NEET UG Admit Card 2021: ನೀಟ್​ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್​ ಮಾಡಿಕೊಳ್ಳುವ ವಿಧಾನ ಹೀಗಿದೆ

Sep 7, 2021

ನೀಟ್​ ಪರೀಕ್ಷೆಯ (NEET UG Exam 2021) ಪ್ರವೇಶ ಪತ್ರವನ್ನು ನಿನ್ನೆ (ಸೆಪ್ಟೆಂಬರ್ 6) ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG Exam) ಬರೆಯಲಿರುವ ಪರೀಕ್ಷಾರ್ಥಿಗಳು ಎನ್​ಟಿಎ ನೀಟ್​ (NTA NEET)ನ ಅಧಿಕೃತ ವೆಬ್​ಸೈಟ್​ neet.nta.nic.in. ಮೂಲಕ ತಮ್ಮ ಪ್ರವೇಶ ಪತ್ರ (Admit Card)ವನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. ಅಂದಹಾಗೆ ನೀಟ್​ ಪರೀಕ್ಷೆ ಸೆಪ್ಟೆಂಬರ್​ 12ರಂದು ನಡೆಯಲಿದೆ.

ನೀಟ್​ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಅನೇಕ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನೀಟ್ ಪರೀಕ್ಷೆ ನಿಗದಿಪಡಿಸಿರುವ ಸಮಯದಲ್ಲೇ ಇನ್ನೂ ಬೇರೆ ಕೆಲವು ಪರೀಕ್ಷೆಗಳು ಇರುವುದರಿಂದ ನೀಟ್​ ಪರೀಕ್ಷೆ ಸದ್ಯ ಬೇಡ ಎಂದು ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೂ ನಡೆಸಿದ್ದರು. ಆದರೆ ಈ ಸಂಬಂಧ ನಿನ್ನೆ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ವಿದ್ಯಾರ್ಥಿಗಳ ಅರ್ಜಿಯನ್ನು ವಜಾಗೊಳಿಸಿದೆ. ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪಿನ ಬೆನ್ನಲ್ಲೇ ಎನ್​ಟಿಎ, ಪರೀಕ್ಷಾರ್ಥಿಗಳ ಪ್ರವೇಶ ಪತ್ರವನ್ನೂ ಬಿಡುಗಡೆ ಮಾಡಿದೆ.

ನೀಟ್​ ಪರೀಕ್ಷೆಯ ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ..
1.NTA NEETದ ಅಧಿಕೃತ ವೆಬ್​ಸೈಟ್​ neet.nta.nic.in.ಗೆ ಭೇಟಿ ನೀಡಿ
2. ನಿಮ್ಮ ಲಾಗಿನ್​ ಮಾಹಿತಿಗಳನ್ನು ಹಾಕಿ, ಸಬ್​ಮಿಟ್ (Submit)ಮಾಡಿ.
3. ಆಗ ಸ್ಕ್ರೀನ್​ ಮೇಲೆ ನಿಮ್ಮ ಪ್ರವೇಶ ಪತ್ರ (Admit Card) ಕಾಣಿಸಿಕೊಳ್ಳುತ್ತದೆ
4. ಪ್ರವೇಶ ಪತ್ರವನ್ನು ಒಮ್ಮೆ ಸರಿಯಾಗಿ ಪರಿಶೀಲನೆ ಮಾಡಿಕೊಂಡು ಡೌನ್​ಲೋಡ್ ಮಾಡಿಕೊಳ್ಳಿ.

ಪ್ರವೇಶ ಪತ್ರದ ಮೇಲೆ ಪರೀಕ್ಷೆಯ ದಿನಾಂಕ, ಸಮಯ, ಆಯಾ ಪರೀಕ್ಷಾರ್ಥಿಗಳ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಇರುತ್ತದೆ. ಪ್ರತಿ ಪರೀಕ್ಷಾರ್ಥಿಯೂ ಪರೀಕ್ಷೆಗೆ ಹೋಗುವಾಗ ಈ ಪ್ರವೇಶ ಪತ್ರ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿರುತ್ತದೆ ಎಂದು ಎನ್​ಟಿಎ ತಿಳಿಸಿದೆ.

ಈ ಬಾರಿ ಬರೋಬ್ಬರಿ 16 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ನೀಟ್-2021ರ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಈಗಾಗಲೇ NTA ಬಿಡುಗಡೆ ಮಾಡಿದೆ. ನೀವೇನಾದರೂ ನೀಟ್ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರೆ ನಿಮ್ಮ ಪರೀಕ್ಷಾ ಕೇಂದ್ರದ (NEET Exam Centre) ಬಗ್ಗೆ ಮಾಹಿತಿ ಪಡೆಯಲು ನೀಟ್‌ನ ಅಧಿಕೃತ ವೆಬ್‌ಸೈಟ್ neet.nta.nic.inಗೆ ಭೇಟಿ ನೀಡಬಹುದು.

Source:tv9kannada