್ ಸಾಂಕ್ರಾಮಿಕದಿಂದಾಗಿ ಯುರೋಪ್ ಜನರು ನರಳುತ್ತಿದ್ದರು. ಈ ಸಾಂಕ್ರಾಮಿಕದ ತೀವ್ರ ಹರಡುವಿಕೆಯಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಹೀಗಾಗಿ ವೀಗೆಲ್ ಈ ಕುರಿತಾಗಿ ಸಂಶೋಧನೆಗೆ ಮುಂದಾದರು. ಜತೆಗೆ ಟೈಫಸ್ ವಿರುದ್ಧ ಲಸಿಕೆಯನ್ನು ಕಂಡು ಹಿಡಿದ ಮೊದಲ ವಿಜ್ಞಾನಿ ಎಂಬ ಹೆಸರಿಗೆ ಪಾತ್ರರಾದರು.

1933ರ ಸಮಯದಲ್ಲಿ ಈ ಲಸಿಕೆ ಪರೀಕ್ಷೆಗಳನ್ನು ನಡೆಸಿ ಸುಮಾರು 5000ಕ್ಕೂ ಹೆಚ್ಚು ಯಹೂದಿಗಳ ಪ್ರಾಣ ಉಳಿಸಿತು. ಲಸಿಕೆ ಕಂಡುಹಿಡಿದಿದ್ದರಿಂದ ಹಾಗೂ ಅವರ ಮಾನವೀಯ ಕಾರ್ಯಗಳನ್ನು ಮೆಚ್ಚಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಹಸ್ತಕ್ಷೇಪದಿಂದಾಗಿ ಎರಡು ಬಾರಿ ಪ್ರಶಸ್ತಿಯನ್ನು ಸ್ವೀಕರಿಸಲಾಗಲಿಲ್ಲ. 1957ರಲ್ಲಿ ತಮ್ಮ ಕೊನೆಯುಸಿರು ಬಿಟ್ಟರು. ಬಳಿಕ 2003ರಲ್ಲಿ ಇಸ್ರೆಲ್ ಅವರಿಗೆ ರಾಷ್ಟ್ರಗಳಲ್ಲಿ ನೀತಿವಂತ ಎಂಬ ಬಿರುದು ನೀಡಿ ಗೌರವಿಸಿತು.

Source:Tv9kannada