Petrol Price ಶ್ರೀರಾಮನ ಭಾರತದಲ್ಲಿ ರೂ. 93, ಸೀತೆಯ ನೇಪಾಳದಲ್ಲಿ 53, ರಾವಣನ ಶ್ರೀಲಂಕಾದಲ್ಲಿ ಎಷ್ಟು ಗೊತ್ತಾ..!

Feb 2, 2021

Petrol Price ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ₹ 93 ಆದರೆ, ಸೀತೆಯ ನೇಪಾಳದಲ್ಲಿ ಪೆಟ್ರೋಲ್ ಬೆಲೆ ₹53. ಆದರೆ ರಾವಣನ ಲಂಕೆಯಲ್ಲಿ ಪೆಟ್ರೋಲ್ ಬೆಲೆ ಕೇವಲ ₹51 ಎಂದು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್​ಡಿ ಪಡೆದಿರುವ ಸುಬ್ರಮಣ್ಯ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ದಿನೇ ದಿನೇ ಹೆಚ್ಚಳವಾಗುತ್ತಿರುವ ಪೆಟ್ರೋಲ್ ಬೆಲೆಗೆ ಪ್ರೋತ್ಸಾಹ ನೀಡುವಂತೆ ನಿನ್ನೆಯ ಬಜೆಟ್​ನಲ್ಲೂ ಸೆಸ್ ವಿಧಿಸಲಾಗಿದೆ. ತೈಲಬೆಲೆಗಳಲ್ಲಿ ಏರಿಕೆ ಕುರಿತು ಸ್ವತಃ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿಯವರೇ ಕುಹಕವಾಡಿದ್ದಾರೆ. ಅದೂ ಪ್ರಾಚೀನ ರಾಮಾಯಣದ ಸಾದೃಶ ಉದಾಹರಣೆ ಇಟ್ಟುಕೊಂಡು ಅವರು ಕೇಂದ್ರ ಸರ್ಕಾರದ ನಡೆಗಳನ್ನು ನೇರಾನೇರವಾಗಿ ಟೀಕಿಸಿದ್ದಾರೆ.

ರಾಮನ ಭಾರತದಲ್ಲಿ Petrol Price ಪೆಟ್ರೋಲ್ ಬೆಲೆ ₹ 93 ಆದರೆ, ಸೀತೆಯ ನೇಪಾಳದಲ್ಲಿ ಪೆಟ್ರೋಲ್ ಬೆಲೆ ₹53. ಆದರೆ ರಾವಣನ ಲಂಕೆಯಲ್ಲಿ ಪೆಟ್ರೋಲ್ ಬೆಲೆ ಕೇವಲ ₹51 ಎಂದು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್​ಡಿ ಪಡೆದಿರುವ ಸುಬ್ರಮಣ್ಯ ಸ್ವಾಮಿ ವ್ಯಂಗ್ಯವಾಡಿದ್ದಾರೆ. ರಾಮ ಸೀತೆಯರ ಜನ್ಮಭೂಮಿಗಿಂತ ರಾವಣನ ಜನ್ಮಭೂಮಿಯಲ್ಲೇ ಪೆಟ್ರೋಲ್ ಬೆಲೆ ಅಧಿಕವಾಗಿದೆ ಎಂದು ಅವರು ಸೂಚಿಸಿದ್ದಾರೆ. ಇಂದಿನ ಅಂಕಿಅಂಶಗಳ ಪ್ರಕಾರ ನೇಪಾಳದ ₹1 ಭಾರತದ ₹ 0.63 ಭಾರತದ ಸಮವಾಗಿದ್ದು, ಶ್ರೀಲಂಕಾದ # 1 ಭಾರತದ ₹ 0.38 ಗೆ ಸರಿಸಮವಾಗಿದೆ.

ರಾಮನ ನಾಡು ಭಾರತದಲ್ಲೇ ತೈಲ ಬೆಲೆ ಅತಿ ಹೆಚ್ಚಾಗಿದೆ. ಸೀತೆ ಜನಿಸಿದ ನೇಪಾಳದಲ್ಲಿ ಭಾರತಕ್ಕಿಂತ ಬೆಲೆ ಕಡಿಮೆಯಿದೆ. ಆದರೆ. ರಾವಣನ ಜನ್ಮಭೂಮಿ ಶ್ರೀಲಂಕಾದಲ್ಲಿ ತೈಲ ಬೆಲೆ ಇನ್ನೂ ಕಡಿಮೆಯಿದೆ ಎಂದು ಛಾಟಿ ಬೀಸಿದ್ದಾರೆ ಮಾಜಿ ಕೇಂದ್ರ ಸಚಿವ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಲೇ ಇರುವ ಅವರ ಸ್ವಭಾವವನ್ನು ಇಲ್ಲಿ ಉಲ್ಲೇಖಿಸಬಹುದು.

 

Soue: TV9kannada