OnePlus 11 5G Marble Odyssey edition: ಒನ್ಪ್ಲಸ್ ಕಂಪನಿ ದಿಢೀರ್ ಆಗಿ ಒನ್ಪ್ಲಸ್ 11 ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಅನಾವರಣ ಮಾಡಿದೆ. ಇದು ವಿಶೇಷ ಆವೃತ್ತಿಯಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ.
ಪ್ರಸಿದ್ಧ ಕಂಪನಿ ಒನ್ಪ್ಲಸ್ (OnePlus) ಈಗೀಗ ತನ್ನ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವುದನ್ನು ಕಡಿಮೆ ಮಾಡಿದೆ. ಭಾರತದಲ್ಲಿ ತನ್ನ ಹೊಸ ನಾರ್ಡ್ ಸರಣಿಯನ್ನು ಘೋಷಣೆ ಮಾಡಿದ್ದಷ್ಟೆ ಬಿಟ್ಟರೆ ಇನ್ನೂ ಬಿಡುಗಡೆ ಆಗಿಲ್ಲ. ಒನ್ಪ್ಲಸ್ ಕಂಪನಿ ಈ ವರ್ಷ ಮೊದಲು ರಿಲೀಸ್ ಮಾಡಿದ್ದು ಒನ್ಪ್ಲಸ್ 11 5ಜಿ (OnePlus 11 5G) ಫೋನನ್ನು. ಇದು ದೇಶದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಹೀಗಿರುವಾಗ ಕಂಪನಿ ದಿಢೀರ್ ಆಗಿ ಒನ್ಪ್ಲಸ್ 11 ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಅನಾವರಣ ಮಾಡಿದೆ. ಇದು ವಿಶೇಷ ಆವೃತ್ತಿಯಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ. ಈ ಫೋನಿನ (Phone) ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಒನ್ಪ್ಲಸ್ 11 5G ಮಾರ್ಬಲ್ ಒಡಿಸ್ಸಿ ಆವೃತ್ತಿ ಸ್ಮಾರ್ಟ್ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 16GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 64,999 ರೂ. ನಿಗದಿ ಮಾಡಲಾಗಿದೆ. ಇದು ಇದೇ ಜೂನ್ 6 ರಿಂದ ಒನ್ಪ್ಲಸ್ ಇಂಡಿಯಾ ವೆಬ್ಸೈಟ್ನಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಏನು ಫೀಚರ್ಸ್?:
ಒನ್ಪ್ಲಸ್ 11 5G ಸ್ಮಾರ್ಟ್ಫೋನ್ 1,440×3,216 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಹೊಂದಿರುವ 6.7 ಇಂಚಿನ ಕ್ವಾಡ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಅಮೋಲೆಡ್ ಸ್ಕ್ರೀನ್ ಅಗಿದೆ. 1,000Hz ವರೆಗಿನ ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರುವುದು ವಿಶೇಷ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 13-ಆಧಾರಿತ OxygenOS 13 ಔಟ್-ಆಫ್-ದಿ-ಬಾಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್ ನೀಡಲಾಗಿದೆ. ಇದು ಅತ್ಯುತ್ತಮ ಕ್ವಾಲಿಟಿಯ ಫೋಟೋ ಸೆರೆ ಹಿಡಿಯುತ್ತದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಪಡೆದಿದೆ. ಹಾಗೆಯೆ ಮುಂಭಾಗ ಸೆಲ್ಫೀಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಒನ್ಪ್ಲಸ್ 11 ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ತಕ್ಕಂತೆ 100W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಆಗುತ್ತದೆ. ಉಳಿದಂತೆ 4G, Wi-Fi 7, ಬ್ಲೂಟೂತ್ 5.3, GPS , A-GPS, NFC, ಮತ್ತು USB 2.0 ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ನೀಡಲಾಗಿದೆ. ಒನ್ಪ್ಲಸ್ 11 5G ಜೊತೆಗೆ ಒನ್ಪ್ಲಸ್ 11R 5G ಸ್ಮಾರ್ಟ್ಫೋನ್ ಕೂಡ ಬಿಡುಗಡೆ ಆಗಿದೆ. ಇದರ ಆರಂಭಿಕ ಬೆಲೆ 39,999 ರೂ. ಆಗಿದ್ದು ಫೆಬ್ರವರಿ 28 ರಿಂದ ಖರೀದಿಗೆ ಸಿಗುತ್ತದೆ.