Karnataka Lockdown News: ಲಾಕ್​ಡೌನ್​ ಹೇರುವ ಪರಿಸ್ಥಿತಿ ತರಬೇಡಿ.. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಲಸಿಕೆ ತೆಗೆದುಕೊಳ್ಳಿ : ಪ್ರತಾಪ್​ ಸಿಂಹ ಮನವಿ

Apr 12, 2021

ಪ್ರಸ್ತುತ ಮುಂಬೈನಲ್ಲಾಗಿರುವ ಪರಿಸ್ಥಿತಿಯನ್ನು ನೋಡಿ. ಕರ್ನಾಟಕಕ್ಕೆ ಹಾಗಾಗುವುದು ಬೇಡ. ಕೊರೊನಾ ಸೋಂಕು ವ್ಯಾಪಕವಾಗಿ ಹರಡದೇ ನಿಯಂತ್ರಣದಲ್ಲಿ ಇರಬೇಕೆಂದರೆ ಜನರು ಜಾಗರೂಕರಾಗಿರುವುದು ಬಹುಮುಖ್ಯ. ಹೀಗಾಗಿ ಸಾಧ್ಯವಾದಷ್ಟು ಎಚ್ಚರಿಕೆಯಿಂದಿರಬೇಕು: ಪ್ರತಾಪ್​ ಸಿಂಹ

ಮೈಸೂರು: ಕೊರೊನಾ ಎರಡನೇ ಅಲೆ ಬಗ್ಗೆ ಯಾವ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ಮಹಾರಾಷ್ಟ್ರದ ಪರಿಸ್ಥಿತಿ ಕರ್ನಾಟಕಕ್ಕೆ ಬರಬಾರದು ಎಂದರೆ ರಾಜ್ಯದ ಜನರು ಜಾಗೃತರಾಗಿರಲೇಬೇಕು. ಮತ್ತೆ ಲಾಕ್​ಡೌನ್​ ಮಾಡುವ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಬೇಡಿ. ದಯವಿಟ್ಟು ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಜಾಗ್ರತೆಯಿಂದಿರಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಕರ್ನಾಟಕದ ಜನತೆಗೆ ಮನವಿ ಮಾಡಿದ್ದಾರೆ.

ಇದೇವೇಳೆ ಜನರಿಗೆ ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಕರೆ ನೀಡಿರುವ ಪ್ರತಾಪ್ ಸಿಂಹ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ನಾನೂ ಲಸಿಕೆ ಪಡೆದಿದ್ದೇನೆ. ಹಾಗಂತ ಯಾವುದೇ ಔಷಧಿ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗುತ್ತೆ ಎಂದು ಹೇಳಲಾಗುವುದಿಲ್ಲ. ಕೊರೊನಾ ಲಸಿಕೆಯೂ ಕೆಲವರ ಮೇಲೆ ಅಡ್ಡಪರಿಣಾಮ ಬೀರಬಹುದು. ಆರೋಗ್ಯದಲ್ಲಿ ಬೇರೆ ಸಮಸ್ಯೆ ಇದ್ದವರಿಗೆ ಕೆಲ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಂತ ಹೆದರುವುದು ಬೇಡ. ಕೊರೊನಾವನ್ನು ಮಣಿಸಲು ಲಸಿಕೆ ಪಡೆಯಿರಿ ಎಂದು ಹೇಳಿದ್ದಾರೆ.

ಪ್ರಸ್ತುತ ಮುಂಬೈನಲ್ಲಾಗಿರುವ ಪರಿಸ್ಥಿತಿಯನ್ನು ನೋಡಿ. ಕರ್ನಾಟಕಕ್ಕೆ ಹಾಗಾಗುವುದು ಬೇಡ. ಕೊರೊನಾ ಸೋಂಕು ವ್ಯಾಪಕವಾಗಿ ಹರಡದೇ ನಿಯಂತ್ರಣದಲ್ಲಿ ಇರಬೇಕೆಂದರೆ ಜನರು ಜಾಗರೂಕರಾಗಿರುವುದು ಬಹುಮುಖ್ಯ. ಹೀಗಾಗಿ ಸಾಧ್ಯವಾದಷ್ಟು ಎಚ್ಚರಿಕೆಯಿಂದಿರಬೇಕು, ನಿರ್ಲಕ್ಷ್ಯ ತೋರಿಸಬಾರದು ಎಂದು ಕೇಳಿಕೊಂಡಿದ್ದಾರೆ.

 

Source: TV9Kannada