ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಟ್ರೋಲ್ ಆದ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ

Jan 27, 2021

ಜೊತೆ ಜೊತೆಯಲಿ ನಾಯಕಿ ಮೇಘಾ ಶೆಟ್ಟಿ ಗಣರಾಜ್ಯೋತ್ಸವದಂದು ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿ ಟ್ರೋಲ್ ಆಗಿದ್ದಾರೆ.ಸೆಲೆಬ್ರಿಟಿಗಳೇ ಹಾಗೆ. ಸಣ್ಣ ಸಣ್ಣ ವಿಚಾರಕ್ಕೂ ಅವರು ಟ್ರೋಲ್​ ಆಗುತ್ತಾರೆ. ಅವರು ಹಾಕುವ ಪೋಸ್ಟ್​ಗಳನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ತಪ್ಪನ್ನು ಕಂಡರೆ ಅದನ್ನೇ ಹೈಲೈಟ್​ ಮಾಡುತ್ತಾರೆ.ಹೀಗೆ, ಪೋಸ್ಟ್​ ಹಾಕುವ ಭರದಲ್ಲಿ ಜೊತೆ ಜೊತೆಯಲ್ಲಿ ನಟಿ ಮೇಘಾ ಶೆಟ್ಟಿ ತಪ್ಪೊಂದನ್ನು ಮಾಡಿ, ಟ್ರೋಲ್​ ಆಗಿದ್ದಾರೆ.ಇಂದು ಗಣರಾಜ್ಯೋತ್ಸವ ದಿನ. ಆದರೆ, ನಟಿ ಮೇಘಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.ಮೇಘಾ ಹಾಕಿದ್ದ ಪೋಸ್ಟ್​.ಈ ವಿಚಾರ ಇಟ್ಟುಕೊಂಡು ಸಾಕಷ್ಟು ಜನರು ಟ್ರೋಲ್​ ಮಾಡಿದ್ದಾರೆ.ತಪ್ಪಿನ ಅರಿವಾದ ನಂತರ ಮೇಘಾ ಶೆಟ್ಟಿ ಹೊಸ ಪೋಸ್ಟ್​ ಹಾಕಿದ್ದಾರೆ.ಜೊತೆ ಜೊತೆಯಲಿ ಧಾರಾವಾಹಿ ಮೂಲಕವೇ ಮೇಘಾ ಗುರುತಿಸಿಕೊಂಡಿದ್ದಾರೆ.

Source: TV9 Kannada